ಉಳ್ಳಾಲ ಪಂಡಿತ್ ಹೌಸ್ ಶಿವಾಜಿನಗರದ ವಿವಿಧ ರಸ್ತೆಗಳ ಕಾಂಕ್ರೀಟೀಕರಣಕ್ಕೆ ಸಚಿವ ಯುಟಿಖಾದರ್ ಶಿಲಾನ್ಯಾಸ

Spread the love

ಉಳ್ಳಾಲ ಪಂಡಿತ್ ಹೌಸ್ ಶಿವಾಜಿನಗರದ ವಿವಿಧ ರಸ್ತೆಗಳ ಕಾಂಕ್ರೀಟೀಕರಣಕ್ಕೆ ಸಚಿವ ಯುಟಿಖಾದರ್ ಶಿಲಾನ್ಯಾಸ

ಉಳ್ಳಾಲ: ಜಿಲ್ಲಾ ಉಸ್ತುವಾರಿ ಸಚಿವ ಯುಟಿಖಾದರ್ ಅವರು ಉಳ್ಳಾಲ ನಗರ ಸಭಾ ವ್ಯಾಪ್ತಿಯ 20ನೇ ವಾರ್ಡಿನ ಪಂಡಿತ್ ಹೌಸ್ ಶಿವಾಜಿನಗರದ ವಿವಿಧ ರಸ್ತೆಗಳ ಕಾಂಕ್ರೀಟೀಕರಣಕ್ಕೆ 50ಲಕ್ಷ ವಿಶೇಷ ಅನುದಾನ ನೀಡಿದ್ದು ಇದರ ಶಿಲಾನ್ಯಾಸ ಮತ್ತು ಉಳ್ಳಾಲ ನಗರ ಸಭೆಗೆ ಆಯ್ಕೆಯಾದ ಕುಮಾರಿ ಭಾರತಿ ಮತ್ತು ದೀಕ್ಷಿತಾ ಅವರಿಗೆ ಅಭಿನಂದನಾ ಸಭೆ ಪಂಡಿತ್ ಹೌಸ್ ಜಂಕ್ಷನ್ ನಲ್ಲಿ ನಡೆಯಿತು.

ಕಾರ್ಯ ಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವ ಯುಟಿಖಾದರ್ ಅವರು ದೀಪ ಬೆಳಗಿಸಿ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಕಳೆದ 15 ವರ್ಷದ ಹಿಂದೆ ಈ ವಾರ್ಡಿನಲ್ಲಿ ನಮ್ಮ ಪಕ್ಷದ ಸದಸ್ಯರಿರಲಿಲ್ಲ, ಆದರೆ ಇದೀಗ ಪಂಡಿತ್ ಹೌಸ್,ಶಿವಾಜಿ ನಗರ, ನಿತ್ಯಾಧರ್ ನಗರದ ಗಲ್ಲಿ ಗಲ್ಲಿಗೂ ರಸ್ತೆ ಕಾಂಕ್ರೀಕರಣ ಮತ್ತು ಡಾಮರೀಕರಣವಾಗಿದೆ. ಇದು ಕಾಂಗ್ರೆಸ್ ನಿಂದ ಮಾತ್ರ ಸಾದ್ಯ,ನೀವು ಕೊಟ್ಟ ಮತಕ್ಕೆ ಗೌರವದಿಂದ ಕೆಲಸ ಮಾಡುತ್ತೇವೆ ಎಂದರು.

ಇದೇ ಸಂದರ್ಭದಲ್ಲಿ ಕರ್ನಾಟಕ ಸರಕಾರದ ನಗರಾಭಿವೃದ್ಧಿ ಮತ್ತು ವಸತಿ ಖಾತೆ ಸಚಿವ ಯು.ಟಿ. ಖಾದರ್,ಮತ್ತು ಉಳ್ಳಾಲ ನಗರ ಸಭೆಗೆ ಆಯ್ಕೆಯಾದ ಕುಮಾರಿ ಭಾರತಿ ಮತ್ತು ಕುಮಾರಿ ದೀಕ್ಷಿತಾ, ಕಳೆದ 25ವರ್ಷದಿಂದ ಈ ವಾರ್ಡಿನಲ್ಲಿ ನೀರು ಪೂರೈಸುತ್ತಿರುವ ರಾಮಣ್ಣ,ಜಿಲ್ಲಾ ಉಸ್ತುವಾರಿ ಸಚಿವರ ಆಪ್ತ ಸಹಾಯಕ ಲಿಬ್ಝತ್ ಅವರನ್ನು ಸನ್ಮಾನಿಸಲಾಯಿತು.

ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ,ಮಹಿಳಾ ಅಧ್ಯಕ್ಷೆ ದೇವಕಿ ಉಳ್ಳಾಲ್, ಉಪಾಧ್ಯಕ್ಷ ಸುರೇಶ್ ಭಟ್ನಗರ, ಮುಸ್ತಫ ಹರೇಕಳ, ಪ್ರಧಾನ ಕಾರ್ಯದರ್ಶಿ ರಹ್ಮಾನ್ ಕೋಡಿಜಾಲ್,ಜಿಲ್ಲಾ ಕಾಂಗ್ರೆಸ್ ಸದಸ್ಯ ಶ್ರೀನಿವಾಸ ಶೆಟ್ಟಿ, ಸಂಘಟನಾ ಕಾರ್ಯದರ್ಶಿ ಸಲೀಂ ಮೇಗಾ, ಉಳ್ಳಾಲ ನಗರಸಭಾ ಸದಸ್ಯರಾದ ಬಾಝಿಲ್ ಡಿಸೋಜ,ಯು.ಪಿ.ಅಯ್ಯೂಬ್,ಸಪ್ನಾ ಹರೀಶ್, ಉಳ್ಳಾಲ ನಗರಸಭಾ ಮಾಜಿ ಅzಕ್ಷÀ್ಷ ಹುಸೈನ್ ಕುಂಞÂ ಮೋನು, ಮಾಜಿ ಸದಸ್ಯರಾದ ದಿನೇಶ್ ರೈ,ಉಳ್ಳಾಲ ಪುರಸಭೆಯ ಮಾಜಿ ಸದಸ್ಯ ಸುಹಾಸಿನಿ ಬಬ್ಬುಕಟ್ಟೆ, ಗ್ರಾಮ ಚಾವಡಿ ಬ್ರಹ್ಮಶ್ರೀ ನಾರಾಯಣ ಗುರು ಮಂದಿgದsÀ ಮಾಜಿ ಅಧ್ಯಕ್ಷ ರಾಘವ ಪೂಜಾರಿ, ರಿಚರ್ಡ್ ಡಿಸೋಜ, ಸಭೆಸ್ಟಿಯನ್ ಲೋಪೇಜ್, ಸತೀಶ್,ರಹ್ಮತ್ ದಾರಂದ ಬಾಗಿಲು,ಮೊಹಮ್ಮದ್ ಅಡ್ಕರೆ ಉಪಸ್ಥಿತರಿದ್ದರು.
ರೋಹಿತ್ ಉಳ್ಳಾಲ್ ಕಾರ್ಯಕ್ರಮ ನಿರೂಪಿಸಿದರು.


Spread the love