ಉಳ್ಳಾಲ: ಯುವತಿ ನಾಪತ್ತೆ

Spread the love

ಉಳ್ಳಾಲ: ಯುವತಿ ನಾಪತ್ತೆ

ಮಂಗಳೂರು: ಉಳ್ಳಾಲ ತಾಲೂಕು ಕೊಣಾಜೆ ಗ್ರಾಮದ ನಡುಪದವು ಗ್ರಾಮದ ಯುವತಿ ಅಫ್ರಿನಾ ಪ್ರಾಯ (20) ರವರು ಕಾಣೆಯಾದ ಬಗ್ಗೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಫ್ರಿನಾ ಪ್ರಾಯ (20) ವರ್ಷ ರವರು 30-10-2023 ರಂದು ಸಂಜೆ 3.30 ಗಂಟೆಗೆ ಅಬ್ದುಲ್ ಖಾದರ್ ಎಂಬವರ ಬಿಡಾರ ಮನೆಯಲ್ಲಿವಾಸವಾಗಿರುವ ಉಳ್ಳಾಲ ತಾಲೂಕು ಕೊಣಾಜೆ ಗ್ರಾಮದ ನಡುಪದವು ಎಂಬಲ್ಲಿಂದ ಕಾಣೆಯಾಗಿರುತ್ತಾರೆ,

ಈ ಬಗ್ಗೆ ಕೊಣಾಜೆ ಪೊಲೀಸ್ ಠಾಣಾ ಮೊ.ನಂ: 97/2023, ಕಲಂ: ಮಹಿಳೆ ಕಾಣೆ ಯಂತೆ ಪ್ರಕರಣ ದಾಖಲಾಗಿ
ತನಿಖೆಯಲ್ಲಿರುತ್ತದೆ.

ಕಾಣೆಯಾದ ಅಫ್ರಿನಾ ಪತ್ತೆಯಾದಲ್ಲಿ ಪೊಲೀಸ್ ಆಯುಕ್ತರ ಕಛೇರಿಯ ಮಂಗಳೂರು ನಗರ ನಿಯಂತ್ರಣ ಕೊಠಡಿಗೆ ದೂರವಾಣಿ ಸಂಖ್ಯೆ 0824-2220800 ಅಥವಾ ಕೊಣಾಜೆ ಪೊಲೀಸ್ ಠಾಣೆಯ 0824-2220536, 9480802350 ನೇ ಸಂಖ್ಯೆಗೆ ಮಾಹಿತಿ ನೀಡಬೇಕಾಗಿ ಕೋರಲಾಗಿದೆ.


Spread the love