ನಕಲಿ ಚಿನ್ನವನ್ನು ಮಾರಾಟ ಮಾಡಿ ಮೋಸ ಮಾಡುತ್ತಿದ್ದ ವ್ಯಕ್ತಿಯ ಬಂಧನ

Spread the love

ನಕಲಿ ಚಿನ್ನವನ್ನು ಮಾರಾಟ ಮಾಡಿ ಮೋಸ ಮಾಡುತ್ತಿದ್ದ ವ್ಯಕ್ತಿಯ ಬಂಧನ

ಮಂಗಳೂರು: ನಕಲಿ ಚಿನ್ನಾಭರಣವನ್ನು ಅಸಲಿಯದ್ದೆಂದು ಸಾರ್ವಜನಿಕರಿಗೆ ನಂಬಿಸಿ ಮೋಸ ಮಾಡಿ ಮಾರಾಟ ಮಾಡಲು ಪ್ರಯತ್ನಿಸಿರುವ ಮಹಾರಾಷ್ಟ್ರ ಮೂಲದ ಆರೋಪಿ ಪ್ರವೀಣ್ ವೀರಾ ರಾತೋಡ್ (21)   ಎಂಬವನನ್ನು ಜೂನ್ 5 ರಂದು ರಾತ್ರಿ ತೊಕ್ಕೊಟು ಎಸ್.ಮೈ.ಶಾಪ್ ಪ್ಯಾನ್ಸಿ ಮಳಿಗೆಯ ಬಳಿಯಿಂದ ದಸ್ತಗಿರಿ ಮಾಡಿ ಆರೋಪಿತನ ವಶದಲ್ಲಿದ್ದ ಸುಮಾರು 900 ಗ್ರಾಂ ತೂಕದ ನಕಲಿ ಚಿನ್ನದ ಆಭರಣಗಳನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ.

ಪ್ರಕರಣದ ವಿವರ:- ಜೂನ್ 5 ರಂದು ರಾತ್ರಿ 8-00 ಗಂಟೆಯ ಸಮಯಕ್ಕೆ ತೊಕ್ಕೊಟು ಹರಿಪ್ರಸಾದ್ ಕಾಂಪ್ಲೆಕ್ಸ್ನಲ್ಲಿರುವ ಎಸ್.ಮೈ.ಶಾಪ್ ಪ್ಯಾನ್ಸಿ ಅಂಗಡಿಯ ಮಾಲಕ ಲೋಕೇಶ್ ಕುಮಾರ್ ಎಂಬವರ ಮಳಿಗೆಗೆ ಆರೋಪಿತರು ಬಂದು ನಕಲಿ ಚಿನ್ನದ ಆಭರಣಗಳನ್ನು ಅಸಲಿಯ ಚಿನ್ನದ ಆಭರಣಗಳೆಂದು ಹಾಗೂ ಸುಮಾರು 30 ಲಕ್ಷದ ಚಿನ್ನಾಭರಣವನ್ನು ಕೇವಲ 3 ಲಕ್ಷ ಹಣಕ್ಕೆ ಮಾರಾಟ ಮಾಡಲು ಪ್ರಯತ್ನಿಸಿರುತ್ತಾರೆ. ಈ ಸಮಯ ಸಂಶಯಗೊಂಡು ನಕಲಿ ಚಿನ್ನಾಭರಣವನ್ನು ಮಾರಾಟ ಮಾಡಲು ಪ್ರಯತ್ನಿಸಿದ ಆರೋಪಿತರ ಪೈಕಿ ಪ್ರವೀನ್ ವೀರಾ ರಾತೋಡ್ ಎಂಬಾತನ ಬಗ್ಗೆ ಮಾಹಿತಿ ನೀಡಿ ದೂರು ನೀಡಿರುವಂತೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಮೊ.ನಂ. 152/2018 ಕಲಂ 420, 511 ಜತೆಗೆ 34 ಐಪಿಸಿ ಯಂತೆ ಪ್ರಕರಣ ದಾಖಲಾಗಿ ತನಿಖೆಯಲ್ಲಿರುತ್ತದೆ. ಅಂತರ್ರಾಜ್ಯ ಕಡೆಗಳಿಂದ ಬಂದು ಮುಗ್ಧ ಸಾರ್ವಜನಿಕರನ್ನು ನಂಬಿಸಿ ಮೋಸಗೊಳಿಸುತ್ತಿರುವ ಜಾಲದ ಆರೋಪಿತನನ್ನು ದಸ್ತಗಿರಿ ಮಾಡಲಾಗಿದೆ.

ಈ ಪ್ರಕರಣದ ಪತ್ತೆಯನ್ನು ಪ್ರಕರಣದ ಫಿರ್ಯಾದಿದಾರರಾದ ಲೋಕೇಶ್ ಕುಮಾರ್ ರವರ ಸಹಾಯದಿಂದ ಉಳ್ಳಾಲ ಠಾಣಾ ಪೊಲೀಸ್ ನಿರೀಕ್ಷಕರಾದ ಗೋಪಿಕೃಷ್ಣ.ಕೆ.ಆರ್. ರವರು ಪತ್ತೆ ಮಾಡಿರುತ್ತಾರೆ.

ಮಂಗಳೂರು ನಗರದ   ಪೊಲೀಸ್ ಆಯಕ್ತರ ನಿರ್ದೇಶನದಂತೆ, ಪೊಲೀಸ್ ಉಪ ಆಯುಕ್ತರು(ಕಾನೂನು ಮತ್ತು ಸುವ್ಯವಸ್ಥೆ) ಮತ್ತು ಪೊಲೀಸ್ ಉಪ ಆಯುಕ್ತರು (ಅಪರಾಧ ಮತ್ತು ಸಂಚಾರ ರವರ ಮಾರ್ಗದರ್ಶನದಲ್ಲಿ ಮಂಗಳೂರು ದಕ್ಷಿಣ ಉಪ-ವಿಭಾಗದ ಎ.ಸಿ.ಪಿ. ಶ್ರೀ ಕೆ.ರಾಮರಾವ್ ರವರ ನೇತೃತ್ವದಲ್ಲಿ ಆರೋಪಿಯನ್ನು ಪತ್ತೆ ಮಾಡಿ ಸೊತ್ತು ಸ್ವಾಧೀನಪಡಿಸಿಕೊಳ್ಳಲಾಗಿದೆ. ಈ ಕಾಯರ್ಾಚರಣೆಯಲ್ಲಿ ಉಳ್ಳಾಲ ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕರಾದ ಕೆ.ಆರ್.ಗೋಪಿಕೃಷ್ಣ, ಪೊಲೀಸ್ ಉಪ-ನಿರೀಕ್ಷಕರಾದ ವಿನಾಯಕ ತೋರಗಲ್, ಮತ್ತು ಸಿಪಿಸಿ 561 ಪ್ರಶಾಂತ, ಪಿಸಿ 553 ಲಿಂಗರಾಜು, ಸಿಪಿಸಿ 2288 ಚಿದಾನಂದ ರವರು ಸಹಕರಿಸಿರುತ್ತಾರೆ.


Spread the love