ಉಪ್ಪಿನಂಗಡಿ: ವಿದ್ಯುತ್ ಆಘಾತ, ಮೆಸ್ಕಾಂ ಸಿಬ್ಬಂದಿ ಸಾವು

ಉಪ್ಪಿನಂಗಡಿ: ವಿದ್ಯುತ್ ಆಘಾತ, ಮೆಸ್ಕಾಂ ಸಿಬ್ಬಂದಿ ಸಾವು

ಉಪ್ಪಿನಂಗಡಿ: ವಿದ್ಯುತ್ ಪರಿವರ್ತಕದಲ್ಲಿ ಚಾಲನೆ ಕೊಡುತ್ತಿದ್ದ ಸಂದರ್ಭ ಮೆಸ್ಕಾಂ ಪವರ್ಮೆನ್ ಬುಧವಾರ ಆಕಸ್ಮಿಕವಾಗಿ ವಿದ್ಯುತ್ ಹರಿದು ಮೃತಪಟ್ಟಿದ್ದಾರೆ.

34-ನೆಕ್ಕಿಲಾಡಿ ಗ್ರಾಮದ ಬೇರಿಕೆ ಎಂಬಲ್ಲಿ ಸಂಭವಿಸಿದ ವಿದ್ಯುತ್ ಆಘಾತದಲ್ಲಿ ಉಪ್ಪಿನಂಗಡಿ ಮೆಸ್ಕಾಂ ಶಾಖೆಯಲ್ಲಿ ಪವರ್ಮೆನ್ ಆಗಿರುವ ದಾವಣಗೆರೆಯ ಮೀಟ್ಯಾ ನಾಯಕ್ (35) ಮೃತರು.

ಮೀಟ್ಯಾ ನಾಯಕ್ ಮೈನ್‌ ಲೈನ್ ದುರಸ್ತಿಯ ಸಲುವಾಗಿ ಬೇರಿಕೆಯ ಪೊಲೀಸ್ ವಸತಿ ಗೃಹದ ಬಳಿ ವಿದ್ಯುತ್ ಸಂಪರ್ಕ ಕಡಿತ ಮಾಡಿದ್ದರು. ದುರಸ್ತಿ ಬಳಿಕ ಸಂಪರ್ಕ ಕಲ್ಪಿಸಲು ವಿದ್ಯುತ್ ಪರಿವರ್ತಕದಲ್ಲಿ ಚಾಲನೆ ಕೊಡುತ್ತಿದ್ದಂತೆಯೇ ಇವರ ಮೇಲೆ ವಿದ್ಯುತ್ ಹರಿದಿದ್ದು, ಕುಸಿದು ಬಿದ್ದು ಅಸ್ವಸ್ಥಗೊಂಡರು. ಸ್ಥಳೀಯರು ಅಲ್ಲಿಗೆ ಬಂದು ಅವರನ್ನು ಅಂಬುಲನ್ಸ್‌ನಲ್ಲಿ ಪುತ್ತೂರು ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದರು. ಆದರೆ ಅಷ್ಟರಲ್ಲಾಗಲೇ ಮಿಟ್ಯಾ ನಾಯಕ್ ಮೃತಪಟ್ಟಿದ್ದರು.

 ಇವರಿಗೆ ಮೃತರು ಪತ್ನಿ, ಪುತ್ರಿ ಇದ್ದಾರೆ.