ಕಾಪು ಎ.ಎಸ್ ಐ ಗೆ ಕೊರೋನಾ ಪಾಸಿಟಿವ್ – ಠಾಣೆ ತಾತ್ಕಾಲಿಕ ಸ್ಥಳಾಂತರ

Spread the love

ಕಾಪು ಎ.ಎಸ್.ಐ ಗೆ ಕೊರೋನಾ ಪಾಸಿಟಿವ್ – ಠಾಣೆ ತಾತ್ಕಾಲಿಕ ಸ್ಥಳಾಂತರ

ಕಾಪು: ಕೊರೋನಾ ಮಹಾಮಾರಿ ಪೊಲೀಸರನ್ನು ಬೆಂಬಿಡದೆ ಕಾಡುತ್ತಿದ್ದು ಉಡುಪಿ ಜಿಲ್ಲೆಯ ಕಾಪು ಠಾಣೆಯ ಎ ಎಸ್ಸೈ ಒಬ್ಬರಿಗೆ ಕೊರೋನಾ ಪಾಸಿಟವ್ ದೃಢಪಟ್ಟಿದ್ದು, ಠಾಣೆಯನ್ನು ಎರಡು ದಿನಗಳ ಕಾಲ ತಾತ್ಕಾಲಿಕವಾಗಿ ಕ್ಲೋಸ್ ಡೌನ್ ಮಾಡಲಾಗಿದೆ.

ಸೋಂಕಿತ ಎ.ಎಸ್.ಐ ಅವರು ಪ್ರತಿದಿನ ಕೋಟದಿಂದ ಬಸ್ ಮೂಲಕ ಕಾಪುವಿಗೆ ಪ್ರಯಾಣಿಸುತ್ತಿದ್ದು ಈ ವೇಳೆ ಸೋಂಕು ತಗಲಿರಬಹುದು ಎಂದು ಶಂಕಿಸಲಾಗಿದೆ

ಈ ಹಿನ್ನಲೆಯಲ್ಲಿ ಠಾಣೆಯನ್ನು ಎರಡು ದಿನಗಳ ಕಾಲ ಸಮೀಪದ ವೀರಭದ್ರ ದೇವಸ್ಥಾನಕ್ಕೆ ಸ್ಥಳಾಂತರ ಮಾಡಲಾಗಿದ್ದು, 48 ಗಂಟೆಗಳ ಅವಧಿಯಲ್ಲಿ ಠಾಣೆಯನ್ನು ಸ್ಯಾನಿಟೈಸ್ ಮಾಡಿ ಮತ್ತೆ ಕಾರ್ಯಚರಿಸಲಾಗುವುದು ಎಂದು ಮೂಲಗಳು ತಿಳಿಸಿವೆ.


Spread the love