ಕಾವೂರು ಕಾಲೇಜಿನಲ್ಲಿ ಶೌಚಾಲಯ ಕಟ್ಟಡ ಉದ್ಘಾಟನೆ  

Spread the love

ಕಾವೂರು ಕಾಲೇಜಿನಲ್ಲಿ ಶೌಚಾಲಯ ಕಟ್ಟಡ ಉದ್ಘಾಟನೆ  

ಮಂಗಳೂರು : ಸರಕಾರಿ ಸಂಯುಕ್ತ ಪದವಿಪೂರ್ವ ಕಾಲೇಜು, ಪ್ರೌಢಶಾಲಾ ವಿಭಾಗ ಕಾವೂರು, ಮಂಗಳೂರು, ಇಲ್ಲಿ ಎಂಸಿಎಫ್ ವತಿಯಿಂದ 2.9 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿದ ಶೌಚಾಲಯದ ಉದ್ಘಾಟನಾ ಸಮಾರಂಭ ಇತ್ತೀಚೆಗೆ ನೆರವೇರಿತು.

ಸ್ಥಳೀಯ ಕಾರ್ಪೋರೇಟರ್ ಮಧುಕಿರಣ್ ರಾವ್ ಶೌಚಾಲಯ ಉದ್ಘಾಟಿಸಿದರು. ಎಂಸಿಎಫ್ ನಿರ್ದೇಶಕ ಪ್ರಭಾಕರ್ ರಾವ್ ಮಾತನಾಡಿ, ಸಂಸ್ಥೆಯು ಹಲವು ಸಾಮಾಜಿಕ ಕಾರ್ಯಕ್ರಮಗಳನ್ನು ನಡೆಸುತ್ತಿದ್ದು ವಿದ್ಯಾರ್ಥಿಗಳ ಮೂಲಭೂತ ಅವಶ್ಯಕತೆಗೆ ಒತ್ತು ನೀಡಿ ಸಂಸ್ಥೆಯಿಂದ ನಿರ್ಮಾಣ ಮಾಡಿರುವ ಈ ಶೌಚಾಲಯ ಸರಿಯಾಗಿ ನಿರ್ವಹಣೆ ಮಾಡಿ ಸ್ವಚ್ಛತೆಗೆ ಗಮನ ನೀಡಿ ” ಎಂದು ಕರೆ ನೀಡಿದರು.

ಮುಖ್ಯ ಅತಿಥಿಗಳಾಗಿ ಎಂಸಿಎಫ್ ಅಧಿಕಾರಿಗಳಾದ ಎನ್. ರಮೇಶ್ ಭಟ್, ಬಿ. ಕೃಷ್ಣಪ್ಪ, ಪಿ. ಸುರೇಶ್, ಜಯರಾಮ್ ಕಾರಂದೂರು, ಎಸ್‍ಡಿಎಂಸಿ ಅಧ್ಯಕ್ಷೆ ಭಾರತಿ, ಜಗದೀಶ್ , ಸುಮಂತ್‍ರಾವ್, ಫೆಲ್ಸಿ ರೇಗೋ ಉಪಸ್ಥಿತರಿದ್ದರು. ಮುಖ್ಯಶಿಕ್ಷಕರಾದ ಮಲ್ಲೇಶ್ ನಾಯ್ಕ ಎ.ಸಿ. ಸ್ವಾಗತಿಸಿ, ಪ್ರತಿಮಾ ಆರ್. ವಂದನಾರ್ಪಣೆಗೈದರು. ಗೌರಿ ಕಾರ್ಯಕ್ರಮ ನಿರೂಪಿಸಿದರು.


Spread the love