ಕಾರ್ಕಳ ಅತ್ಯಾಚಾರ ಪ್ರಕರಣ: ಮೂರನೇ ಆರೋಪಿ ಅಭಯ್ ಬಿಜೆಪಿ ಕಾರ್ಯಕರ್ತ!

Spread the love

ಕಾರ್ಕಳ ಅತ್ಯಾಚಾರ ಪ್ರಕರಣ: ಮೂರನೇ ಆರೋಪಿ ಅಭಯ್ ಬಿಜೆಪಿ ಕಾರ್ಯಕರ್ತ!

ಉಡುಪಿ: ಕಾರ್ಕಳದಲ್ಲಿ ನಡೆದ ಯುವತಿಯ ಅತ್ಯಾಚಾರ ಪ್ರಕರಣದಲ್ಲಿ ಬಂಧಿತನಾಗಿರುವ ಮೂರನೇ ಆರೋಪಿ ಅಭಯ್ ಬಿಜೆಪಿ ಕಾರ್ಯಕರ್ತ ಹಾಗೂ ಸಂಘಟನೆಯ ಕಾರ್ಯಕರ್ತ ಎನ್ನಲಾಗಿದೆ.

ಮೂಲಗಳ ಪ್ರಕಾರ ಆರೋಪಿ ಕಾಪುವಿನ ವ್ಯಕ್ತಿಯೊಂದಿಗೆ ಸೇರಿಕೊಂಡು ಟಿಪ್ಪರ್ ಖರೀದಿಸಿದ್ದ ಆದರೆ ಲೋನ್ ಕಂತು ಬಾಕಿ ಇರಿಸಿದ್ದ ಕಾರಣ ಆತನ ವಾಹನವನ್ನು ಫೈನಾನ್ಸ್ ಕಂಪನಿ ಮುಟ್ಟುಗೋಲು ಹಾಕಿಕೊಂಡ ನಂತರ ಬೆಂಗಳೂರಿನಲ್ಲಿ ಸ್ಪಾ ಒಂದರಲ್ಲಿ ಕೆಲಸ ಮಾಡುತ್ತಿದ್ದ ಎಂದು ಹೇಳಲಾಗುತ್ತಿದೆ.

ಅಲ್ತಾಫ್ ಹಾಗೂ ಅಭಯ್ ಇಬ್ಬರೂ ಕಾರ್ಕಳ ಜೋಡುರಸ್ತೆ ಬಳಿ ಟಿಪ್ಪರ್ ನಿಲ್ಲಿಸುತ್ತಿದ್ದರು. ಇವರಿಬ್ಬರ ಮಧ್ಯೆ ಸ್ನೇಹ ಬೆಳೆದಿತ್ತು, ಇವರಿಬ್ಬರೂ ಒಟ್ಟಿಗೆ ತಿರುಗಾಡುತ್ತಿದ್ದಾರೆಂದು ಎನ್ನಲಾಗಿದೆ.

ಬಂಧಿತ ಆರೋಪಿ ಅಭಯ್ ತನ್ನ ಫೇಸ್ ಬುಕ್ ನಲ್ಲಿ ಶಾಸಕ ಸುನೀಲ್ ಕುಮಾರ್ ಫೋಟೊ ಹಾಕಿಕೊಂಡಿದ್ದು, ಅಷ್ಟೇ ಅಲ್ಲದೆ ಬಿಜೆಪಿ, ಬಜರಂಗದಳದಲ್ಲಿ ಗುರುತಿಸಿಕೊಂಡಿದ್ದಾನೆ. ಸೋಮವಾರ ನಡೆದ ಹಿಂದೂ ಹಿತರಕ್ಷಣಾ ಸಮಿತಿಯ ವತಿಯಿಂದ ಆಯೋಜಿಸಲಾಗಿದ್ದ ಪ್ರತಿಭಟನಾ ಸಭೆಯಲ್ಲಿ ಸುನೀಲ್ ಕುಮಾರ್ ಅವರು ಪ್ರಕರಣದ ಕುರಿತು ಭಾಷಣ ಮಾಡಿ ಲವ್ ಜಿಹಾದ್, ಡ್ರಗ್ಸ್ ವಿರುದ್ದ ಭಾರೀಯಾಗಿ ಮಾತನಾಡಿದ್ದರು.

ಆದರೆ ಅದೇ ಸುನೀಲ್ ಕುಮಾರ್ ಅವರ ಭಕ್ತನಾಗಿರುವ ಅಭಯ್ ಅತ್ಯಾಚಾರ ಆರೋಪಿಗೆ ಡ್ರಗ್ಸ್ ಪೊರೈಕೆ ಮಾಡಿರುವುದು ಬಿಜೆಪಿ ಹಾಗೂ ಪರಿವಾರ ಸಂಘಟನೆಗಳಿಗೆ ಮುಖಭಂಗ ಆಗುವಂತೆ ಮಾಡಿದೆ ಸದ್ಯ ಈಗ ಅಭಯ್ ಬಂಧನ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.

ಇನ್ನು ಕಳೆದ ತಿಂಗಳು ಬಜರಂಗದಳ ಡ್ರಗ್ಸ್ ವಿರೋಧಿ ಅಭಿಯಾನ ನಡೆಸಿತ್ತು. ಈ ಡ್ರಗ್ಸ್ ವಿರೋಧಿ ಅಭಿಯಾನದಲ್ಲಿ ಅಭಯ್ ಕೂಡ ಭಾಗಿಯಾಗಿದ್ದ. ಡ್ರಗ್ಸ್ ಮಾರಾಟದ ವಿರುದ್ಧ ಸಿಡಿದೆದ್ದಿದ್ದ. ಕಾರ್ಕಳ ಡಿವೈಎಸ್ಪಿಗೆ ಮನವಿ ನೀಡುವ ಸಮಯದಲ್ಲಿಯೂ ಜೊತೆಗಿದ್ದ. ಜಾಲತಾಣದಲ್ಲಿ ಅಭಯ್ ಫೋಟೋ ವೈರಲ್ ಆಗುತ್ತಿದೆ. ಪ್ರಮುಖ ಆರೋಪಿ ಅಲ್ತಾಫ್ಗೆ ಡ್ರಗ್ಸ್ ಪೂರೈಸಿದ್ದ ಅಭಯ್ನನ್ನು ಕಾರ್ಕಳ ಠಾಣೆ ಪೊಲೀಸರು ಬಂಧಿಸಿದ್ದಾರೆ.


Spread the love
Subscribe
Notify of

0 Comments
Inline Feedbacks
View all comments