ಎ.ಎಸ್.ಐ ಸಿಬ್ಬಂದಿಗೆ ಸೋಂಕು: ಕುಂದಾಪುರ ನಗರ ಠಾಣೆ ಒಂದು ದಿನದ ಮಟ್ಟಿಗೆ ಸೀಲ್ ಡೌನ್

Spread the love

ಎ.ಎಸ್.ಐ ಸಿಬ್ಬಂದಿಗೆ ಸೋಂಕು: ಕುಂದಾಪುರ ನಗರ ಠಾಣೆ ಒಂದು ದಿನದ ಮಟ್ಟಿಗೆ ಸೀಲ್ ಡೌನ್

ಕುಂದಾಪುರ: ಇಲ್ಲಿನ ನಗರ ಠಾಣೆಯ ಎಎಸ್‍ಐ ಸಿಬ್ಬಂದಿಯೋರ್ವರಿಗೆ ಶನಿವಾರ ಕೊರೋನಾ ಪಾಸಿಟಿವ್ ದೃಢಪಟ್ಟಿದ್ದು, ಒಂದು ದಿನಗಳ ಕಾಲ ಠಾಣೆಯನ್ನು ಬಂದ್ ಮಾಡಲಾಗಿದೆ.

ಹೈವೇ ಪ್ಯಾಟ್ರೋಲ್‍ನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ 54 ವರ್ಷದ ಎಎಸ್‍ಐ ಸಿಬ್ಬಂದಿಗೆ ಕೊರೋನಾ ಪಾಸಿಟಿವ್ ದೃಢಪಟ್ಟ ಹಿನ್ನೆಲೆ ಠಾಣೆ ಹಾಗೂ ವಾಹನಗಳನ್ನು ಸ್ಯಾನಿಟೈಝ್ ಮಾಡಿ ಠಾಣಾ ವಠಾರವನ್ನು ಸೀಲ್‍ಡೌನ್ ಮಾಡಲಾಗಿದೆ. ಠಾಣೆಯನ್ನು ಒಂದು ದಿನದ ಮಟ್ಟಿಗೆ ಸಮೀಪದ ಐಬಿಗೆ ಸ್ಥಳಾಂತರಿಸಲಾಗಿದ್ದು ನಾಳೆಯಿಂದ ಮತ್ತೆ ಪೊಲೀಸ್ ಠಾಣೆ ಕಾರ್ಯಾರಂಭಿಸಲಿದೆ.

ಸೋಂಕು ಪತ್ತೆಯಾದ ಎಎಸ್‍ಐ ಸಿಬ್ಬಂದಿ ಕಳೆದ 10ನೇ ತಾರೀಕಿನಂದು ಕರ್ತವ್ಯ ಮುಗಿಸಿ ಹೋಂ ಕ್ವಾರಂಟೈನ್‍ನಲ್ಲಿದ್ದರು. ಆ ಬಳಿಕ ಠಾಣೆಗೆ ಬಂದಿರಲಿಲ್ಲ. ಕೋವಿಡ್ ನಿಯಮ ಅಳವಡಿಸಿ ಠಾಣೆಯನ್ನು ಸ್ಯಾನಿಟೈಝ್ ಮಾಡಿ ಒಂದು ದಿನದ ಮಟ್ಟಿಗೆ ಸೀಲ್‍ಡೌನ್ ಮಾಡಿದ್ದೇವೆ ಎಂದು ಕುಂದಾಪುರ ಉಪವಿಭಾಗದ ಎಎಸ್‍ಪಿ ಹರಿರಾಮ್ ಶಂಕರ್ ಮಾಹಿತಿ ನೀಡಿದ್ದಾರೆ.

ಸೋಂಕು ಪತ್ತೆಯಾದ ಎಎಸ್‍ಐ ಸಿಬ್ಬಂದಿಯವರ ಜೊತೆ ಪಿಎಸ್‍ಐ ಹರೀಶ್ ಆರ್ ನಾಯ್ಕ್ ಸೇರಿದಂತೆ ಕೆಲ ಸಿಬ್ಬಂದಿಗಳು ಸಂಪರ್ಕಕ್ಕೆ ಬಂದ ಹಿನ್ನೆಲೆ ಅವರೆಲ್ಲರೂ ಸ್ವಯಂ ಹೋಂ ಕ್ವಾರಂಟೈನ್‍ಗೆ ಒಳಗಾಗಿದ್ದಾರೆ.


Spread the love