ಕಬಡ್ಡಿಪಟು ರಿಶಾಂಕ್ ಅವರಿಗೆ ದೇವಾಡಿಗ ಯುವ ಸಾಧಕ ಪ್ರಶಸ್ತಿ ಪ್ರದಾನ

Spread the love

ಕಬಡ್ಡಿಪಟು ರಿಶಾಂಕ್ ದೇವಾಡಿಗರಿಗೆ ದೇವಾಡಿಗ ಯುವ ಸಾಧಕ ಪ್ರಶಸ್ತಿ ಪ್ರದಾನ

ಉಡುಪಿ: ಖ್ಯಾತ ಕಬಡ್ಡಿ ಕ್ರೀಡಾಪಟು ರಿಶಾಂಕ್ ದೇವಾಡಿಗ ಅವರನ್ನು 2017ನೇ ಸಾಲಿನ ದೇವಾಡಿಗ ಯುವ ಸಾಧಕ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ದೇವಾಡಿಗ ಯುವವೇದಿಕೆ(ರಿ)ಉಡುಪಿ ಇದರ ವತಿಯಿಂದ ಉಡುಪಿಯ ಕುಂಜಿಬೆಟ್ಟುವಿನ ಶಾರದಾ ಕಲ್ಯಾಣ ಮಂಟಪದಲ್ಲಿ ನಡೆದ 2017ನೇ ಸಾಲಿನ ವಿದ್ಯಾರ್ಥಿ ವೇತನ, ಪ್ರತಿಭಾ ಪುರಸ್ಕಾರ, ಸಾಧಕರ ಸನ್ಮಾನ ಕಾರ್ಯಕ್ರಮದಲ್ಲಿ ರಿಶಾಂಕ್ ದೇವಾಡಿಗರನ್ನು ದೇವಾಡಿಗ ಯುವ ಸಾಧಕ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಪ್ರಶಸ್ತಿ ಫಲಕ ,ಪತ್ರ ಹಾಗೂ 10 ಸಾವಿರ ನಗದನ್ನು ಒಳಗೊಂಡಿತ್ತು.

ಈ ಸಂದರ್ಬದಲ್ಲಿ ಉಡುಪಿ ಉಪ ತಹಶೀಲ್ಧರ್ ಗೋಪಾಲ್ ಸೇರಿಗಾರ್, ಕುವೆಂಪು ವಿವಿಯ ವಿಶ್ರಾಂತ ಉಪಕುಲಪತಿ ಡಾ.ಬಿ.ಎಸ್ ಸೇರಿಗಾರ್, ಲಂಡನ್ ನ ಮನೋ ರೋಗ ತಜ್ಞ ಸುಂದರ್ ಮೊಯ್ಲಿ, ನಿವೃತ್ತ ಪ್ರಾಂಶುಪಾಲೆ ಮಾಧವಿ ಭಂಡಾರಿ, ಮಾನವ ಹಕ್ಕುಗಳ ಸಮಿತಿಯ ರಾಜ್ಯ ಉಪಾದ್ಯಕ್ಷ ಲಕ್ಷ್ಮೀಕಾಂತ ಬೆಸ್ಕೂರು, ಪ್ರಿಯದರ್ಶಿನಿ ದೇವಾಡಿಗ, ಉದ್ಯಮಿ ಹರೀಶ್ ದೇವಾಡಿಗ, ಶ್ರೀಧರ್ ದೇವಾಡಿಗ, ರಾಘವೇಂದ್ರ ದೇವಾಡಿಗ, ಸಮಾಜ ಸೇವಕ ನಿತ್ಯಾನಂದ ಒಳಕಾಡು ಮತ್ತಿತರರು ಉಪಸ್ಥಿತರಿದ್ದರು.


Spread the love