ಕರಾವಳಿಯಲ್ಲಿ ವೈಜ್ಞಾನಿಕ ಮೇಕೆ ಸಾಕಾಣೆ ತರಬೇತಿ 

Spread the love

ಕರಾವಳಿಯಲ್ಲಿ ವೈಜ್ಞಾನಿಕ ಮೇಕೆ ಸಾಕಾಣೆ ತರಬೇತಿ 

ಮ0ಗಳೂರು : ನವೆಂಬರ್ 17 ರಂದು ಕೃಷಿ ವಿಜ್ಞಾನ ಕೇಂದ್ರ, ಕಂಕನಾಡಿಯಲ್ಲಿ ಕರಾವಳಿಯಲ್ಲಿ ವೈಜ್ಞಾನಿಕ ಮೇಕೆ ಸಾಕಣೆ ಬಗ್ಗೆ ಒಂದು ದಿನದ ತರಬೇತಿ ಶಿಬಿರವನ್ನು ಏರ್ಪಡಿಸಲಾಗಿತ್ತು.

ಕಾರ್ಯಕ್ರಮವನ್ನು ಪಶುಸಂಗೋಪನಾ ಇಲಾಖೆ ಉಪನಿರ್ದೇಶಕ ಡಾ. ಆನಂದ್ ಬಿ. ಉದ್ಘಾಟಿಸಿದರು. ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ. ಶಿವಕುಮಾರ್ ಮಗದ ಆಡು ಸಾಕಾಣೆ ಬಗ್ಗೆ ಮಾಹಿತಿ ಕೈಪಿಡಿಯನ್ನು ಬಿಡುಗಡೆ ಮಾಡಿದರು.

ಕೆನರಾ ಬ್ಯಾಂಕ್‍ನ ಮ್ಯಾನ್ಯೇಜರ್ ರಾಜು ಬ್ಯಾಂಕ್‍ನ ವತಿಯಿಂದ ಆಡುಸಾಕಾಣಿಕೆಗೆ ಸಿಗುವಂತಹ ಸೌಲಭ್ಯಗಳ ಬಗ್ಗೆ ತಿಳಿಸಿಕೊಟ್ಟರು. ಕೃಷಿ ವಿಜ್ಞಾನ ಕೇಂದ್ರದ ಪಶುಸಂಗೋಪನಾ ವಿಜ್ಞಾನಿ ಡಾ. ರಶ್ಮಿ ಎಲ್., ಪ್ರಾದೇಶಿಕ ಸಂಶೋಧನಾ ವಿಭಾಗ ಮುಖ್ಯಸ್ಥ ಡಾ. ವಸಂತ್ ಕುಮಾರ್ ಶೆಟ್ಟಿ ಹಾಗೂ ಪ್ರಭಾಕರ್ ಸಂಪನ್ಮೂಲ ವ್ಯಕ್ತಿಗಳಾಗಿ ಕಾರ್ಯನಿರ್ವಹಿಸಿ ದಕ್ಷಿಣ ಕನ್ನಡ ಜಿಲ್ಲೆಗೆ ಹೊಂದಿಕೊಳ್ಳುವ ಮೇವಿನ ಬೆಳೆಗಳು, ಆಡಿನ ತಳಿಗಳು, ಮನೆ ನಿರ್ಮಾಣ, ಲಾಭ -ನಷ್ಟ ಆಡಿಗೆ ತಗಲುವ ರೋಗಗಳು ಹಾಗೂ ತಡೆಗಟ್ಟುವ ಕ್ರಮಗಳ ಬಗ್ಗೆ ಸುದೀರ್ಘವಾಗಿ ಮಾಹಿತಿ ನೀಡಿದರು.

ಕೃಷಿ ವಿಜ್ಞಾನ ಕೇಂದ್ರದ ಬೇಸಾಯ ಶಾಸ್ತ್ರಜ್ಞ ಹರೀಶ್ ಶೆಣೈ ವಂದಿಸಿದರು.


Spread the love