ಎಬಿವಿಪಿ ಕುಂದಾಪುರ ವತಿಯಿಂದ ನಶಾ ಮುಕ್ತ ಭಾರತ ಸಂಕಲ್ಪ ಸಹಿ ಸಂಗ್ರಹ ಅಭಿಯಾನ

Spread the love

ಎಬಿವಿಪಿ ಕುಂದಾಪುರ ವತಿಯಿಂದ ನಶಾ ಮುಕ್ತ ಭಾರತ ಸಂಕಲ್ಪ ಸಹಿ ಸಂಗ್ರಹ ಅಭಿಯಾನ

ಕುಂದಾಪುರ: ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕುಂದಾಪುರ ಘಟಕ ವತಿಯಿಂದ ನಶಾ ಮುಕ್ತ ಭಾರತಕ್ಕಾಗಿ ಸಂಕಲ್ಪ ಸಹಿ ಸಂಗ್ರಹ ಅಭಿಯಾನ ನಡೆಯಿತು.

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ದೇಶಾದ್ಯಂತ ನಶಾ ಮುಕ್ತ ಭಾರತ ಜಾಗೃತಿ ಸಹಿ ಸಂಗ್ರಹ ಅಭಿಯಾನ ಕ್ಕೆ ಕುಂದಾಪುರ ಪಿಎಸೈ ಸದಾಶಿವ ಗವರೋಜಿ ಚಾಲನೆ ನೀಡಿದರು.

ಈ ವೇಳೆ ಮಾತನಾಡಿದ ವಿದ್ಯಾರ್ಥಿ ನಾಯಕ ದೀಪಕ್ಭಾರತ ದೇಶವನ್ನು ನಶಾ ಮುಕ್ತ ಮಾಡಬೇಕು, ಈ ದೇಶದಲ್ಲಿ ಯುವಕರನ್ನು ತಪ್ಪು ಹಾದಿಗೆ ಕೊಂಡೊಯ್ಯುವ ಒಂದು ಷಡ್ಯಂತ್ರ ನಡೆಯುತ್ತಿದೆ ಎಂದು ಎಬಿವಿಪಿ ದಶಕಗಳ ಹಿಂದೆಯೇ ಹೇಳಿತ್ತು ಈಗ ಅದು ಸಾಬೀತಾಗುತ್ತಿದೆ

ಸಮಾಜದಲ್ಲಿ ಪ್ರಸಿದ್ದರಾಗಿರುವ, ಚಲನ ಚಿತ್ರ ನಟ,ನಟಿಯರು, ರಾಜಕಾರಣಿಗಳ ಮಕ್ಕಳು ಈ ಹೇಯ ಕೃತದಲ್ಲಿ ತೊಡಗಿರುವುದು ದೇಶಕ್ಕೆ ಒಂದು ಕಪ್ಪು ಚುಕ್ಕಿ. ದೇಶದಲ್ಲಿ ಯಾರೆಲ್ಲಾ ಡ್ರಗ್ಸ್, ಗಾಂಜಾ ದಂಧೆಯಲ್ಲಿ ತೊಡಗಿರುವವರನ್ನು ಸರಕಾರ ನಿರ್ದಾಕ್ಷಿಣ್ಯವಾಗಿ ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಎಬಿವಿಪಿ ಕಾರ್ಯಕರ್ತರು, ಬಿ.ಬಿ ಹೆಗ್ಡೆ ಕಾಲೇಜಿನ ವಿದ್ಯಾರ್ಥಿಗಳು, ವಿದ್ಯಾರ್ಥಿ ಮುಖಂಡರಾದ ಸಚಿನ್, ರಾಹುಲ್ ಗಾಣಿಗ, ಪ್ರಜ್ಚಲ್ ಹಾಗೂ ಪ್ರಶಾಂತ್ ಉಪಸ್ಥಿತರಿದ್ದರು.


Spread the love