ಐ.ಸಿ.ವೈ.ಎಂ ಉದ್ಯಾವರ : ಸುವರ್ಣ ಮಹೋತ್ಸವದ ಲಾಂಛನ  ಬಿಡುಗಡೆ

ಐ.ಸಿ.ವೈ.ಎಂ ಉದ್ಯಾವರ : ಸುವರ್ಣ ಮಹೋತ್ಸವದ ಲಾಂಛನ  ಬಿಡುಗಡೆ

ಉಡುಪಿ : ಉದ್ಯಾವರ ಗ್ರಾಮದ ಹಿರಿಯ ಸಂಸ್ಥೆಗಳಲ್ಲಿ ಒಂದಾಗಿರುವ ಭಾರತೀಯ ಕಥೋಲಿಕ್ ಯುವ ಸಂಚಲನ (ಐಸಿವೈಎಂ) ಉದ್ಯಾವರ ಸುವರ್ಣ ಮಹೋತ್ಸವದ ಸಂಭ್ರಮದಲ್ಲಿದೆ. 2020 ಜನವರಿ 19 ಆದಿತ್ಯವಾರ ರಂದು ಸುವರ್ಣ ಮಹೋತ್ಸವದ ಉದ್ಘಾಟನೆ ಧರ್ಮಾಧ್ಯಕ್ಷರು, ಧಾರ್ಮಿಕ ಮುಖಂಡರು, ರಾಜ್ಯ ರಾಷ್ಟ್ರೀಯ ಮುಖಂಡರುಗಳ ಉಪಸ್ಥಿತಿಯಲ್ಲಿ ನಡೆಯಲಿದೆ.

ಇಂದು ಸಂತ ಫ್ರಾನ್ಸಿಸ್ ಜೇವಿಯರ್ ದೇವಾಲಯದಲ್ಲಿ ಬೆಳಗ್ಗಿನ ಪೂಜಾ ವಿಧಿಗಳ ಬಳಿಕ ನಡೆದ ಸರಳ ಸಮಾರಂಭದಲ್ಲಿ ಉಡುಪಿ ಧರ್ಮಪ್ರಾಂತ್ಯದ ಕುಲಪತಿ ಮತ್ತು ಐಸಿವೈಎಂ ಉದ್ಯಾವರ ಘಟಕದ ನಿರ್ದೇಶಕರಾಗಿರುವ ಅತಿ ವಂದನೀಯ ಸ್ಟ್ಯಾನಿ ಬಿ ಲೋಬೊ ರವರು ಸುವರ್ಣ ಮಹೋತ್ಸವದ ಲಾಂಛನವನ್ನು ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ಸಹಾಯಕ ಧರ್ಮಗುರು ವಂದನೀಯ ರಾಲ್ವಿನ್ ಅರಾನ್ನ, ಸುವರ್ಣ ಮಹೋತ್ಸವದ ಅಧ್ಯಕ್ಷ ಮೈಕಲ್ ಡಿಸೋಜ, ಪ್ರಧಾನ ಕಾರ್ಯದರ್ಶಿ ಡೋರ ಆರೋಜ, ಕೋಶಾಧಿಕಾರಿ ರೋಶನ್ ಕ್ರಾಸ್ತಾ, ಐಸಿವೈಎಂ ಅಧ್ಯಕ್ಷ ರೋಯ್ ಕಾಸ್ತೆಲಿನೋ, ಕಾರ್ಯದರ್ಶಿ ಪ್ರಿಯಾಂಕಾ ಡಿಸೋಜಾ ಮತ್ತಿತರರು ಉಪಸ್ಥಿತರಿದ್ದರು. ಸುವರ್ಣ ಮಹೋತ್ಸವದ ಕಾರ್ಯಕ್ರಮಗಳ ಸಂಚಾಲಕ ಸ್ಟೀವನ್ ಕುಲಾಸೊ ಉದ್ಯಾವರ ಕಾರ್ಯಕ್ರಮ ನಿರೂಪಿಸಿದರು.