ಎ. 20 ರಿಂದ ಕದ್ರಿ ಉದ್ಯಾನವನದಲ್ಲಿ ಪ್ರವೇಶ ಶುಲ್ಕ

Spread the love

ಎ. 20 ರಿಂದ ಕದ್ರಿ ಉದ್ಯಾನವನದಲ್ಲಿ ಪ್ರವೇಶ ಶುಲ್ಕ

ಮಂಗಳೂರು : ಕದ್ರಿ ಉದ್ಯಾನವನದಲ್ಲಿ ಹೊಸದಾಗಿ ನಿರ್ಮಿಸಲಾಗಿರುವ ಸಂಗೀತ ಕಾರಂಜಿ/ಲೇಸರ್ ಶೋ ಹಾಗೂ ಉದ್ಯಾನವನ ವೀಕ್ಷಣೆಗೆ ಬರುವ ಸಾರ್ವಜನಕರಿಂದ ಎಪ್ರಿಲ್ 20 ರಿಂದ ಪ್ರವೇಶ ಶುಲ್ಕವನ್ನು ಕದ್ರಿ ಅಭಿವೃದ್ದಿ ಸಮಿತಿಯ ನಿರ್ಣಯದಂತೆ ನಿಗದಿಪಡಿಸಲಾಗಿರುತ್ತದೆ. ಶುಲ್ಕದ ವಿವರ

ಸಂಗೀತ ಕಾರಂಜಿ ಮತ್ತು ಲೇಶರ್ ಶೋ ವೀಕ್ಷಣೆಗೆ ವಯಸ್ಕರಿಗೆ ರೂ. 50/-, ಮಕ್ಕಳಿಗೆ ರೂ. 25/- (6 ವರ್ಷದಿಂದ 12 ವರ್ಷದೊಳಗೆ), ಹಳೆ ಜಿಂಕೆ ಉದ್ಯಾನವನ ವೀಕ್ಷಣೆಗೆ ವಯಸ್ಕರಿಗೆ ರೂ. 10/-, ಮಕ್ಕಳಿಗೆ ರೂ. 5/- (6 ವರ್ಷದಿಂದ 12 ವರ್ಷದೊಳಗೆ) ಎಂದು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು, ರಾಜ್ಯವಲಯ, ಮಂಗಳೂರು ಇವರ ಪ್ರಕಟಣೆ ತಿಳಿಸಿದೆ.


Spread the love