ಕಾಸರಗೋಡು ಕೆ.ಎಸ್.ಆರ್.ಟಿ.ಸಿ ಬಸ್ ಪ್ರಯಾಣ ದರ ಕಡಿತ

Spread the love

ಕಾಸರಗೋಡು ಕೆ.ಎಸ್.ಆರ್.ಟಿ.ಸಿ ಬಸ್ ಪ್ರಯಾಣ ದರ ಕಡಿತ

ಮಂಗಳೂರು: ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಮಂಗಳೂರು-ಕಾಸರಗೋಡು ಮಾರ್ಗದಲ್ಲಿ ಬರುವ ಕೇರಳ ರಾಜ್ಯದ ಆರಿಕ್ಕಾಡಿ (ಕೇರಳ ರಾಜ್ಯದ ಕುಂಬ್ಳೆ ಸಮೀಪದ ಸ್ಥಳದಲ್ಲಿ) ಎಂಬಲ್ಲಿ ನೂತನವಾಗಿ ಟೋಲ್ ಪ್ಲಾಜಾವನ್ನು ನಿರ್ಮಿಸಿದ್ದು, ಜ.13 ರಿಂದ ಟೋಲ್ ಮೊತ್ತವು ಫಾಸ್ಟ್ರಾಗ್ ಮೂಲಕ ವಿಭಾಗದ ವಾಹನಗಳಲ್ಲಿ ಕಡಿತವಾಗುತ್ತಿತ್ತು. ಕೇಂದ್ರ ಸರ್ಕಾರದ ಆದೇಶದ ಮೇರೆಗೆ ಫೆಬ್ರವರಿ 4 ರಿಂದ ಜಾರಿಗೆ ಬರುವಂತೆ ಟೋಲ್ ಶುಲ್ಕವನ್ನು ಹಿಂಪಡೆಯಲಾಗಿರುತ್ತದೆ.

ಅದರಂತೆ ವಿಭಾಗದಿಂದ ಮಂಗಳೂರು-ಕಾಸರಗೋಡು ಮಾರ್ಗದಲ್ಲಿ ಕಾರ್ಯಾಚರಣೆಯಾಗುತ್ತಿದ್ದ ಸಾರಿಗೆಗಳಲ್ಲಿಯೂ ಸಹ ಪ್ರತಿ ಪ್ರಯಾಣಿಕರಿಗೆ ವಿಧಿಸುತ್ತಿದ್ದ ಟೋಲ್ ಶುಲ್ಕವನ್ನು ಫೆಬ್ರವರಿ 4 ರಿಂದ ಜಾರಿಗೆ ಬರುವಂತೆ ಹಿಂಪಡೆಯಲಾಗಿದ್ದು, ಈ ಹಿಂದಿನಂತೆ ಪ್ರಯಾಣದರಗಳನ್ನು ವಿಧಿಸಲಾಗುತ್ತಿದೆ ಎಂದು ಕೆ.ಎಸ್.ಆರ್.ಟಿ.ಸಿ ಹಿರಿಯ ವಿಭಾಗೀಯ ನಿಯಂತ್ರಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Spread the love
Subscribe
Notify of

0 Comments
Inline Feedbacks
View all comments