ಉಡುಪಿ : 4455 ಹೊಸ ಪಡಿತರ ಕಾರ್ಡು ವಿತರಣೆಗೆ ಸಿದ್ಧ

Spread the love

ಉಡುಪಿ:- ಆನ್ ಲೈನ್ನಲ್ಲಿ ಹೊಸ ಪಡಿತರ ಅರ್ಜಿ ಸಲ್ಲಿಸಿದವರ ಒಟ್ಟು 4455 ಕಾರ್ಡುಗಳು ಮುದ್ರಣವಾಗಿ ವಿತರಣೆಗೆ ಸಿದ್ಧವಾಗಿದೆ ಎಂದು ಆಹಾರ ಮತ್ತು ನಾಗರೀಕ ಸರಬರಾಜು ಮತ್ತು ಗ್ರಾಹಕ ವ್ಯವಹಾರ ಇಲಾಖೆ ಪ್ರಭಾರ ಉಪನಿರ್ದೇಶಕರಾದ ಯೋಗೇಶ್ವರ್ ತಿಳಿಸಿದ್ದಾರೆ.

ಪಡಿತರ ಅರ್ಜಿಗೆ ಆನ್ ಲೈನ್ನಲ್ಲಿ ಸ್ವೀಕರಿಸಲಾದ ಅರ್ಜಿಗಳಲ್ಲಿ 3323ಬಿಪಿಎಲ್ ಕಾರ್ಡುಗಳು ಮತ್ತು 1132 ಎಪಿಎಲ್ ಕಾರ್ಡು ಮುದ್ರಿಸಿ ವಿತರಣೆಗೆ ಸಿದ್ಧಪಡಿಸಲಾಗಿದೆ. ಈ ಸಂಬಂಧ ಮಾಹಿತಿಯನ್ನು ಗ್ರಾಮ ಪಂಚಾಯತು ಮತ್ತು ನ್ಯಾಯಬೆಲೆ ಅಂಗಡಿಗಳಲ್ಲಿ ಪ್ರಕಟಿಸಲಾಗಿದೆ.

ಗ್ರಾಮಾಂತರ ಪ್ರದೇಶದವರು ಗ್ರಾಮಪಂಚಾಯಿತಿಯಲ್ಲಿ ಮತ್ತು ನ್ಯಾಯಬೆಲೆ ಅಂಗಡಿಗಳಲ್ಲಿ ನಗರ ಪ್ರದೇಶದವರು ತಾಲೂಕು ಕಚೇರಿಯಲ್ಲಿ ಬೆರಳಚ್ಚು ನೀಡಿ 30 4.15ರೊಳಗೆ ಪಡೆದುಕೊಳ್ಳಲು ಕೋರಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಬಿಪಿಎಲ್ ಗೆ ಸಂಬಂಧಿಸಿದಂತೆ ಒಟ್ಟು 62876 ಅರ್ಜಿಗಳು, ಎಪಿಎಲ್ 13877 ಒಟ್ಟು 76753 ಅರ್ಜಿಗಳು ಸ್ವೀಕೃತವಾಗಿದೆ. ಒಟ್ಟು 65225 ಒಟ್ಟು ವಿಲೇ ಮಾಡಲಾಗಿದೆ.


Spread the love