ಎ. ಜೆ. ಆಸ್ಪತ್ರೆಯಲ್ಲಿ ಪ್ರಥಮ ಕನಿಷ್ಠ ಛೇದನ (ಮಿನಿಮಲ್ ಇನವೇಸಿವ್) ಹೃದಯ ಶಸ್ತ್ರಚಿಕಿತ್ಸೆ

Spread the love

ಮಂಗಳೂರು: ಶ್ರೀ ಚಂದ್ರಕಾಂತ್ (55 ವರ್ಷ) ಇವರು ಹೃದಯದ ಹೃತ್ಕರ್ಣದಲ್ಲಿ ತೀವ್ರತೆರನಾದ ಮಿಟ್ರಲ್ ಸ್ಟೆನೋಸಿಸ್ ಎಂಬ ಹೃದಯದ ಸಂಧಿವಾತ ಕಾಯಿಲೆಯಿಂದ ಬಳಲುತ್ತಿದ್ದು ವೈದ್ಯರು 2007ರಲ್ಲಿ ಹೃದಯದ ಮಿಟ್ರಲ್‍ಕವಾಟ ಬದಲಾವಣೆಗೆ ಸಲಹೆ ನೀಡಿದ್ದರು.  ರೋಗಿಯು ತೆರೆದ ಹೃದಯ ಶಸ್ತ್ರಚಿಕಿತ್ಸೆಯ ಭಯದಿಂದಾಗಿ ಚಿಕಿತ್ಸೆಯನ್ನು ಮುಂದೂಡಿದ್ದರು.

ಹಂತ ಹಂತವಾಗಿ ರೋಗಲಕ್ಷಣಗಳು ಉಲ್ಬಣಿಸುತ್ತಿದ್ದ ಕಾರಣ ರೋಗಿಯು ತೆರೆದ ಹೃದಯದ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳುವುದೆಂದು ನಿಶ್ಚಯಿಸಿ ಕಾರ್ಡಿಯೋಥೊರಾಸಿಕ್ ಸರ್ಜನ್‍ಡಾ. ಜಯಶಂಕರ ಮಾರ್ಲರವರನ್ನು ಭೇಟಿಯಾದರು.  ರೋಗಿಯನ್ನು ಕೂಲಂಕುಷವಾಗಿ ಪರಿಶೀಲಿಸಿದ ಡಾ. ಜಯಶಂಕರ್ ಮಾರ್ಲರವರು, ಎದೆಯ ಬಲಬದಿಯಲ್ಲಿ ಸಣ್ಣರಂದ್ರ ಮಾಡಿ ಅದರ ಮೂಲಕ ಶಸ್ತ್ರಚಿಕಿತ್ಸೆ ಮಾಡಬಹುದಾಗಿ ತಿಳಿಸಿದರು ಹಾಗೂ ರೋಗಿಯು ಈ ಶಸ್ತ್ರಚಿಕಿತ್ಸಾ ಪರ್ಯಾಯ ವಿಧಾನವನ್ನುಒಪ್ಪಿಕೊಂಡರು.

ತರುವಾಯ ರೋಗಿಗೆ ಎದೆಯ ಬಲಬಾಗದಿಂದ ಕನಿಷ್ಠ ಛೇದನ ವಿಧಾನದಿಂದ ಎಡ ಹೃತ್ಕರ್ಣದ ಅಪೆಂಡೇಜ್ ಲಿಗೇಷನ್ ಹಾಗೂ ಪರಿವರ್ತಿತ ಜಟಿಲ ವಿಧಾನದ ಮೂಲಕ ಯಶಸ್ವಿಯಾಗಿ ಮಿಟ್ರಲ್‍ಕವಾಟ ದುರಸ್ತಿ ನಡೆಸಲಾಯಿತು.  ಹಾರ್ಟ್ ಲಂಗ್‍ ಯಂತ್ರವನ್ನು ಬಲ ತೊಡೆಯಲ್ಲಿ ಸಣ್ಣ ರಂದ್ರವನ್ನು ಮಾಡಿ ಜೋಡಿಸಲಾಯಿತು.  ಶಸ್ತ್ರಚಿಕಿತ್ಸಾನಂತರ ರೋಗಿಯು ಶೀಘ್ರವಾಗಿ ಚೇತರಿಸಿ ಕೊಂಡರಲ್ಲದೆ ಯಾವುದೇ ತೊಡಕುಗಳಿಲ್ಲದೆ ಕಡಿಮೆ ಅವಧಿಯ ಆಸ್ಪತ್ರೆವಾಸದ ಬಳಿಕ ಮನೆಗೆ ತೆರಳಿದರು.

1-aj-hosp

ಡಾ. ಜಯಶಂಕರ್ ಮಾರ್ಲರವರು ಶ್ರೀ. ಚಂದ್ರಕಾಂತ್‍ರವರೊಂದಿಗೆ

ಮಂಗಳೂರಿನಲ್ಲಿ ವರದಿಯಾದ ಇಂತಹ ಹೃದ್ರೋಗ ಶಸ್ತ್ರಚಿಕಿತ್ಸೆಗಳಲ್ಲಿ ಮೊದಲ ಯಶಸ್ವಿ ಶಸ್ತ್ರಚಿಕಿತ್ಸೆಯಾಗಿದ್ದು, ಇದನ್ನು ಎ.ಜೆ. ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಹೃದ್ರೋಗ ಶಸ್ತ್ರಚಿಕಿತ್ಸಾ ತಜ್ಞರಾದ ಡಾ. ಜಯಶಂಕರ್ ಮಾರ್ಲರವರ ನೇತೃತ್ವದಲ್ಲಿ ಡಾ. ಮಾಧವ್‍ಕಾಮತ್ ಮತ್ತು ಡಾ. ಗೌರವ್ ಶೆಟ್ಟಿ, ಹೃದ್ರೋಗ ಶಸ್ತ್ರಚಿಕಿತ್ಸಾ ತಜ್ಞರು, ಡಾ. ಗುರುರಾಜ್‍ ತಂತ್ರಿ ಮುಖ್ಯ ಅರಿವಳಿಕೆ ತಜ್ಞರು, ಮತ್ತು ಡಾ.ಟ್ರೆವರ್ ಸಿಕ್ವೇರಾ, ಹೃದ್ರೋಗ ಅರಿವಳಿಕೆ ತಜ್ಞರು ಮತ್ತು ಸಿಬ್ಬಂದಿ ವರ್ಗದವರು ನಡೆಸಿದರು.

ಈ ಶಸ್ತ್ರಚಿಕಿತ್ಸೆಯ ಬಗ್ಗೆ ಹೆಚ್ಚಿನ ವಿವರಅಥವಾ ಮಾಹಿತಿಗಾಗಿ ಡಾ. ಜಯಶಂಕರ್ ಮಾರ್ಲರನ್ನು 9448145617 ಕ್ಕೆ ಸಂಪರ್ಕಿಸಬಹುದು.

ಎ.ಜೆ. ಆಸ್ಪತ್ರೆ ಮತ್ತು ಸಂಶೋಧನಾ ಕೆಂದ್ರದಲ್ಲಿ ಲಭ್ಯವಿರುವ ವಿಶೇಷ ಸೇವಾ ಸೌಲಭ್ಯಗಳು ಮತ್ತು ಪರಿಣತಿಯ ಬಗ್ಗೆ ಸಾರ್ವಜನಿಕರಲ್ಲಿ ಅರಿವುಮೂಡಿಸುವ ಸಲುವಾಗಿ ಈ ಪ್ರಕಟಣೆಯನ್ನು ತಮ್ಮ ಪ್ರತಿಷ್ಟಿತ ಮಾಧ್ಯಮದಲ್ಲಿ ಪ್ರಕಟಿಸಬೇಕಾಗಿ ವಿನಂತಿ.

ಧನ್ಯವಾದಗಳೊಂದಿಗೆ ಡಾ. ಪ್ರಶಾಂತ್ ಮಾರ್ಲ ಕೆ. ವೈದ್ಯಕೀಯ ನಿರ್ದೇಶಕರು ಎ.ಜೆ. ಆಸ್ಪತ್ರೆ ಮತ್ತು ಸಂಶೋಧನಾಕೇಂದ್ರ


Spread the love