ಉಳ್ಳಾಲ: ಕಂಪೌಂಡ್ ಗೋಡೆ ಕುಸಿದು ಮನೆ ಮೇಲೆ ಬಿದ್ದು ಮಕ್ಕಳು ಸಹಿತ ನಾಲ್ವರು ಬಲಿ

Spread the love

ಉಳ್ಳಾಲ: ಕಂಪೌಂಡ್ ಗೋಡೆ ಕುಸಿದು ಮನೆ ಮೇಲೆ ಬಿದ್ದು ಮಕ್ಕಳು ಸಹಿತ ನಾಲ್ವರು ಬಲಿ

ಉಳ್ಳಾಲ: ತಾಲೂಕಿನ ಮುನ್ನೂರು ಗ್ರಾಮದ ಮದನಿ ನಗರ ಎಂಬಲ್ಲಿ ಬುಧವಾರ ಬೆಳಗ್ಗೆ ಮನೆಯ ಹಿಂಬದಿಯಲ್ಲಿದ್ದ ಕಂಪೌಂಡ್ ಮನೆಯ ಮೇಲೆ ಕುಸಿದು ಬಿದ್ದ ಪರಿಣಾಮ ಒಂದೇ ಕುಟುಂಬದ ನಾಲ್ವರು ದಾರುಣವಾಗಿ ಸಾವನ್ನಪ್ಪಿರುವ ಬಗ್ಗೆ ವರದಿಯಾಗಿದೆ.

ಮನೆಯೊಳಗೆ ವಾಸ್ತವ್ಯವಿದ್ದ ಯಾಸಿರ್(45),ಅವರ ಪತ್ನಿ ಮರಿಯಮ್ಮ(40) ಮಕ್ಕಳಾದ ರಿಯಾನ ಮತ್ತು ರಿಫಾನ ಮೃತ ದುರ್ದೈವಿಗಳು.

 ಸ್ಥಳಕ್ಕೆ ಅಧಿಕಾರಿಗಳು ದೌಡಾಯಿಸಿದ್ದು, ರಕ್ಷಣ ಕಾರ್ಯಾಚರಣೆ ನಡೆಸಿ  ಶವಗಳನ್ನು ಹೊರ ತೆಗೆಯಲಾಗಿದೆ.

ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅವಘಡ ಸಂಭವಿಸಿದೆ. ಅಬೂಬಕ್ಕರ್ ಎಂಬವರಿಗೆ ಸಂಬಂಧಿಸಿದ ಕಂಪೌಂಡ್ ಕುಸಿದು ದುರಂತ ಸಂಭವಿಸಿದೆ ಎಂದು ತಿಳಿದು ಬಂದಿದೆ.


Spread the love