ಕಲಬುರ್ಗಿಯಲ್ಲಿ ವಕೀಲರ ಹತ್ಯೆ – ಆರೋಪಿಗಳ ಶೀಘ್ರ ಬಂಧನವಾಗಲಿ – ವಕೀಲ ಅಬ್ದುಲ್ ರೆಹಮಾನ್

Spread the love

ಕಲಬುರ್ಗಿಯಲ್ಲಿ ವಕೀಲರ ಹತ್ಯೆ – ಆರೋಪಿಗಳ ಶೀಘ್ರ ಬಂಧನವಾಗಲಿ – ವಕೀಲ ಅಬ್ದುಲ್ ರೆಹಮಾನ್

ಉಡುಪಿ: ಕಲಬುರಗಿಯಲ್ಲಿ ಹಾಡಹಗಲೇ ವಕೀಲ ಈರಣ್ಣ ಗೌಡ ಪಾಟೀಲ್ ಅವರನ್ನು ಮಾರಕಾಸ್ತ್ರಗಳಿಂದ ದಾಳಿ ನಡೆಸಿ ಭೀಕರ ಹತ್ಯೆ ಮಾಡಿರುವ ಆರೋಪಿಗಳನ್ನೂ ಶೀಘ್ರವಾಗಿ ಬಂಧಿಸಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ವಕೀಲ ಅಬ್ದುಲ್ ರೆಹಮಾನ್ ರಾಜ್ಯ ಸರಕಾರವನ್ನು ಆಗ್ರಹಿಸಿದ್ದಾರೆ.

ಇತ್ತೀಚೆಗೆ ರಾಜ್ಯದಲ್ಲಿ ವಕೀಲರ ಮೇಲೆ ಹಲ್ಲೆ ಪ್ರಕರಣಗಳು, ಕೊಲೆ ಮಾಡುವುದು ಹೆಚ್ಚಾಗುತ್ತಿದ್ದು ವಕೀಲ ಸಮುದಾಯಕ್ಕೆ ನಿರ್ಭೀತಿಯಿಂದ ಕೆಲಸ ಮಾಡುವುದು ಕಷ್ಟ ಸಾಧ್ಯವಾಗುತ್ತಿದೆ. ಕೋರ್ಟ್ ಗೆ ಹೋಗುತ್ತಿದ್ದ ವಕೀಲ ಈರಣ್ಣ ಗೌಡ ಪಾಟೀಲ್ ರನ್ನು ದುಷ್ಕರ್ಮಿಗಳು ಮಚ್ಚು ಹಿಡಿದು ಅಟ್ಟಾಡಿಸಿಕೊಂಡು ಬಂದು ಹತ್ಯೆ ಮಾಡಿರುವುದು ಖಂಡನೀಯವಾಗಿದೆ. ರಾಜ್ಯ ಸರಕಾರದ ಗೃಹ ಇಲಾಖೆ ಕೂಡಲೇ ಆರೋಪಿಗಳನ್ನು ಬಂಧಿಸಿ ಕಠಿಣ ಸೆಕ್ಷನ್ ಗಳನ್ನು ಹಾಕಿ ಜೈಲಿಗೆ ಅಟ್ಟಬೇಕು. ಅಲ್ಲದೆ ಮೃತ ವಕೀಲ ಈರಣ್ಣ ಗೌಡರ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು. ವಕೀಲರಿಗೆ ತಮ್ಮ ಕರ್ತವ್ಯ ನಿರ್ವಹಿಸಲು ಯಾವುದೇ ರೀತಿಯ ಭಯದ ವಾತಾವರಣ ಸೃಷ್ಠಿಯಾಗದಂತೆ ಸರಕಾರ ಸೂಕ್ತ ಭದ್ರತೆ ನೀಡವಂತೆ ಅವರು ಆಗ್ರಹಿಸಿದ್ದಾರೆ.


Spread the love