ಕಾರು – ರಿಕ್ಷಾ ಮುಕಾಮುಖಿ ಡಿಕ್ಕಿ, ಮಹಿಳೆ ಸಾವು, ಐವರು ಗಾಯ

ಕಾರು – ರಿಕ್ಷಾ ಮುಖಾಮುಕಿ ಡಿಕ್ಕಿ, ಮಹಿಳೆ ಸಾವು, ಐವರು ಗಾಯ

ಬೆಳ್ತಂಗಡಿ: ಕಾರು ಮತ್ತು ಅಟೋರಿಕ್ಷಾ ನಡುವೆ ನಡೆದ ಮುಕಾಮುಖಿ ಅಫಘಾತದಲ್ಲಿ ಮಹಿಳೆಯೊಬ್ಬರು ಮೃತಪಟ್ಟು ಐದು ಮಂದಿ ಗಾಯಗೊಂಡ ಘಟನೆ ಗುರವಾಯನಕೆರೆಯಲ್ಲಿ ರವಿವಾರ ಸಂಭವಿಸಿದೆ.

accident-uppinangady-20160911-1 accident-uppinangady-20160911-2 accident-uppinangady-20160911-3 accident-uppinangady-20160911-4 accident-uppinangady-20160911-5 accident-uppinangady-20160911-6

ಮೃತಪಟ್ಟ ಮಹಿಳೆಯನ್ನು ಕೊರಂಜ ಗೇರುಕಟ್ಟೆ ನಿವಾಸಿ ವೀಣಾ (35) ಎಂದು ಗುರುತಿಸಲಾಗಿದೆ. ಗಾಯಗೊಂಡವರನ್ನು ವೀಣಾ ಅವರ ಪತಿ ಕಮಲಾಕ್ಷ, ಮಕ್ಕಳಾದ ಗಾಯತ್ರಿ, ರಕ್ಷಿತ್ ಹಾಗೂ ಇತರ ಇಬ್ಬರು ಪ್ರಯಾಣಿಕರಾದ ದೇವಕಿ ಹಾಗೂ ಅಕ್ಷಯ್ ಎಂದು ಗುರುತಿಸಲಾಗಿದೆ.

ಉಪ್ಪಿನಂಗಡಿ ಗುರುವಾಯನಕೆರೆ ಕಡೆಯಿಂದ ಗೇರುಕಟ್ಟೆಗೆ ಹೋಗುತ್ತಿದ್ದ ಕಮಲಾಕ್ಷ ಅವರು ಚಲಾಯಿಸುತ್ತಿದ್ದ ಅಟೋರಿಕ್ಷಾಗೆ ಉಪ್ಪಿನಂಗಡಿ ಕಡೆಯಿಂದ ಗುರುವಾಯನಕೆರೆ ಕಡೆಗೆ ಬರುತ್ತಿದ್ದ ಮಾರುತಿ ರಿಟ್ಜ್ ಕಾರು ಮುಖಾಮುಖಿ ಡಿಕ್ಕಿಯಾಗಿದ್ದು, ಅಫಘಾತದ ತೀವ್ರತೆಗೆ ಅಟೋರೀಕ್ಷಾ ಪಲ್ಟಿಯಾಗಿದ್ದು, ರಿಕ್ಷಾದಲ್ಲಿವರು ಅದರ ಅಡಿಗೆ ಸಿಲುಕಿ ಗಂಭೀರ ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ಆಸ್ಪತ್ರೆಗೆ ಸಾಗಿಸುವ ವೇಳೆಗೆ ಕಮಲಾಕ್ಷ ಅವರ ಪತ್ನಿ ವೀಣಾ ಮೃತಪಟ್ಟಿದ್ದಾರೆ. ಉಳಿದವರನ್ನು ಮಂಗಳೂರಿನ ಆಸ್ಪತ್ರೆಗೆ ಸಾಗಿಸಲಾಗಿದೆ;
ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.