ಉಳ್ಳಾಲ: ಶಂಕಿತ ಡೆಂಗ್ಯು ಕಾಯಿಲೆಯಿಂದ ವಿವಾಹಿತ ಯುವಕ ಬಲಿ

Spread the love

ಉಳ್ಳಾಲ: ಶಂಕಿತ ಡೆಂಗ್ಯು ಕಾಯಿಲೆಯಿಂದ ವಿವಾಹಿತ ಯುವಕ ಬಲಿ

ಉಳ್ಳಾಲ: ಶಂಕಿತ ಡೆಂಗ್ಯುನಿಂದ ವಿವಾಹಿತರೊಬ್ಬರು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.

ಮೂಲತ: ಹರೇಕಳ ನ್ಯೂಪಡ್ಪು ನಿವಾಸಿ, ಸದ್ಯ ನಾಟೆಕಲ್ ನಲ್ಲಿ ನೆಲೆಸಿದ್ದ ನವಾಝ್ (32) ಮೃತಪಟ್ಟವರು.

ಕೆಲ ದಿನಗಳಿಂದ ಜ್ವರದಿಂದ ಬಳಲುತ್ತಿದ್ದ ನವಾಝ್ , ನಿನ್ನೆ ತೀವ್ರ ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲ್ಪಟ್ಟಿದ್ದರು. ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಇಂದು ನಸುಕಿನ ಜಾವ ಸಾವನ್ನಪ್ಪಿದ್ದಾರೆ.

ವಿವಾಹಿತರಾಗಿರುವ ನವಾಝ್ ಅವರಿಗೆ ಒಂದು ವರ್ಷದ ಮಗುವಿದೆ. ಮಂಗಳೂರಿನ ಬಂದರು ಪ್ರದೇಶದಲ್ಲಿರುವ ಜಿ ಎಲ್ ಜಿ ಫಿಶರೀಸ್ ಸಂಸ್ಥೆಯಲ್ಲಿ ಉದ್ಯೋಗಿಯಾಗಿದ್ದರು.


Spread the love