ಉಳ್ಳಾಲ: ಕುಖ್ಯಾತ ಡ್ರಗ್ ಪೆಡ್ಲರ್ ಬಂಧನ

Spread the love

ಉಳ್ಳಾಲ: ಕುಖ್ಯಾತ ಡ್ರಗ್ ಪೆಡ್ಲರ್ ಬಂಧನ

ಮಂಗಳೂರು: ನಗರದ ಪೊಲೀಸ್ ಆಯುಕ್ತರಾದ ಅನುಪಮ್ ಅಗರ್ವಾಲ್ (ಐಪಿಎಸ್) ರವರ ನಿರ್ದೇಶನದಂತೆ, ಮಂಗಳೂರು ನಗರದ ಉಪ-ಪೊಲೀಸ್ ಆಯುಕ್ತರು ಸಿದ್ಧಾರ್ಥ ಗೋಯಲ್, ದಿನೇಶ್ ಕುಮಾರ್ ರವರ ಮಾರ್ಗದರ್ಶನದಂತೆ ಮಂಗಳೂರು ದಕ್ಷಿಣ ಉಪ-ವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ಧನ್ಯ.ವಿ.ನಾಯಕ್, ಮಂ.ದ.ಉ.ವಿಭಾಗ ರವರ ನೇತೃತ್ವದಲ್ಲಿ ದಿನಾಂಕ.4-12-2023 ರಂದು ಉಳ್ಳಾಲ ತಾಲೂಕು ಪೆರ್ಮನ್ನೂರು ಗ್ರಾಮದ ಸಂತೋಷನಗರ ಸಾರ್ವಜನಿಕ ರಸ್ತೆಯ ಬದಿಯಲ್ಲಿ ನಿಷೇದಿತ ಮಾದಕ ವಸ್ತು ಸುಮಾರು 132 ಗ್ರಾಂ ತೂಕದ Methamphetamine ಮತ್ತು 250 LSD ಸ್ಟ್ಯಾಂಪ್ ಡ್ರಗ್ನ್ನು, ಅಕ್ರಮವಾಗಿ ಸಾಗಾಟ ಮಾಡಿ ಮಾರಾಟ ಮಾಡಲು ಬಂದಿದ್ದ ಶಿಶಿರ್ ದೇವಾಡಿಗ ಮತ್ತು ಶುಶಾನ್.ಎಲ್. ರವರನ್ನು ಪತ್ತೆ ಮಾಡಿದ್ದಾರೆ

ಇವರಿಗೆ ಮಾದಕ ವಸ್ತುವನ್ನು ನೀಡಿರುವ ತಲೆಮರೆಸಿಕೊಂಡಿರುವ ಕುಖ್ಯಾತ ಹಾಗೂ ಡ್ರಗ್ ಪೆಡ್ಲರ್ ಆರೋಪಿ ಆಶಿತ್ @ ಅಶ್ವಿತ್ @ ಆಶು ಎಂಬಾತನನ್ನು ದಿನಾಂಕ. 11-12-2023 ರಂದು ಕೋಟೆಕಾರು ಗ್ರಾಮದ ಮಾಡೂರು ಸಾಯಿ ಮಂದಿರದ ಸಮೀಪದ ಗ್ರೌಂಡ್ ಬಳಿ ಪತ್ತೆ ಮಾಡಿದ್ದು, ಈತನ ವಶದಲ್ಲಿ ದೊರೆತ 1)ಸುಮಾರು 100 ಗ್ರಾಂ ತೂಕದ ಎಂ.ಡಿ.ಎಂ.ಎ (ಮೌಲ್ಯ ರೂ.6,00,000) 2)ಸುಮಾರು 600 ಗ್ರಾಂ ತೂಕದ ಗಾಂಜ (ಮೌಲ್ಯ ರೂ.30,000/-) 3)ಕೆಎ-19-ಇಯು-6101 ನೇ ಕೆಟಿಎಂ ಡ್ಯೂಕ್ ಮೋಟಾರು ಸೈಕಲ್ (ಮೌಲ್ಯ ರೂ.1,00,000/-) ಮತ್ತಿತರ ಸೊತ್ತುಗಳು ಸೇರಿ ಒಟ್ಟು ಅಂದಾಜು ಮೌಲ್ಯ ರೂ.7,77,000-00 ಸೊತ್ತುಗಳನ್ನು ಈತನ ವಶದಿಂದ ವಶಪಡಿಸಿಕೊಳ್ಳಲಾಗಿದೆ.


ಈ ಧಾಳಿಯಲ್ಲಿ ಉಳ್ಳಾಲ ಠಾಣಾ ಪೊಲೀಸ್ ನಿರೀಕ್ಷಕರಾದ ಬಾಲಕೃಷ್ಣ.ಹೆಚ್.ಎನ್, ಉಳ್ಳಾಲ ಠಾಣಾ ಪಿಎಸ್ಐರವರುಗಳಾದ ಶೀತಲ್ ಅಲಗೂರ ಮತ್ತು, ಸಂತೋಷಕುಮಾರ್.ಡಿ. ಹಾಗೂ ಸಹಾಯಕ ಪೊಲೀಸ್ ಆಯುಕ್ತರು, ಮಂಗಳೂರು ದಕ್ಷಿಣ ಉಪ-ವಿಭಾಗದ Anti-Drug Team ಪಿಎಸ್ಐ ಪುನಿತ್ ಗಾಂವ್ಕರ್, ಹಾಗೂ ಸಿಬ್ಬಂದಿಗಳಾದ ಹೆಡ್ಕಾನ್ಸ್ಟೇಬಲ್ಗಳಾದ ಸಾಜು ನಾಯರ್, ಮಹೇಶ್, ಸಿಬ್ಬಂದಿಗಳಾದ ಶಿವಕುಮಾರ್, ಅಕ್ಬರ್ ಯಡ್ರಾಮಿ ರವರು ಭಾಗವಹಿಸಿರುತ್ತಾರೆ.


Spread the love