ಎಸೆಸ್ಸೆಲ್ಸಿ ಪರೀಕ್ಷಾ ಫಲಿತಾಂಶ : ಬೈಂದೂರು- ಕಿರಿಮಂಜೇಶ್ವರದ ಸುರಭಿ ಎಸ್ ಶೆಟ್ಟಿ ಜಿಲ್ಲೆಗೆ ಪ್ರಥಮ

Spread the love

ಎಸೆಸ್ಸೆಲ್ಸಿ ಪರೀಕ್ಷಾ ಫಲಿತಾಂಶ : ಬೈಂದೂರು- ಕಿರಿಮಂಜೇಶ್ವರದ ಸುರಭಿ ಎಸ್ ಶೆಟ್ಟಿ ಜಿಲ್ಲೆಗೆ ಪ್ರಥಮ

ಕುಂದಾಪುರ: ಸಾಕಷ್ಟು ಕುತೂಹಲದಿಂದ ಕಾಯುತ್ತಿದ್ದ ಎಸೆಸ್ಸೆಲ್ಸಿ ಪರೀಕ್ಷಾ ಫಲಿತಾಂಶ ಸೋಮವಾರ ಮಧ್ಯಾಹ್ನ ಪ್ರಕಟಗೊಂಡಿದ್ದು, ಬೈಂದೂರು ತಾಲೂಕಿನ ಕಿರಿಮಂಜೇಶ್ವರದ ಸಂದೀಪನ್ ಆಂಗ್ಲಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಸುರಭಿ ಎಸ್ ಶೆಟ್ಟಿ 624 ಅಂಕ ಪಡೆದು ಜಿಲ್ಲೆಗೆ ಪ್ರಥಮ ಸ್ಥಾನ ಗಳಿಸಿದ್ದಾಳೆ.

ಉಪ್ಪುಂದ ನಿವಾಸಿ ಸುರೇಶ್ ಶೆಟ್ಟಿ ಮತ್ತು ಸೀಮಾ ದಂಪತಿಗಳ ಪುತ್ರಿಯಾಗಿರುವ ಸುರಭಿ ಎಸ್ ಶೆಟ್ಟಿ ಸಮಾಜ ವಿಷಯದಲ್ಲಿ ಒಂದಂಕ ಕಡಿಮೆ ಬಿಟ್ಟರೆ ಉಳಿದೆಲ್ಲಾ ವಿಷಯಗಳಲ್ಲಿ ಔಟ್ ಆಫ್ ಔಟ್ ಗಳಿಸಿದ್ದಾಳೆ. ಅಲ್ಲದೇ ಆಂಗ್ಲಮಾಧ್ಯಮದಲ್ಲಿ ರಾಜ್ಯಕ್ಕೆ ದ್ವಿತೀಯ ಸ್ಥಾನಿಯಾಗಿ ಹೊರಹೊಮ್ಮಿದ್ದಾಳೆ.

ಈ ಕುರಿತು ಮ್ಯಾಂಗಲೊರಿಯನ್ ಪ್ರತಿನಿಧಿಯೊಂದಿಗೆ ಮಾತನಾಡಿದ ವಿದ್ಯಾರ್ಥಿನಿ ಸುರಭಿ, ತರಗತಿಗಳಿರುವ ಸಮಯದಲ್ಲಿ ದಿನಾಲು ಆರೇಳು ಗಂಟೆಗಳ ಕಾಲ ಅಭ್ಯಾಸ ನಡೆಸುತ್ತಿದ್ದೆ. ಪರೀಕ್ಷಾ ಸಮಯದಲ್ಲಿ ಇನ್ನೂ ಹೆಚ್ಚು ಗಂಟೆಗಳ ಕಾಲ ಅಭ್ಯಾಸ ನಡೆಸುತ್ತಿದ್ದೆ. ಲಾಕ್ಡೌನ್ ಜಾರಿಯಲ್ಲಿದ್ದರಿಂದ ನನಗೆ ಇನ್ನೂ ಹೆಚ್ಚು ಅಭ್ಯಾಸ ನಡೆಸಲು ಸಾಧ್ಯವಾಯಿತು. ಹಲವಾರು ಸಂದೇಹಗಳನ್ನು ಬಗೆಹರಿಸಿಕೊಳ್ಳುತ್ತಿದ್ದೆ. ಸ್ನೇಹಿತೆಯ ಜೊತೆಗೂ ವಾಟ್ಸಾಪ್ನಲ್ಲಿ ಹಲವಾರು ವಿಷಯಗಳ ಬಗ್ಗೆ ಚರ್ಚೆ ಮಾಡಿ ಗೊಂದಲಗಳನ್ನು ಬಗೆಹರಿಸಿಕೊಳ್ಳುತ್ತಿದ್ದೆ ಎಂದಿದ್ದಾರೆ.

ರಾತ್ರಿ ಓದಲು ಕುಳಿತರೆ ಅಮ್ಮ ಜೊತೆಗಿರುತ್ತಿದ್ದರು:
ನನಗೆ ಓದಲು ಮನೆಯಲ್ಲಿ ಯಾರೂ ಒತ್ತಡ ಹಾಕುತ್ತಿರಲಿಲ್ಲ. ನಿನ್ನಲ್ಲಿ ಎಷ್ಟು ಸಾಧ್ಯವಾಗುತ್ತೋ ಅಷ್ಟು ಅಂಕ ಗಳಿಸು ಎನ್ನುತ್ತಿದ್ದರು. ನನಗೆ ಓದಲು ತಂದೆ-ತಾಯಿ ತುಂಬಾ ಪ್ರೋತ್ಸಾಹ ನೀಡಿದ್ದಾರೆ. ರಾತ್ರಿ ನಾನು ಓದುತ್ತಿರುವಾಗ ಅಮ್ಮ ನಿದ್ದೆ ಮಾಡದೇ ನನ್ನೊಂದಿಗೆ ಕುಳಿತುಕೊಳ್ಳುತ್ತಿದ್ದರು.

ಆಯಾಗಳಿಗೂ ನಾನು ಸಾಧನೆ ಮಾಡುವ ವಿಶ್ವಾಸವಿತ್ತು:
ಶಿಕ್ಷಕರೆಲ್ಲರಿಗೂ ನನ್ನ ಬಗ್ಗೆ ತುಂಬಾ ನಿರೀಕ್ಷೆ ಇತ್ತು. ಶಿಕ್ಷಕರಲ್ಲದೇ ನಮ್ಮ ಶಾಲೆಯ ಆಯಾಗಳಿಗೂ ಕೂಡ ನಾನು ಸಾಧನೆ ಮಾಡುತ್ತೇನೆಂಬ ವಿಶ್ವಾಸವಿತ್ತು. ನೀನು ಸಾಧನೆ ಮಾಡುತ್ತೀಯಾ ಎಂದು ಯಾವಾಗಲೂ ಹೇಳಿ ನನ್ನನ್ನು ಹುರಿದುಂಬಿಸುತ್ತಿದ್ದರು. ಶಾಲೆಯ ಮಖ್ಯೋಪಾಧ್ಯಾಯರಾದ ವಿಶ್ವೇಶ್ವರ ಅಡಿಗ ಸರ್ ನನಗೆ ತುಂಬಾ ಸಪೋರ್ಟ್ ಮಾಡಿದ್ದಾರೆ. ತರಗತಿ ಶಿಕ್ಷಕಿ ಜ್ಯೋತಿ, ಇಂಗ್ಲೀಷ್ ಶಿಕ್ಷಕರಾದ ಸುಬ್ರಹ್ಮಣ್ಯ ಸರ್ ತುಂಬಾ ಪ್ರೋತ್ಸಾಹ ನೀಡಿದ್ದಾರೆ. ಇವರೆಲ್ಲರ ಪ್ರೋತ್ಸಾಹದಿಂದಾಗಿ ನನಗೆ ಈ ಸಾಧನೆ ಮಾಡಲು ಸಾಧ್ಯವಾಯಿತು ಎಂದು ವಿದ್ಯಾರ್ಥಿನಿ ಸುರಭಿ ಪ್ರತಿಕ್ರಿಯಿಸಿದ್ದಾರೆ. ಮುಂದೆ ಪಿಸಿಎಂಬಿ ತೆಗೆದುಕೊಂಡು ಎಂಬಿಬಿಎಸ್ ಮಾಡುವ ಆಸೆಯನ್ನು ಸುರಭಿ ವ್ಯಕ್ತಪಡಿಸಿದ್ದಾಳೆ.

ಶಿಕ್ಷಕರೆಲ್ಲರಿಗೂ ನನ್ನ ಬಗ್ಗೆ ತುಂಬಾ ನಿರೀಕ್ಷೆ ಇತ್ತು. ಶೀಕ್ಷಕರಿಲ್ಲದೇ ನಮ್ಮ ಶಾಲೆಯ ಆಯಾಗಳಿಗೂ ಕೂಡ ನಾನು ಸಾಧನೆ ಮಾಡುವ ನಿರೀಕ್ಷೆ ಇತ್ತು. ವಿಶ್ವೇಶ್ವರ ಅಡಿಗ ತುಂಬಾ ಸಪೋರ್ಟ್. ತರಗತಿ ಶಿಕ್ಷಕಿ ಜ್ಯೋತಿ, ಇಂಗ್ಲೀಷ್ ಶಿಕ್ಷಕ ಸುಬ್ರಹ್ಮಣ್ಯ ಸರ್ ತುಂಬಾ ಪ್ರೋತ್ಸಾಹ ಮಾಡುತ್ತಿದ್ದರು. ಅವರಿಂದಲೇ ನನಗೆ ಈ ಸಾಧನೆ ಮಾಡಲು ಸಾಧ್ಯವಾಯಿತು.


Spread the love