ಕಾರ್ಕಳ-ಗುಡ್ಡೆಯಂಗಡಿ ರಸ್ತೆ ಜಂಟಿ ಸರ್ವೇ: ಪ್ರಭಾರ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ

Spread the love

ಕಾರ್ಕಳ-ಗುಡ್ಡೆಯಂಗಡಿ ರಸ್ತೆ ಜಂಟಿ ಸರ್ವೇ: ಪ್ರಭಾರ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ 

ಉಡುಪಿ: ಕಾರ್ಕಳ-ಗುಡ್ಡೆಯಂಗಡಿ ರಸ್ತೆಯನ್ನು ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಮತ್ತು ಪ್ರಾದೇಶಿಕ ಸಾರಿಗೆ ಇಲಾಖೆಯ ಅಧಿಕಾರಿಗಳು ಜಂಟಿಯಾಗಿ ಸರ್ವೆ ನಡೆಸಿ, ಸರಿಯಾದ ಅಳತೆಯನ್ನು ನೀಡುವಂತೆ ಪ್ರಭಾರ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ತಿಳಿಸಿದ್ದಾರೆ.

RTA (1)

ಅವರು ಸೋಮವಾರ ಜಿಲ್ಲಾಧಿಕಾರಿಗಳ ಕಚೇರಿಯ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ ನಡೆದ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಭೆಯಲ್ಲಿ, ಕಾರ್ಕಳ- ಗುಡ್ಡೆಯಂಗಡಿ ಮಾರ್ಗದಲ್ಲಿ ಬಸ್‍ಗಳಲ್ಲಿ ಹೆಚ್ಚಿನ ದರ ವಸೂಲಿ ಮಾಡಲಾಗುತ್ತಿದೆ ಹಾಗೂ ಈ ಮಾರ್ಗದ ಅಳತೆಯನ್ನು ಸರಿಯಾಗಿ ನಮೂದಿಸಿಲ್ಲ ಎಂದು ಸಾರ್ವಜನಿಕರು ನೀಡಿದ ದೂರನ್ನು ಆಲಿಸಿದ ಪ್ರಭಾರ ಜಿಲ್ಲಾಧಿಕಾರಿಗಳು ಜಂಟಿ ಸರ್ವೆ ನಡೆಸಲು ಸೂಚಿಸಿದರು. ಶ್ರೀ ದುರ್ಗಾಂಬಾ ಬಸ್ ಮಾಲೀಕ ಅನಿಲ್ ಛಾತ್ರಾ ಅವರು ಹೊಸಗಂಡಿ- ಎಡಮೊಗೆ ರಸ್ತೆಯು ಸಂಪೂರ್ಣ ಹಾಳಾಗಿದ್ದು, ಬಸ್ ಸಂಚಾರ ನಡೆಸಲು ಕಷ್ಟವಾಗಿದ್ದು, ಕೂಡಲೇ ದುರಸ್ತಿಗೊಳಿಸುವಂತೆ ಗಮನಸೆಳೆದಾಗ ಪರಿಶೀಲಿಸಿ ವರದಿ ನೀಡುವಂತೆ ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಗೆ ಸೂಚಿಸಿದರು.
ನಂತರ ಜಿಲ್ಲಾದಿಕಾರಿ ಕಚೇರಿಯ ಕೋರ್ಟ್ ಹಾಲ್ ನಲ್ಲಿ ನಡೆದ ಸಭೆಯಲ್ಲಿ 45 ವಿಷಯಗಳಿದ್ದು, ಕೆ.ಎಸ್.ಆರ್.ಟಿ.ಸಿ ಯವರು ಕುಂದಾಪುರ-ಉಡುಪಿ ಮತ್ತು ಉಡುಪಿ-ಹೆಬ್ರಿ ಮಾರ್ಗಕ್ಕೆ ಸಲ್ಲಿಸಿದ ಒಂದು ತಾತ್ಕಾಲಿಕ ಪರವಾನಿಗೆಯನ್ನು 4 ತಿಂಗಳ ಅವಧಿಗೆ ಮಂಜೂರು ಮಾಡಲಾಗಿರುತ್ತದೆ. ಹಾಗೂ ಕುಂದಾಪುರ-ಸಿದ್ದಾಪುರ ಮಾರ್ಗಕ್ಕೆ ಸಲ್ಲಿಸಿದ್ದ ಪಕ್ಕಾ ಪರವಾನಿಗೆಯನ್ನು ಮಂಜೂರು ಮಾಡಲಾಗಿರುತ್ತದೆ. 5 ಖಾಸಗಿ ಪರವಾನಿಗೆ ವೇಳಾಪಟ್ಟಿ ಪರಿಷ್ಕರಣೆಗೆ ಸಂಬಂಧಿಸಿದ ಅರ್ಜಿಗಳನ್ನು ಪರಿಗಣಿಸಿ ಮಂಜೂರು ಮಾಡಲಾಗಿದೆ.
ಸರಕಾರವು ರಾಜ್ಯಾದ್ಯಂತ ಅನ್ವಯಿಸುವ ಹೊಸ ಸಮಗ್ರ ಪ್ರದೇಶ ಯೋಜನೆಯ ಬಗ್ಗೆ ಜೂನ್ 10 ರಂದು ಅಧಿಸೂಚನೆ ಹೊರಡಿಸಿದ್ದು, 39 ಖಾಸಗಿ ಅರ್ಜಿ ಪರವಾನಿಗೆ ಅರ್ಜಿಯನ್ನು ಮುಂದೂಡಲಾಗಿದೆ. ಸಭೆಯಲ್ಲಿ ಪ್ರಾದೇಶಿಕ ಸಾರಿಗೆ ಅಧಿಕಾರಿ ಸುರೇಂದ್ರಪ್ಪ ಉಪಸ್ಥಿತರಿದ್ದರು.


Spread the love