ಕರ್ನಾಟಕ ದರ್ಶನ: ಜಾನಪದ ಪರಂಪರೆ ಆನಪದ ಸಾಹಿತ್ಯ- ಡಾ.ಪಿ.ಕೆ.ರಾಜಶೇಖರ್

Spread the love

ಕರ್ನಾಟಕ ದರ್ಶನ: ಜಾನಪದ ಪರಂಪರೆ ಆನಪದ ಸಾಹಿತ್ಯ- ಡಾ.ಪಿ.ಕೆ.ರಾಜಶೇಖರ್

ವಿದ್ಯಾಗಿರಿ: ಜನಪದ ಸಾಹಿತ್ಯವು ಅನಕ್ಷರಸ್ಥರ ವಿಶ್ವವಿದ್ಯಾನಿಲಯವಿದ್ದಂತೆ. ಇದು ಮೌಖಿಕ ಸಂಸ್ಕøತಿಯಲ್ಲಿ ಬೆಳೆದಿದ್ದು, ವೇಗಗತಿಯ ಪ್ರಸರಣ ಸಾಮಥ್ರ್ಯವನ್ನು ಹೊಂದಿದೆ ಎಂದು ಖ್ಯಾತ ಜನಪದ ವಿದ್ವಾಂಸ ಡಾ. ಪಿ.ಕೆ. ರಾಜಶೇಖರ್ ಹೇಳಿದರು.

ಆಳ್ವಾಸ್ ನುಡಿಸಿರಿಯ ಮೂರನೇ ದಿನ ರತ್ನಾಕರವರ್ಣಿ ವೇದಿಕೆಯಲ್ಲಿ ನಡೆದ `ಕರ್ನಾಟಕ ದರ್ಶನ : ಜನಪದ ಪರಂಪರೆ’ ಎಂಬ ವಿಚಾರಗೋಷ್ಠಿಯಲ್ಲಿ ಜನಪದ ಸಾಹಿತ್ಯದ ಕುರಿತು ಮಾತನಾಡಿದರು.

ಜನಪದ ಸಾಹಿತ್ಯವು ಅಲಿಖಿತ ರೂಪದಲ್ಲಿ ರೂಪಿತವಾಗಿದ್ದು, ಪರಂಪರಾಗತಿಯ ಸಂಸ್ಕøತಿಯನ್ನು ಹೊಂದಿದೆ. ಬಾಯಿಂದ ಬಾಯಿಗೆ ಬಹಳ ವೇಗವಾಗಿ ಪ್ರಸರಣವಾಗುವ ಶಕ್ತಿ ಈ ಸಾಹಿತ್ಯಕ್ಕಿದೆ ಎಂದು ಹೇಳಿದರು.

ಸಾಹಿತ್ಯ ಸಂಸ್ಕøತಿಯ ಬಗ್ಗೆ ಮಾತನಾಡಿದ ಅವರು, ಒಂದು ದೇಶದ ಸಂಸ್ಕøತಿಯನ್ನು ಜಾನಪದ ಮತ್ತು ಗ್ರಂಥಪದ ಎಂದು ಎರಡು ವಿಭಾಗಗಳಲ್ಲಿ ವಿಗಂಡಿಸುತ್ತೇವೆ. ಜಾನಪದವು ಅನಾಮಧೇಯವಾಗಿ ಬೆಳೆದು ಬಂದರೆ, ಗ್ರಂಥಪದವು ಅಕ್ಷರಸ್ಥ ಸಂಪ್ರದಾಯದಿಂದ ಬೆಳೆದು ನಗರ ಸಂಸ್ಕøತಿಯಾಗಿ ನಾಮ ಕಡ್ಡಾಯದ ಮೂಲಕ ರೂಪಿತವಾಗಿದೆ. ಜನಪದವು ಸಮಷ್ಠ ಸೃಷ್ಠಿಯಾಗಿದ್ದು, ಗ್ರಂಥ ಪದವು ವ್ಯಕ್ತಿ ಸೃಷ್ಠಿಯಾಗಿವೆ. ಅದ್ದರಿಂದ ಜನಪದ ಸಾಹಿತ್ಯದ ವ್ಯಾಪ್ತಿ ವಿಶಾಲವಾಗಿದೆ ಎಂದು ವಿವರಿಸಿದರು.

ಮಾನವನ ಜೀವಿತದ ಎಲ್ಲಾ ಜ್ಞಾನ-ವಿಜ್ಞಾನಗಳನ್ನು ಈ ಸಾಹಿತ್ಯ ಒಳಗೊಂಡಿದೆ. ಜನಪದ ಎಂಬುವುದು ಆದಿ ಕಾಲದಿಂದ ಆಧುನಿಕ ಕಾಲದವರೆಗೆ ಜೀವಂತವಾಗಿದ್ದು ಇದು ಪಳೆಯುಳಿಕೆಯಾಗಿ ಉಳಿದು ಬಂದಿದೆ ಎಂದ ಡಾ.ಪಿ.ಕೆ.ರಾಜಶೇಖರ್ ಜಾನಪದ ಸಂಸ್ಕøತಿಯನ್ನು ಉಳಿಸುವ ಬಗ್ಗೆ ವಿವರಿಸಿದರು. ಗ್ರಾಮೀಣ ಜನರಲ್ಲಿ ಜನಪದ ಸಾಹಿತ್ಯದ ಒಲವು ಅಪಾರವಾದ್ದು ಆ ಕಾರಣದಿಂದ ಗ್ರಾಮೀಣ ಭಾಗದಲ್ಲಿ ಈ ಸಾಹಿತ್ಯವು ಜೀವಂತದ ನೆಲೆಯನ್ನು ಕಂಡುಕೊಂಡಿದೆ. ಹಾಗಾಗಿ ಜನಪದ, ಹಾಗೂ ಶಾಸ್ತ್ರಬದ್ಧ ಹಾಡುಗಳು ಅಧಿಕವಾಗಿದ್ದು ಇವುಗಳ ಸಂಗ್ರಹಣೆ ಸೂಕ್ತ ರೀತಿಯಲ್ಲಿ ಆದರೆ ಜನಪದ ಸಾಹಿತ್ಯವು ಉತ್ತುಂಗಕ್ಕೆ ಏರಲು ಸಾಧ್ಯ. ಅನೇಕ ಶಾಸ್ತ್ರದ ಗ್ರಂಥಗಳು ಇಂದು ಕಣ್ಮರೆಯಾಗುತ್ತಿದ್ದು ಅವುಗಳನ್ನು ಉಳಿಸುವ ಪ್ರಯತ್ನ ಆಧುನಿಕ ಯುಗದಲ್ಲಿ ಆಗಬೇಕಾಗಿರುವುದು ಅನಿವಾರ್ಯ ಎಂದರು.

ವೇದಿಕೆಯಲ್ಲಿ ಆಳ್ವಾಸ್ ನುಡಿಸಿರಿ-2018ರ ಸಮ್ಮೇಳನಾಧ್ಯಕ್ಷೆ ಡಾ.ಮಲ್ಲಿಕಾ ಎಸ್.ಘಂಟಿ ಹಾಗೂ ಆಳ್ವಾಸ್ ನುಡಿಸಿರಿ ಸ್ವಾಗತ ಸಮಿತಿಉಪಾಧ್ಯಕ್ಷ ಸಂಪತ್‍ಕುಮಾರ್ ಉಪಸ್ಥಿತರಿದ್ದರು.


Spread the love