ಕಾರ್ಕಳ: ದನ ಸಾಗಣೆ, ಇಬ್ಬರ ಬಂಧನ

Spread the love

ಕಾರ್ಕಳ: ದನ ಸಾಗಣೆ, ಇಬ್ಬರ ಬಂಧನ

ಕಾರ್ಕಳ: ಮಾರುತಿ ಆಮ್ನಿ ಕಾರಿನಲ್ಲಿ ಹುರಿ ಹಗ್ಗದಿಂದ ಹಿಂಸಾತ್ಮಕವಾಗಿ ಕಟ್ಟಿ ಸಾಗಿಸುತ್ತಿದ್ದ ದನ ಕರುವನ್ನು ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯ ಸಿಬ್ಬಂದಿ ವಶಪಡಿಸಿಕೊಂಡ ಘಟನೆ ತಾಲ್ಲೂಕಿನ ಈದು ಗ್ರಾಮದಲ್ಲಿ ನಡೆದಿದೆ.

ಗ್ರಾಮದ ಮುಗೇರ್ಕಳ ಎಂಬಲ್ಲಿ ಖಚಿತ ಮಾಹಿತಿಯನ್ನು ಆಧರಿಸಿ ಗ್ರಾಮಾಂತರ ಠಾಣೆಯ ಎಎಸ್‌ಐ ನಾಸೀರ್ ಹುಸೇನ್ ಸಿಬ್ಬಂದಿ ಮಾರುತಿ ಆಮ್ನಿ ಕಾರನ್ನು ತಡೆದು ಆರೋಪಿಗಳಾದ ಮೂಡಬಿದಿರೆ ಶಿರ್ತಾಡಿ ಮಕ್ಕಿ 5 ಸೆಂಟ್ಸ್‌ನ ನಿವಾಸಿ ಮಹಮದ್ ಮನ್ಸೂರ್ (33) ಹಾಗೂ ಈದು ಗ್ರಾಮದ ಮಠದಬೆಟ್ಟು ನಿವಾಸಿ ಮೋನಪ್ಪ ಪರವ (78) ಎನ್ನುವರನ್ನು ಬಂಧನ ಮಾಡಲಾಗಿದೆ. ಕಳವು ಮಾಡಿ ಮಾಂಸ ಮಾಡುವ ಉದ್ದೇಶದಿಂದ ಸಾಗಿಸಲಾಗುತ್ತಿದ್ದ ಒಂದು ದನ ಹಾಗೂ ಒಂದು ಹೆಣ್ಣು ಕರುವನ್ನು ಬಿಡಿಸಿಕೊಂಡಿದ್ದಾರೆ.

ಈ ಕುರಿತು ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love