ಕಾವೂರು ಪೋಲಿಸರಿಂದ ಅಕ್ರಮವಾಗಿ ದನ ಸಾಗಾಟ ಮಾಡುತ್ತಿದ್ದ ನಾಲ್ವರ ಬಂಧನ

Spread the love

ಕಾವೂರು ಪೋಲಿಸರಿಂದ ಅಕ್ರಮವಾಗಿ ದನ ಸಾಗಾಟ ಮಾಡುತ್ತಿದ್ದ ನಾಲ್ವರ ಬಂಧನ

ಮಂಗಳೂರು: ಅಕ್ರಮವಾಗಿ ದನಗಳನ್ನು ಹಿಂಸಾತ್ಕರ ರೀತಿಯಲ್ಲಿ ಸಾಗಿಸುತ್ತಿದ್ದ ಆರೋಪಿಗಳನ್ನು ಕಾವೂರು ಪೋಲಿಸರು ಬಂಧಿಸಿದ್ದಾರೆ.

ಅಗಸ್ಟ್ 2ರಂದ ಬೆಳಗಿನ ಜಾವ 2 ಗಂಟೆಗೆ ಉಡುಪಿ ಕಡೆಯಿಂದ ಮಂಗಳೂರು ಕಡೆಗೆ ಲಾರಿಯಲ್ಲಿ ಯಾವುದೇ ಪರವಾನಿಗೆ ಇಲ್ಲದೆ ಅಕ್ರಮವಾಗಿ 7 ದನಗಳು ಹಾಗೂ 6 ಕರುಗಳನ್ನು ಹಿಂಸಾತ್ಮಕ ರೀತಿಯಲ್ಲಿ ತುಂಬಿಸಿಕೊಂಡು ಸಾಗಾಟ ಮಾಡುತ್ತಿದ್ದ ಲಾರಿ ಚಾಲಕ ನಯೀಮುದ್ದೀನ್, ಲಾರಿಯಲ್ಲಿದ್ದ ರಾಧಾಕೃಷ್ಣನ್, ಹಾಗೂ ದನಕರುಗಳ ಸಾಗಾಟಕ್ಕೆ ಸಹಕರಿಸಿದ ಕಾರಿನಲ್ಲಿದ್ದ ಸುಭಾಷ್ ಶೆಟ್ಟಿ ಮತ್ತು ಸತೀಶ್ ಕುಮಾರ್ ಅವರನ್ನು ಕಾವೂರು ಪೋಲಿಸ್ ಠಾಣ ವ್ಯಾಪ್ತಿಯ ಚೆಕ್ ಪೋಸ್ಟ್ ಬಳಿ ಕಾರು ಸಮೇತ ವಶಕ್ಕೆ ಪಡೆದು ಕಾವೂರು ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ 4 ಮಂದಿಯನ್ನು ಬಂಧಿಸಿ ಲಾರಿಯಲ್ಲಿದ್ದ ಒಟ್ಟು 13 ದನಕರುಗಳನ್ನು ಮತ್ತು ಸಾಗಾಟಕ್ಕೆ ಬಳಿಸಿದ ಲಾರಿ ಹಾಗೂ ಕಾರನ್ನು ಸ್ವಾಧಿನಪಡಿಸಿಕೊಳ್ಳಲಾಗಿದೆ.


Spread the love