ಎಜೆ ಆಸ್ಪತ್ರೆಯಲ್ಲಿ 50% ರಿಯಾಯಿತಿ ದರದಲ್ಲಿ ಸಮಗ್ರ ಪಾರ್ಶ್ವವಾಯು ತಪಾಸಣೆ

Spread the love

ಎಜೆ ಆಸ್ಪತ್ರೆಯಲ್ಲಿ 50% ರಿಯಾಯಿತಿ ದರದಲ್ಲಿ ಸಮಗ್ರ ಪಾರ್ಶ್ವವಾಯು ತಪಾಸಣೆ

ಮಂಗಳೂರು: ಎ.ಜೆ. ಆಸ್ಪತ್ರೆಯಲ್ಲಿ ವಿಶ್ವ ಪಾರ್ಶ್ವವಾಯು ದಿನದ ಅಂಗವಾಗಿ 50% ರಿಯಾಯಿತಿ ದರದಲ್ಲಿ ಸಮಗ್ರ ಪಾರ್ಶ್ವವಾಯು ತಪಾಸಣೆ ಆಯೋಜಿಸಲಾಗಿದೆ.

ಅಕ್ಟೋಬರ್ 29ನ್ನು ಜಗತ್ತಿನಾದ್ಯಂತ ವಿಶ್ವ ಪಾರ್ಶ್ವವಾಯು ದಿನವಾಗಿ ಆಚರಿಸಲಾಗುತ್ತದೆ. ಈ ದಿನದ ಪ್ರಧಾನ ಉದ್ದೇಶ ಪಾರ್ಶ್ವವಾಯು ತಡೆ.

ಪಾರ್ಶ್ವವಾಯು ತಡೆ: ಅಧಿಕ ರಕ್ತದೊತ್ತಡ, ಮಧುಮೇಹ, ಕೊಲೆಸ್ಟ್ರಾಲ್, ಬೊಜ್ಜು, ಹೃದ್ರೋಗಗಳು ಮತ್ತು ಧೂಮಪಾನದಂತಹ ಅಪಾಯಕಾರಿ ಅಂಶಗಳನ್ನು ಪರಿಹರಿಸುವುದರಿಂದ ಪಾರ್ಶ್ವವಾಯು ಬರುವ ಸಾಧ್ಯತೆಯನ್ನು ಗಣನೀಯವಾಗಿ ಕಡಿಮೆ ಮಾಡಬಹುದಾಗಿದೆ.

ಇದೀಗ ಎ.ಜೆ. ಆಸ್ಪತ್ರೆಯಲ್ಲಿ ಪಾರ್ಶ್ವವಾಯುವಿನ ಬಗ್ಗೆ ಮುಂಜಾಗ್ರತೆ ವಹಿಸುವ ನಿಟ್ಟಿನಲ್ಲಿ, ವಿಶ್ವ ಪಾರ್ಶ್ವವಾಯು ದಿನದ ಪ್ರಯುಕ್ತ ಸಮಗ್ರ ಪಾರ್ಶ್ವವಾಯು ತಪಾಸಣಾ ಪ್ಯಾಕೇಜನ್ನು 50% ರಿಯಾಯಿತಿ, ಅಂದರೆ ಕೇವಲ ರೂ.2650/= ರಲ್ಲಿ ನೀಡಲಾಗುವುದು. ಈ ರಿಯಾಯಿತಿಯು 19/10/2020 ರಿಂದ 31/10/2020 ರವರೆಗೆ ಲಭ್ಯವಿರುವುದು.

ಪಾರ್ಶ್ವವಾಯು ತಪಾಸಣಾ ಪ್ಯಾಕೇಜಿನ ವಿವರಗಳು ಈ ಕೆಳಗಿನಂತಿವೆ: ರಕ್ತ ಪರೀಕ್ಷಗಳು: ಹೆಚ್ ಬಿ, ಅರ್ ಬಿ ಎಸ್, ಕ್ರಿಯಟಿನಿನ್, ಈಸಿಜಿ, ಕ್ಯಾರೋಟಿಡ್ ಡೊಪ್ಲರ್, ತಲೆಯ ಸ್ಕ್ಯಾನ್ ,ನುರಿತ ನರರೋಗ ತಜ್ನ್ಯ ವೈದ್ಯರೊಂದಿಗೆ ಸಮಾಲೋಚನೆ

ವೈಧ್ಯಕೀಯ ಸಮಾಲೋಚನೆಗೆ ನರರೋಗ ಶಾಸ್ತ್ರdÕ ಡಾ. ಸುರೇಶ ಬಿ.ವಿ. / ಡಾ. ಸೌರಬ್ ರೈ ಲಭ್ಯರಿರುತ್ತಾರೆ.

ನರರೋಗ ಶಾಸ್ತ್ರಜ್ಞ ರ ಸಲಹೆ ಮೇರೆಗೆ ಹೆಚ್ಚಿನ ತಪಾಸಣೆಗಳು ಅಗತ್ಯವಿದ್ದಲ್ಲಿ 25% ರಿಯಾಯಿತಿ.

ತಪಾಸಣೆ ಪ್ಯಾಕೇಜ್ ಪಡೆಯಲು ಮುಂಚಿತ / ಪೂರ್ವ ನೋಂದಾವಣೆ ಕಡ್ಡಾಯ. ಹೆಚ್ಚಿನ ವಿವರಗಳಿಗಾಗಿ ಹಾಗೂ ನೋಂದಾವಣೆಗೆ ಸಂಪರ್ಕಿಸಿ: 0824 6613165 /email: ajhlounge@gmail.com


Spread the love