ಎಸೆಸೆಲ್ಸಿ ಫಲಿತಾಂಶ: ಅಲೆವೂರು ಶಾಂತಿನಿಕೇತನ ಶಾಲೆಯ ಅಂಕಿತಾ ಆಚಾರ್ಯ ರಾಜ್ಯಕ್ಕೆ 5 ನೇ ಸ್ಥಾನ

Spread the love

ಎಸೆಸೆಲ್ಸಿ ಫಲಿತಾಂಶ: ಅಲೆವೂರು ಶಾಂತಿನಿಕೇತನ ಶಾಲೆಯ ಅಂಕಿತಾ ಆಚಾರ್ಯ ರಾಜ್ಯಕ್ಕೆ 5 ನೇ ಸ್ಥಾನ

ಉಡುಪಿ: ಪ್ರಸಕ್ತ ಸಾಲಿನ ಎಸೆಸೆಲ್ಸಿ ಪರೀಕ್ಷೆಯಲ್ಲಿ ಶಾಂತಿ ನಿಕೇತನಾ ಇಂಗ್ಲೀಷ್ ಮೀಡಿಯಂ ಸ್ಕೂಲ್ ಅಲೆವೂರು ಇಲ್ಲಿನ ವಿದ್ಯಾರ್ಥಿನಿ ಅಂಕಿತಾ ಪಿ. ಆಚಾರ್ಯ ಅವರು 621 ಅಂಕಗಳನ್ನು ಪಡೆದು ರಾಜ್ಯಕ್ಕೆ 5 ನೇ ಸ್ಥಾನ ಪಡೆದಿರುತ್ತಾಳೆ.

ಸಂಸ್ಕೃತದಲ್ಲಿ 125, ಇಂಗ್ಲೀಷ್ನಲ್ಲಿ100, ಕನ್ನಡದಲ್ಲಿ 100 ಗಣಿತದಲ್ಲಿ 100, ವಿಜ್ಞಾನದಲ್ಲಿ 98 ಮತ್ತು ಸಮಾಜ ವಿಜ್ಞಾನದಲ್ಲಿ 98 ಅಂಕ ಗಳಿಸಿರುವ ಈಕೆ ಉಡುಪಿ ಜಿಲ್ಲಾ ಚಿನ್ನ ಬೆಳ್ಳಿ ಕೆಲಸಗಾರರ ಸಂಘದ ಉಪಾಧ್ಯಕ್ಷ ಟಿ.ಜಿ. ಪಭಾಕರ ಆಚಾರ್ಯ, ವಿಜಯಶ್ರೀ ದಂಪತಿಯ ಪುತ್ರಿಯಾಗಿದ್ದಾರೆ.


Spread the love