ಉಡುಪಿ: ಹುಬ್ಬಳ್ಳಿಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ನಾನ್ ಎ.ಸಿ ಸ್ಲೀಪರ್ ವಾಹನ

Spread the love

ಉಡುಪಿ, : ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಮಂಗಳೂರು ವಿಭಾಗದಿಂದ ಮಂಗಳೂರು-ಬೆಳಗಾವಿ ವಯಾ ಉಡುಪಿ, ಮಣಿಪಾಲ, ಕುಂದಾಪುರ, ಭಟ್ಕಳ, ಹೊನ್ನಾವರ ಕುಮುಟಾ, ಅಂಕೋಲ, ಹುಬ್ಬಳ್ಳಿ ಮಾರ್ಗದಲ್ಲಿ ನಾನ್ ಎ.ಸಿ ಸ್ಲೀಪರ್ ವಾಹನವನ್ನು ಪ್ರಯಾಣಿಕರ ಅನುಕೂಲಕ್ಕಾಗಿ ಜನವರಿ 31 ರಿಂದ ಪ್ರಾರಂಭಿಸಲಾಗುತ್ತಿದ್ದು ಪ್ರಯಾಣದರ ಈ ಮುಂದಿನಂತಿವೆ.
ಮಂಗಳೂರಿನಿಂದ ಬೆಳಗಾವಿಗೆ ರೂ.550, ಮಂಗಳೂರಿನಿಂದ ಧಾರವಾಡ ರೂ.525, ಮಂಗಳೂರಿನಿಂದ ಹುಬ್ಬಳ್ಳಿ 500, ಉಡುಪಿಯಿಂದ ಬೆಳಗಾವಿಗೆ ರೂ.500 ಮಣಿಪಾಲದಿಂದ ಬೆಳಗಾವಿಗೆ ರೂ.500 ಹಾಗೂ ಕುಂದಾಪುರದಿಂದ ಬೆಳಗಾವಿಗೆ ರೂ.490 ಆಗಿದ್ದು ಉಡುಪಿಯಿಂದ ಹೊರಡುವ ಸಮಯ ರಾತ್ರಿ 9.45 ಹಾಗೂ ಬೆಳಗಾವಿಯಿಂದ ಹೊರಡುವ ಸಮಯ ರಾತ್ರಿ 8 ಗಂಟೆ ಆಗಿರುತ್ತದೆ ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಮಂಗಳೂರು ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿಗಳ ಪ್ರಕಟಣೆ ತಿಳಿಸಿದೆ.


Spread the love