ಉತ್ತಮ ತಾಯಿಯಿಂದ ಆರೋಗ್ಯಕರ ಸಮಾಜ ನಿರ್ಮಾಣ ಸಾಧ್ಯ : ಅತಿ ವಂ ಡಾ ಜೆರಾಲ್ಡ್ ಐಸಾಕ್ ಲೋಬೊ

Spread the love

ಉತ್ತಮ ತಾಯಿಯಿಂದ ಆರೋಗ್ಯಕರ ಸಮಾಜ ನಿರ್ಮಾಣ ಸಾಧ್ಯ : ಅತಿ ವಂ ಡಾ ಜೆರಾಲ್ಡ್ ಐಸಾಕ್ ಲೋಬೊ

ಉಡುಪಿ: ಉತ್ತಮ ತಾಯಿಯಿಂದ ಆರೋಗ್ಯಕರ ಸಮಾಜ ಹಾಗೂ ದೇಶದ ನಿರ್ಮಾಣ ಸಾಧ್ಯವಿದೆ ಎಂದು ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತಿ ವಂ ಡಾ ಜೆರಾಲ್ಡ್ ಐಸಾಕ್ ಲೋಬೊ ಹೇಳಿದರು.

ಅವರು ಸೋಮವಾರ ಕನ್ನರಪಾಡಿ ಸಂತ ಮೇರಿ ಶಾಲೆಯಲ್ಲಿ ಜರುಗಿದ ಉಡುಪಿ ಧರ್ಮಪ್ರಾಂತ್ಯ ಮಟ್ಟದ ತಾಯಂದಿರ ದಿನಾಚರಣೆ ಕಾರ್ಯಕ್ರಮದ ಸಭಾಧ್ಯಕ್ಷತೆ ವಹಿಸಿ ಮಾತನಾಡಿದರು.

image001mothers-day-udupi-diocese-20160509 image007mothers-day-udupi-diocese-20160509 image009mothers-day-udupi-diocese-20160509 image012mothers-day-udupi-diocese-20160509 image016mothers-day-udupi-diocese-20160509 image018mothers-day-udupi-diocese-20160509 image022mothers-day-udupi-diocese-20160509 image023mothers-day-udupi-diocese-20160509 image025mothers-day-udupi-diocese-20160509 image027mothers-day-udupi-diocese-20160509 image029mothers-day-udupi-diocese-20160509 image030mothers-day-udupi-diocese-20160509

ಜಗತ್ತಿನಲ್ಲಿ ತಾಯಿಗೆ ಮೀರಿದ ಪ್ರೀತಿ ಮತ್ತೊಂದಿಲ್ಲ. ತಾಯಿಯು ನೀಡಿದ ಪ್ರೀತಿಗೆ ಇಂದಿಗೂ ಬೆಲೆ ಕಟ್ಟಲು ಸಾಧ್ಯವಿಲ್ಲ. ಒಂದು ಉತ್ತಮ ಸಂಸ್ಕಾರಭರಿತ ತಾಯಿ ತನ್ನ ಮಕ್ಕಳಿಗೆ ಕೂಡ ಉತ್ತಮ ಸಂಸ್ಕಾರವನ್ನೇ ಕಲಿಸುತ್ತಾಳೆ. ಒಂದು ದೇಶ ಸಮಾಜ ಅಥವಾ ಧರ್ಮಸಭೆಯ ಏಳಿಗೆ ತಾಯಿಯ ಮೇಲೆ ನಿಂತಿದೆ ಎನ್ನುವುದನ್ನು ಮರೆಯುವಂತಿಲ್ಲ. ತಾಯಿಯ ಉತ್ತಮ ಸಂಸ್ಕಾರ ಉತ್ತಮ ನಾಗರಿಕ ಸಮಾಜಕ್ಕೆ ಮಾದರಿ ಎಂದು ಅವರು ಹೇಳಿದರು.

ಮುಖ್ಯ ಭಾಷಣಕಾರರಾಗಿ ಆಗಮಿಸಿದ ಮಂಗಳೂರು ಸಂತ ಅಲೋಶಿಯಸ್ ಕಾಲೇಜಿನ ಮಾಜಿ ಉಪಪ್ರಾಂಶುಪಾಲೆ ಹಾಗೂ ಕೌಟಂಬಿಕ ಸಲಹೆಗಾರ್ತಿ ಡಾ ಜೂಡಿ ಪಿಂಟೊ ಮಾತನಾಡಿ ತಾಯಿ ಎಂದರೆ ತಾಳ್ಮೆ ಹಾಗೂ ಸಹನೆಗೆ ಮತ್ತೊಂದು ಹೆಸರು. ತನ್ನ ಮಕ್ಕಳನ್ನು ಯಾವುದೇ ಷರತ್ತುಗಳಿಲ್ಲದೆ ಪ್ರೀತಿಸುವ ವ್ಯಕ್ತಿಎಂದರೆ ತಾಯಿ. ಆದ್ದರಿಂದ ತಾಯಿ ತನ್ನ ಮಕ್ಕಳಿಗೆ ಸದಾ ಮಾದರಿಯಾಗುವ ಜೀವನವನ್ನು ನಡೆಸುವುದರಿಂದ ತಮ್ಮ ಮಕ್ಕಳು ದೇಶದ ಉತ್ತಮ ನಾಗರಿಕರಾಗಲು ಸಾಧ್ಯವಿದೆ ಎಂದರು.

image032mothers-day-udupi-diocese-20160509 image035mothers-day-udupi-diocese-20160509 image036mothers-day-udupi-diocese-20160509 image042mothers-day-udupi-diocese-20160509 image044mothers-day-udupi-diocese-20160509 image045mothers-day-udupi-diocese-20160509 image046mothers-day-udupi-diocese-20160509 image047mothers-day-udupi-diocese-20160509 image048mothers-day-udupi-diocese-20160509 image049mothers-day-udupi-diocese-20160509 image050mothers-day-udupi-diocese-20160509 image052mothers-day-udupi-diocese-20160509

ಉಡುಪಿ ಧರ್ಮಪ್ರಾಂತ್ಯದ ಕೌಟಂಬಿಕ ಆಯೋಗದ ಆಧ್ಯಾತ್ಮಿಕ ನಿರ್ದೇಶಕ ವಂ ಚೇತನ್ ಲೋಬೊ ಅವರು ಮಾತನಾಡಿ ತಾಯಿಯಾದವಳು ತನ್ನ ಮಕ್ಕಳ ಪ್ರತಿಯೊಂದು ಭಾವನೆಗಳನ್ನು ಕೇಳದೆಯೇ ತಿಳಿದುಕೊಳ್ಳುವ ಒಂದು ವಿಶಿಷ್ಟ ಶಕ್ತಿಯಾಗಿದ್ದಾಳೆ. ತಾಯಿ ಎಂದರೆ ಒಂದು ಲ್ಯಾಪ್ ಟಾಪ್ ಇದ್ದಂತೆ. ಹೇಗೆ ಲ್ಯಾಪ್ ಟಾಪ್‍ನ್ನು ನಮ್ಮ ಮಡಿಲಲ್ಲಿ ಇಟ್ಟುಕೊಂಡು ನಮ್ಮ ಕೆಲಸವನ್ನು ನಿರ್ವಹಿಸುತ್ತೇವೆಯೋ ಅಂತೆ ತಾಯಿಯಾದವಳು ತನ್ನ ಮಕ್ಕಳನ್ನು ತನ್ನ ಮಡಿಲಲ್ಲಿ ಇಟ್ಟುಕೊಂಡು ಅವರಿಗೆ ಉತ್ತಮ ಗುಣಗಳನ್ನು ಕಲಿಸುತ್ತಾಳೆ. ತಾಯಿಯಾದವಳು ಕಲಿಸಿದ ಉತ್ತಮ ಗುಣಗಳಿಂದ ತನ್ನ ಮಗು ಸಮಾಜದಲ್ಲಿ ಉತ್ತಮ ವ್ಯಕ್ತಿಯಾಗಲು ಸಾಧ್ಯ. ಅಂತಹ ತಾಯಿಯ ಋಣವನ್ನು ಯಾರಿಂದಲೂ ತೀರಿಸಲು ಅಸಾಧ್ಯವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಧರ್ಮಪ್ರಾಂತ್ಯದ ವ್ಯಾಪ್ತಿಯ 50 ಚರ್ಚುಗಳಿಂದ ಅತಿ ಹೆಚ್ಚು ಸಂಖ್ಯೆಯಲ್ಲಿ ಆಗಮಿಸಿದ ಚರ್ಚುಗಳಾದ ಕುಂತಳನಗರ, ತೊಟ್ಟಾಂ ಹಾಗೂ ಕೊಳಲಗಿರಿ ಚರ್ಚುಗಳನ್ನು ಗುರುತಿಸಿ ಗೌರವಿಸಲಾಯಿತು. ನಾಲ್ಕು ಮಕ್ಕಳಿಗಿಂತ ಹೆಚ್ಚು ಮಕ್ಕಳನ್ನು ಹೊಂದಿದ ತಾಯಂದಿರನ್ನು ಸಹ ಇದೇ ಸಂದರ್ಭದಲ್ಲಿ ಗುರುತಿಸಿ ಗೌರವಿಸಲಾಯಿತು.

ಕಾರ್ಯಕ್ರಮವನ್ನು ನಾಲ್ಕು ಮಂದಿ ತಾಯಂದಿರು ದೀಪಬೆಳಗಿಸುವುದರೊಂದಿಗೆ ಉದ್ಘಾಟಿಸಲಾಯಿತು. ಧರ್ಮಪ್ರಾಂತ್ಯದ ಕುಟುಂಬ ಆಯೋಗದ ವತಿಯಿಂದ ಪ್ರಕಟಿಸಲಾದ ಜಿವಿತ್ ಆನಿ ಉಜ್ವಾಡ್ ಪುಸ್ತಕದ ಲೇಖಕರಾದ ಪ್ರೋ ಆಲ್ಬನ್ ರೊಡ್ರಿಗಸ್ ಇವರನ್ನು ಧರ್ಮಾಧ್ಯಕ್ಷರು ಸನ್ಮಾನಿಸಿದರು. ಕಾರ್ಯಕ್ರಮದಲ್ಲಿ ಧರ್ಮಪ್ರಾಂತ್ಯ ವ್ಯಾಪ್ತಿಯ 900 ಕ್ಕೂ ಅಧಿಕ ತಾಯಂದಿರು ಭಾಗವಹಸಿದ್ದರು

ಕಾರ್ಯಕ್ರಮದಲ್ಲಿ ಉಡುಪಿ ಧರ್ಮಪ್ರಾಂತ್ಯದ ವಿಕಾರ್ ಜನರಲ್ ವಂ ಮೊನ್ಸಿಂಜ್ಞೊರ್ ಬ್ಯಾಪ್ಟಿಸ್ಟ್ ಮಿನೇಜಸ್, ಕೆಥೊಲಿಕ್ ಶಿಕ್ಷಣ ಸೊಸೈಟಿ ಇದರ ಕಾರ್ಯದರ್ಶಿ ವಂ ಲಾರೆನ್ಸ್ ಡಿ’ಸೋಜಾ, ಧರ್ಮಪ್ರಾಂತ್ಯದ ಪಾಲನ ಮಂಡಳಿ ಕಾರ್ಯದರ್ಶಿ ಆಲ್ಪೋನ್ಸ್ ಡಿಕೋಸ್ತಾ, ಸಾರ್ವಜನಿಕ ಸಂಪರ್ಕಾಧಿಕಾರಿ ವಂ ಡೆನಿಸ್ ಡೆಸಾ, ತೊಟ್ಟಾ ಚರ್ಚಿನ ವಂ ಪ್ರೆಡ್ರಿಕ್ ಡಿಸೋಜಾ, ಉಡುಪಿ ವಲಯ ಪ್ರಧಾನ ಧರ್ಮಗುರು ವಂ ಫ್ರೆಡ್ ಮಸ್ಕರೇನ್ಹಸ್, ಎವ್ಜಿನ್ ಕ್ವಾಡ್ರಸ್ ಉಪಸ್ಥಿತರಿದ್ದರು. ಧರ್ಮಪ್ರಾಂತ್ಯದ ಕುಟುಂಬ ಆಯೋಗದ ನಿರ್ದೇಶಕ ಲೆಸ್ಲಿ ಆರೋಜಾ ಸ್ವಾಗತಿಸಿ ಧನ್ಯವಾದವನ್ನಿತ್ತರು.


Spread the love