ಕರ್ನಾಟಕ – ಕೇರಳ ಗಡಿಯಲ್ಲಿ ಬೃಹತ್ ಗಾಂಜಾ ಜಾಲಾ ಪತ್ತೆ

Spread the love

ಕರ್ನಾಟಕ – ಕೇರಳ ಗಡಿಯಲ್ಲಿ ಬೃಹತ್ ಗಾಂಜಾ ಜಾಲಾ ಪತ್ತೆ

ಮಂಗಳೂರು: ಕರ್ನಾಟಕ – ಕೇರಳ ಗಡಿಪ್ರದೇಶವಾಧ ನೆತ್ತಿಲಪದವು ಎಂಬಲ್ಲಿ ಗಾಂಜಾ ಮಾರಾಟ ಜಾಲವನ್ನು ಪತ್ತೆ ಹಚ್ಚುವಲ್ಲಿ ಮಂ. ದಕ್ಷಿಣ ರೌಡಿ ನಿಗ್ರಹದ ದಳದ  ಪೊಲೀಸರು ಯಶಸ್ವಿಯಾಗಿರುತ್ತಾರೆ.

ಮಂಗಳೂರು ದಕ್ಷಿಣ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರಿಗೆ  ದಿನಾಂಕ 17-1-2018 ರಂದು ಕೇರಳ ಗಡಿ ಪ್ರದೆಶವಾದ ನೆತ್ತಲಪದವು ಎಂಬಲ್ಲಿ ಮಹಮ್ಮದ್ ಅಜೀಜ್ @ ಅಬ್ದುಲ್ ಅಜೀಜ್ ಮತ್ತು ಇಮ್ತಿಯಾಜ್ ಎಂಬವರು ಆಕ್ಟೀವಾ ಸ್ಕೂಟರ್ ನಲ್ಲಿ ತಿರುಗಾಡುತ್ತಾ ಗಾಂಜಾ ಮಾರಾಟ ಮಾಡುತ್ತಿದ್ದಾರೆ ಎಂಬ ಮಾಹಿತಿಯ ಮೇರೆಗೆ ರೌಡಿನಿಗ್ರಹದಳದ ಸಿಬ್ಬಂದಿಗಳು ಮತ್ತು ಕೊಣಾಜೆ ಠಾಣೆಯ ಪೊಲೀಸ್ ನಿರೀಕ್ಷಕರೊಂದಿಗೆ ಕಾರ್ಯಾಚರಣೆ ನಡೆಸಿ, ನೆತ್ತಿಲ ಪದವು ಕಲ್ಲರಕೋಡಿ ಎಂಬಲ್ಲಿ ಸುಮಾರು 10.250 ಕೆ.ಜಿ. ಗಾಂಜಾ ಮತ್ತು ಕೆ.ಎ.19-ಕ್ಯೂ -1625 ನಂಬ್ರದ ಸ್ಕೂಟರನ್ನು ಸ್ವಾಧೀನಪಡಿಸಿಕೊಂಡಿರುತ್ತಾರೆ. ಸ್ಥಳದಲ್ಲಿ ಗ್ರಾಹಕರಿಗೆ ಮಾರಾಟ ಮಾಡಲು ಗಾಂಜಾ ಪೊಟ್ಟಣಗಳೊಂದಿಗೆ ಕಾಯುತ್ತಿದ್ದಾಗ ಧಾಳಿ ಮಾಡಿದ ಪೊಲೀಸರನ್ನು ಕಂಡು ಗುಡ್ಡದ ಇಳಿಜಾರಿನಲ್ಲಿ ಓಡಿ ಪರಾರಿಯಾಗಿರುತ್ತಾರೆ. ಸ್ವಾಧೀನಪಡಿಕೊಂಡ ಗಾಂಜಾದ ಬೆಲೆ ಸುಮಾರು ರೂ. 1,60,000/- ಎಂದು ಅಂದಾಜಿಸಲಾಗಿದೆ.

 ಆರೋಪಿಗಳಲ್ಲಿ ಮಹಮ್ಮದ್ ಅಜೀಜ್ ಎಂಬಾತನು ಚಾಳಿ ಬಿದ್ದ ಗಾಂಜಾ ಮಾರಾಟಗಾರನಾಗಿದ್ದು, ಉಳ್ಳಾಲ ಮತ್ತು ಕೊಣಾಜೆ ಠಾಣೆ ಸೇರಿದಂತೆ ಹಲವಾರು ಗಾಂಜಾ ಮಾರಾಟ ಪ್ರಕರಣಗಳ ಆರೋಪಿಯಾಗಿರುತ್ತಾನೆ. ಎರಡನೇ ಆರೋಪಿ ಇಮ್ತಿಯಾಜನು ಉಳ್ಳಾಲ ಠಾಣೆಯ ಹಳೇ ಅಪರಾಧಿಯಾಗಿದ್ದು, ಈತನ ವಿರುದ್ದ ಕೂಡಾ ಹಲವಾರು ಪ್ರಕರಣ ದಾಖಲಾಗಿರುತ್ತದೆ.

ಮಂಗಳೂರು ದಕ್ಷಿಣ ಉಪ ವಿಭಾಗದ ಎ.ಸಿ.ಪಿ. ರವರ ನೇತ್ರತ್ವದಲ್ಲಿ ರೌಡಿ ನಿಗ್ರಹ ದಳದ ಸಿಬ್ಬಂದಿಯವರು ಪತ್ತೆ ಕಾರ್ಯದಲ್ಲಿ ಬಾಗವಹಿಸಿದ್ದಾರೆ.


Spread the love