ಎಳೆಮನಸ್ಸುಗಳನ್ನು ಕನ್ನಡ ಪರ ಚಿಂತನೆಗೆ ತೊಡಗಿಸಿ : ಭಾಸ್ಕರ ರೈ ಕುಕ್ಕುವಳ್ಳಿ

Spread the love

ಎಳೆಮನಸ್ಸುಗಳನ್ನು ಕನ್ನಡ ಪರ ಚಿಂತನೆಗೆ ತೊಡಗಿಸಿ : ಭಾಸ್ಕರ ರೈ ಕುಕ್ಕುವಳ್ಳಿ

ಸುರತ್ಕಲ್ : ಕನ್ನಡ ಅಭಿವೃದ್ಧಿ ಪ್ರಾಧಿಕಾರ ಬೆಂಗಳೂರು ಹಾಗೂ ಮಂಜುನಾಥ ಎಜುಕೇಷನ್ ಟ್ರಸ್ಟ್ (ರಿ) ಮಂಗಳೂರು ಇವರ ಸಂಯುಕ್ತ ಆಶ್ರಯ ದಲ್ಲಿ ಕನ್ನಡ ಚಿಂತನ ಹಾಗೂ ಸಾಂಸ್ಕೃತಿಕ ಸೌರಭ ಕಾರ್ಯ ಕ್ರಮ ವು ಸುರತ್ಕಲ್ ಮಹಿಳಾ ಕೇಂದ್ರ ದಲ್ಲಿ ಜುಲೈ 31ರಂದು ಜರಗಿತು. ಸಮಾರಂಭವನ್ನು ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಮಾಜಿ ಸದಸ್ಯರಾದ ಭಾಸ್ಕರ ರೈ ಕುಕ್ಕುವಳ್ಳಿ ಯವರು ಉದ್ಘಾಟಿಸಿ ಕನ್ನಡ ಚಿಂತನ ಉಪನ್ಯಾಸ ವಿತ್ತರು. ಸರಕಾರದಿಂದ ಸಿಗುವ ಸವಲತ್ತುಗಳನ್ನು ಕನ್ನಡ ಪರ ಸಂಘ ಸಂಸ್ಥೆ ಗಳು ಯೋಗ್ಯರೀತಿಯಲ್ಲಿ ವಿನಿಯೋಗಿಸಿ ಆಮೂಲಕ ಕನ್ನಡದ ಕೆಲಸ ನಡೆಯಬೇಕು ಎಂದರು.

ಹೃದಯ ವಾಹನಿ – ಕರ್ಣಾಟಕ ವು ದೇಶ ವಿದೇಶಗಳಲ್ಲಿ ಕನ್ನಡ ಪಸರಿಸುವ ಕೆಲಸ ಮಾಡುತ್ತಿದೆ. ಇದು ಸಂತೋಷದ ಹಾಗೂ ಅಭಿಮಾನದ ವಿಷಯ. ನಮ್ಮ ಶಾಲೆಗಳಲ್ಲಿ ಸರಿಯಾದ ಪ್ರಮಾಣ ದಲ್ಲಿ ಕನ್ನಡದ ಕೆಲಸ ನಡೆಯುತ್ತಿಲ್ಲ.ಇದು ವಿಷಾದದ ವಿಷಯ.ಹಾಗಾಗಿ ಇಂದು ಇಂತಹ ಸಂಘ ಸಂಸ್ಥೆ ಗಳಿಂದ ಕನ್ನಡ ಕಟ್ಟುವ ಕೆಲಸ ಆಗಬೇಕು ಎಂದರು.ಮಕ್ಕಳಿಗೆ ಕನ್ನಡ ನಾಡು ನುಡಿ ಪರಿಸರದ ಬಗ್ಗೆ ಚಿತ್ರ ಕಲಾ ಸ್ಫರ್ಧೆ ಏರ್ಪಡಿಸಿದ್ದನ್ನು ಶ್ಲಾಘಿಸಿದ ಅವರು ಎಳೆಮನಸ್ಸುಗಳನ್ನು ಕನ್ನಡ ಪರ ಚಿಂತನೆಗೆ ತೊಡಗಿಸುವ ಮಂಜುನಾಥ ಸಾಗರ್ ರವರ ಕೆಲಸ ಮೆಚ್ಚಬೇಕು ಎಂದರು.ಸುರತ್ಕಲ್

ಮಹಿಳಾ ಕೇಂದ್ರ ದ ಅಧ್ಯಕ್ಷೆ ಸುಲೋಚನಾ ವಿ ರಾವ್ ಮುಖ್ಯ ಅತಿಥಿಯಾಗಿದ್ದರು.ಅನಿವಾರ್ಯ ವಿರುವಲ್ಲಿ ಇಂಗ್ಲಿಷ್ ಮಾತನಾಡಿದರೂ ಕನ್ನಡ ಮರೆಯಬಾರದು. ಮನೆಯಲ್ಲಿ ಕನ್ನಡ ಮಾತನಾಡಬೇಕು. ಪರಸ್ಪರ ಮಾತನಾಡುವಾಗ ಕನ್ನಡದಲ್ಲಿ ಮಾತನಾಡಿ ಕನ್ನಡ ಭಾಷೆ ಸಂಸ್ಕೃತಿ ಬೆಳೆಸಬೇಕು ಎಂದರು.ಹೃದಯವಾಹಿನಿ ಕರ್ನಾಟಕ ಅಧ್ಯಕ್ಷ ಇಂ.ಕೆ.ಪಿ.ಮಂಜುನಾಥ ಸಾಗರ್ ಅಧ್ಯಕ್ಷತೆ ವಹಿಸಿದ್ದರು.

ತಮ್ಮ ಭಾಷಣದಲ್ಲಿ ಅವರು ಕನ್ನಡಕ್ಕಾಗಿ ಪ್ರತ್ಯೇಕ ಧ್ವಜ ಬೇಕು ಎಂಬ ಹಾರೈಕೆ ಕೇಳಿ ಬರುತ್ತದೆ. ಇದು ತಪ್ಪಲ್ಲ.ಈಗ ಇರುವ ಕನ್ನಡ ಧ್ವಜವೇ ಮುಂದುವರಿಯಲಿ ಎಂದರು.ಸರ್ಪಸುತ್ತಿಗೆ ಚಿಕಿತ್ಸೆ ನೀಡುವ ಲೀಲಾವತಿ ವಸಂತ ಪೂಜಾರ್ತಿ ಅವರಿಗೆ ಗೌರವ ಪುರಸ್ಕಾರ ನೀಡಿಲಾಯಿತು. ಸಾಂಸ್ಕೃತಿಕ ಕಾರ್ಯ ಕ್ರಮ ದ ಅಂಗವಾಗಿ ಮಜಾ ಟಾಕೀಸ್ ಖ್ಯಾತಿಯ ಅಶೋಕ್ ಪೊಳಲಿ ಅವರಿಂದ ಕೋಳಿ ನೃತ್ಯ, ಸ್ವರ ಸಂಗಮದದಲ್ಲಿ ಭಗವಾನ್, ಚಿತ್ರಲೇಖ ಭಗವಾನ್, ಶಿವರಾಜ್ ಪಾಂಡೇಶ್ವರ್ ಕನ್ನಡ ಗೀತೆ ಚಿತ್ರ ಗೀತೆ ಕಾರ್ಯ ಕ್ರಮ ವಿತ್ತರು.ಕರ್ನಾಟಕ ನಾಡು ನುಡಿ ಪರಿಸರ ಬಗ್ಗೆ ವಿದ್ಯಾರ್ಥಿ ಗಳಿಗೆ ಏರ್ಪಡಿಸಿದ ಚಿತ್ರ ಕಲಾ ಸ್ಫರ್ಧೆ ಯಲ್ಲಿ ವಿಜೇತರಾದ ಶ್ರೇಯಾ. ಸಿ,ಸೂರಜ್. ಪಿ.ಎಸ್,ಪ್ರತೀಕ್ಷಾ ರಿಗೆ ಬಹುಮಾನ ವಿತರಿಸಲಾಯಿತು. ಸಾಹಿತಿ ಕಾಸರಗೋಡು ಅಶೋಕ್ ಕುಮಾರ್ ಪ್ರಾಸ್ತಾವಿಕ ವಾಗಿ ಮಾತನಾಡಿ ಎಲ್ಲರನ್ನೂ ಸ್ವಾಗತಿಸಿದರು. ಮುಖ್ಯ ಅತಿಥಿ ಕನ್ಸಲ್ಟಿಂಗ್ ಸಿವಿಲ್ ಎಂಜಿನಿಯರ್ ಇಂ.ಅಬ್ದುಲ್ ಜಲೀಲ್ ಜಿ. ಉಪಸ್ಥಿತರಿದ್ದರು. ರವಿ ನಿರೂಪಿಸಿದರು. ಚಿತ್ರಲೇಖ ಪ್ರಾರ್ಥಿಸಿದರು

 


Spread the love