ಎಸ್ಪೆಶಿಯ ತಂಡದ ವತಿಯಿಂದ  ಮಕ್ಕಳಿಗೆ ಉಚಿತ ಸಮವಸ್ತ್ರ ವಿತರಣೆ

Spread the love

ಎಸ್ಪೆಶಿಯ ತಂಡದ ವತಿಯಿಂದ  ಮಕ್ಕಳಿಗೆ ಉಚಿತ ಸಮವಸ್ತ್ರ ವಿತರಣೆ

ಮಂಗಳೂರು: ಎಸ್ಪೆಶಿಯ ತಂಡದ ವತಿಯಿಂದ ಜೆಪ್ಪು ಪರಿಸರದಲ್ಲಿರುವ ಮಕ್ಕಳಿಗೆ ಉಚಿತ ಸಮವಸ್ತ್ರವನ್ನು ಬುಧವಾರ ವಿತರಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ನ್ಯಾಯವಾದಿ ರಾಘವೇಂದ್ರ ರಾವ್ ವಹಿಸಿಕೊಂಡು ಮುಂದಿನ ಹಂತದಲ್ಲಿ ಇನ್ನಷ್ಟು ಉತ್ತಮ ಸಮಾಜಸೇವೆ ಮಾಡುವ ಭರವಸೆಯನ್ನು ಹಾಗೂ ಯುವಕರು ಇನ್ನಷ್ಟು ಸಮಾಜಮುಖಿ ಕಾರ್ಯಕ್ರಮಕ್ಕೆ ಸಮಯ ನೀಡುವಂತೆ ಸಹಹೆ ನೀಡಿದರು.

ಕಾರ್ಯಕ್ರಮದಲ್ಲಿ ಭಗಿನಿ ಸಮಾಜದ ಮಕ್ಕಳಿಗೆ ಸಿಹಿತಿಂಡಿ, ಹಣ್ಣುಹಂಪಲು ಮತ್ತು ಪಾನೀಯವನ್ನು ಹಂಚಲಾಯಿತು. ಅಲ್ಲದೆ ಮುಂದಿನ ಹಂತದಲ್ಲಿ ಮಕ್ಕಳಿಗೆ ಕೊಡೆ, ರೈನ್ ಕೋಟ್, ಸ್ಕೂಲ್ ಬ್ಯಾಗ್, ನೀರಿನ ಕ್ಯಾನ್ ಪುಸ್ತಕ ನೀಡಲಾಗುವುದು ಎಂದು ಸಂಘಟಕರು ತಿಳಿಸಿದರು.

ಕಾರ್ಯಕ್ರಮದಲ್ಲಿ ಕಾರ್ತಿಕ್ ಸುಂದರ್ ಕಮಲ್, ನ್ಯಾಯವಾದಿ ಕುರಿಯನ್, ಪ್ರಸಾದ್, ಕಾರ್ತಿಕ್, ಕೆ. ದಯಾನಂದ್, ನಂದಕುಮಾರ್, ಎನ್ ಕೆ ಇಂಜಿನಿರ್ಯಸ್, ರಾಜಗೋಪಾಲ್ ರೈ, ಅಜಿತ್ ಕುಮಾರ್, ಸುಜಿತ್, ದೀಪಕ್ ಪೈ, ರಾಜೇಶ್ ಕೆ, ಮೆಲ್ವಿನ್, ನಾರಾಯಣ, ಕೇಶವ, ಭಾನುಮತಿ ಜೈನ್, ಸುಕ್ರಾಜ್ ಎಸ್ ಕೊಟ್ಟಾರಿ, ಗೌತಮ್ ಕುಲಾಲ್, ದೀಪಕ್ ಕುಲಾಲ್ ಮತ್ತಿತರು ಉಪಸ್ಥಿತರಿದ್ದರು.


Spread the love