ಕಾಪಿಕಾಡು ರಾ.ಹೆ.66ರಲ್ಲಿ ರಸ್ತೆ ಅಪಘಾತಕ್ಕೆ ತಲಪಾಡಿ ನಿವಾಸಿ ಬಲಿ

Spread the love

ಕಾಪಿಕಾಡು ರಾ.ಹೆ.66ರಲ್ಲಿ ರಸ್ತೆ ಅಪಘಾತಕ್ಕೆ ತಲಪಾಡಿ ನಿವಾಸಿ ಬಲಿ

ಮಂಗಳೂರು: ಕಾರು ಮತ್ತು ದ್ವಿಚಕ್ರ ವಾಹನವೊಂದರ ನಡುವೆ ಸಂಭವಿಸಿದ ಅಪಘಾತದಲ್ಲಿ ದ್ವಿಚಕ್ರ ವಾಹನ ಸವಾರ ಮೃತಪಟ್ಟ ಘಟನೆ ತೊಕ್ಕೊಟ್ಟು ಸಮೀಪದ ಕಾಪಿಕಾಡು ರಾ.ಹೆ.66ರಲ್ಲಿ  ಸಂಭವಿಸಿದೆ.

ಮೃತರನ್ನು ತಲಪಾಡಿ ತಚ್ಚಣಿ ನಿವಾಸಿ ಮನೋಹರ್ ಬೆಳ್ಚ್ಚಡ (50) ಎಂದು ಗುರುತಿಸಲಾಗಿದೆ.

ಅಪಘಾತಕ್ಕೀಡಾಗಿ ಗಂಭೀರ ಗಾಯಗೊಂಡಿದ್ದ ಮನೋಹರ್ ಅವರನ್ನು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.


Spread the love