ಎ.14 – ಪಿಲಿಕುಳದ ಗುತ್ತುಮನೆಯಲ್ಲಿ ಬಿಸುಪರ್ಬ

Spread the love

ಎ.14 – ಪಿಲಿಕುಳದ ಗುತ್ತುಮನೆಯಲ್ಲಿ ಬಿಸುಪರ್ಬ

ಮಂಗಳೂರು :- ಪಿಲಿಕುಳದ ಗುತ್ತುಮನೆಯಲ್ಲಿ ಎಪ್ರಿಲ್ 14 ರಂದು ಬಿಸುಪರ್ಬವನ್ನು ಸಾಂಪ್ರದಾಯಿಕವಾಗಿ ಆಚರಿಸಲಾಗುತ್ತಿದೆ. ಅಂದು ಬೆಳಿಗ್ಗೆ 10 ಗಂಟೆಗೆ ಬಿಸುಕಣಿ ಇಡುವುದರೊಂದಿಗೆ ಕಾರ್ಯಕ್ರಮ ಪ್ರಾರಂಭಗೊಂಡು ಸಾಂಸ್ಕøತಿಕ ಕಾರ್ಯಕ್ರಮಗಳ ಜೊತೆಗೆ ಮಧ್ಯಾಹ್ನ 12.30 ರಿಂದ ಬಿಸುಪರ್ಬದ 26 ಬಗೆಯ ವಿಶೇಷ ಖಾದ್ಯಗಳ ಸಸ್ಯಹಾರಿ ಭೋಜನದ ವ್ಯವಸ್ಥೆ ಇದೆ.

ಬಿಸುಪರ್ಬದ ಅಂಗವಾಗಿ ತಾರಾಲಯದಲ್ಲಿ ಅತ್ಯಾಕರ್ಷಕ ಪ್ರದರ್ಶನವನ್ನು ಏರ್ಪಡಿಸಲಾಗುವುದು. ಇದರ ಪ್ರಯೋಜನವನ್ನು ಪಡೆಯಲು ರೂ.300/- ರ ಪ್ಯಾಕೇಜ್ ಕೂಪನ್‍ಗಳನ್ನು ಮುಖ್ಯದ್ವಾರದ ಬಾಕ್ಸ್ ಆಫೀಸಿನಲ್ಲಿ ಮುಂಚಿತವಾಗಿ ಪಡೆಯಬಹುದು ಹಾಗೂ ಈ ಭೋಜನದ ಕೂಪನ್‍ಗಳನ್ನು ಪಡೆದವರು ಎಪ್ರಿಲ್ 14 ರಂದು ಪಿಲಿಕುಳದ ಎಲ್ಲಾ ಆಕರ್ಷಣೆಗಳಿಗೆ ಪ್ರವೇಶವನ್ನು ಕೂಡಾ ಪಡೆಯಬಹುದು ಎಂದು ಕಾರ್ಯನಿರ್ವಾಹಕ ನಿರ್ದೇಶಕರ ಪ್ರಕಟಣೆ ತಿಳಿಸಿದೆ.


Spread the love