ಎಸ್​ಬಿಐ ಬ್ಯಾಂಕ್ ನಲ್ಲಿ ಜನರೇಟರ್ ಗೆ ಡೀಸೆಲ್ ಹಾಕುವ ಸಂದರ್ಭದಲ್ಲಿ ಬೆಂಕಿ

102

ಎಸ್​ಬಿಐ ಬ್ಯಾಂಕ್ ನಲ್ಲಿ ಜನರೇಟರ್ ಗೆ ಡೀಸೆಲ್ ಹಾಕುವ ಸಂದರ್ಭದಲ್ಲಿ ಬೆಂಕಿ

ಹಾಸನ: ಜನರೇಟರ್ ಗೆ ಡೀಸೆಲ್ ಹಾಕುವ ಸಂದರ್ಭದಲ್ಲಿ ಆಕಸ್ಮಿಕವಾಗಿ ಬೆಂಕಿ ಹತ್ತಿಕೊಂಡ ಘಟನೆ ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನಲ್ಲಿ ನಡೆದಿದೆ.

ಮಲೆನಾಡಲ್ಲಿ ಭಾರಿ ಮಳೆ ಆಗುತ್ತಿರುವುದರಿಂದ ವಿದ್ಯುತ್ ಕಡಿತ ಹೆಚ್ಚಾಗುತ್ತಿದ್ದು ಬ್ಯಾಂಕ್ ವ್ಯವಹಾರಗಳಿಗೆ ಜನರೇಟರ್ ಬಳಸಿ ಕಾರ್ಯನಿರ್ವಹಿಸಲಾಗುತ್ತಿದೆ.

ಸಕಲೇಶಪುರ ಮತ್ತು ಬಿಸಿಲೆ ಭಾಗದ ಕಡೆ ಮಳೆಯಾಗಿದ್ದರಿಂದ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದು, ಗಣಕೀಕೃತ ವ್ಯವಹಾರಗಳನ್ನು ಮಾಡಲು ತೊಂದರೆಯಾದ ಹಿನ್ನೆಲೆಯಲ್ಲಿ ಜನರೇಟರ್ ಬಳಸಿಕೊಂಡು ಕಾರ್ಯನಿರ್ವಹಿಸಲು ಎಸ್.ಬಿ.ಐ ಬ್ಯಾಂಕ್ ಮುಂದಾಗಿದ್ದು ಜನರೇಟರ್ ಮುಚ್ಚಳ ತೆಗೆದು ಡೀಸೆಲ್​​ ಹಾಕುವ ವೇಳೆ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿದ್ದರಿಂದ ಕೆಲಕಾಲ ಆತಂಕ ಸೃಷ್ಟಿಯಾಯಿತು.

ಕೊನೆಗೆ ಬ್ಯಾಂಕ್ ಸಿಬ್ಬಂದಿ ಮತ್ತು ಸ್ಥಳೀಯರ ಸಹಾಯದಿಂದ ಬೆಂಕಿ ನಂದಿಸಲಾಯಿತು.