ಎಐಸಿಸಿ ಸಂವಹನ ಸಂಯೋಜಕರಾಗಿ ಅಶ್ವಿನ್ ಕುಮಾರ್ ರೈ, ನವೀನ್ ಆರ್ ಡಿಸೋಜಾ ನೇಮಕ

Spread the love

ಎಐಸಿಸಿ ಸಂವಹನ ಸಂಯೋಜಕರಾಗಿ ಅಶ್ವಿನ್ ಕುಮಾರ್ ರೈ, ನವೀನ್ ಆರ್ ಡಿಸೋಜಾ ನೇಮಕ

ಮಂಗಳೂರು: ದ.ಕ.ಲೋಕಸಭಾ ಚುನಾವಣೆಗೆ ಹಿನ್ನೆಲೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಅನುಮೋದನೆ ಮೇರೆಗೆ ಎಐಸಿಸಿ ಸಂವಹನ ಸಂಯೋಜಕರನ್ನಾಗಿ ಕೆಪಿಸಿಸಿ ಮಾಜಿ ಕಾರ್ಯದರ್ಶಿ ಅಶ್ವಿನ್ ಕುಮಾರ್ ರೈ, ಕಾರ್ಪೊರೇಟರ್ ನವೀನ್ ಆರ್. ಡಿಸೋಜ ಅವರನ್ನು ನೇಮಿಸಿ ಕೆಪಿಸಿಸಿ ಕಾರ್ಯಾಧ್ಯಕ್ಷ ಜಿ.ಸಿ. ಚಂದ್ರಶೇಖರ್ ಆದೇಶಿಸಿದ್ದಾರೆ.

ಲೋಕಸಭಾ ಕ್ಷೇತ್ರದಲ್ಲಿ ವಾರ್ ರೂಮ್ನ್ನು ತೆರೆದು ಚುನಾವಣಾ ಆಯೋಗ, ಮಾಧ್ಯಮ, ಪ್ರಚಾರ ವೈಖರಿ, ಸಾಮಾಜಿಕ ಜಾಲತಾಣಗಳ ವರದಿ, ಕ್ಷೇತ್ರದಲ್ಲಿ ನಡೆಯುವ ದಿನನಿತ್ಯದ ಇತರ ಮಾಹಿತಿಗಳ ವರದಿಯನ್ನು ಎಐಸಿಸಿ ಹಾಗೂ ಕೆಪಿಸಿಸಿಗೆ ನೀಡಬೇಕು ಎಂದು ಆದೇಶದಲ್ಲಿ ಸೂಚಿಸಲಾಗಿದೆ.


Spread the love