ಕೀರ್ತಿಶೇಷ ಕಟೀಲು ಗೋಪಾಲಕೃಷ್ಣ ಆಸ್ರಣ್ಣರ 25ನೇ ಸಂಸ್ಮಯಣೆಯಲಿ ಗಲ್ಫ್ ರಾಷ್ಟ್ರದ ಸಾಧಕರಿಗೆ ಗೌರವಾರ್ಥನೆ

Spread the love

ಕೀರ್ತಿಶೇಷ ಕಟೀಲು ಗೋಪಾಲಕೃಷ್ಣ ಆಸ್ರಣ್ಣರ 25ನೇ ಸಂಸ್ಮಯಣೆಯಲಿ ಗಲ್ಫ್ ರಾಷ್ಟ್ರದ ಸಾಧಕರಿಗೆ ಗೌರವಾರ್ಥನೆ

ಮುಂಬಯಿ: ಕಲಾ ಸಂಘಟಕ ಪದ್ಮನಾಭ ಕಟೀಲು,ದುಬೈಯವರು30ನೇ ವರ್ಷದ ಯಕ್ಷಯಜ್ಞ ಮತ್ತು .ಕೀರ್ತಿಶೇಷ ಕಟೀಲು ಗೋಪಾಲಕೃಷ್ಣ ಆಸ್ರಣ್ಣರ 25ನೇ ವರ್ಷದ ಸಂಸ್ಮರಣ ಕಾರ್ಯಕ್ರಮ ಬಂಟರ ಭವನ ಕುರ್ಲಾದಲ್ಲಿ ಶ್ರೀ ಕ್ಷೇತ್ರ ಕಟೀಲಿನ 6 ಮೇಳಗಳ ಆಯ್ದ ಕಲಾವಿದರ ಕೂಡುವಿಕೆಯಲ್ಲಿ,”ಶ್ರೀ ದೇವಿ ಮಹಾತ್ಮೆ “ಯಕ್ಷಗಾನ ಪ್ರದರ್ಶನ ನಡೆಯಿತು,

ಯಕ್ಷಗಾನದ ಮಧ್ಯಂತರದಲ್ಲಿ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಕಾರ್ಯಕ್ರಮಕ್ಕೆ ಗಲ್ಫ್ ರಾಷ್ಟ್ರ ಸಾಧನೆ ಮಾಡುತ್ತಿರುವ ಕನ್ನಡಿಗರಾಗಿರುವ ಸರ್ವೋತ್ತಮ ಶೆಟ್ಟಿ ಅಬುದಾಭಿ (ಯುಎ ಇ ಬಂಟ್ಸ್‌ ಅಧ್ಯಕ್ಷರು) ವಾಸು ಶೆಟ್ಟಿ ದುಬೈ ಪೇಜಾವರ ಪಡುಬಾಳಿಕೆ ಗುತ್ತು (ಕಲಾ ಪೋಷಕರು), ಜಯಂತ್ ಶೆಟ್ಟಿ, ದುಬೈ (ಸಮಾಜ ಸೇವಕರು), ಸತೀಶ್ ಪೂಜಾರಿ ದುಬೈ, (ಬಿಲ್ಲವಾಸ್ ಫ್ಯಾಮಿಲಿ ದುಬೈಯ ಮಾಜಿ ಅಧ್ಯಕ್ಷರು, ಸಮಾಜ ಸೇವಕರು) ಪ್ರಭಾಕರ್ ಡಿ ಸುವರ್ಣ ದುಬೈ (ಸುವರ್ಣ ಪ್ರತಿಷ್ಠಾನ ಕರ್ನಿರೆ) ಧನಂಜಯ ಶೆಟ್ಟಿಗಾರ್ ಕಿನ್ನಿ ಗೋಳಿ(ಸಮಾಜ ಸೇವಕರು, ಕಲಾ ಪೋಷಕರು), , ಸತೀಶ್ ಶೆಟ್ಟಿ ದುಬೈ (ದಾನಿಗಳು, ಕಲಾಪೋಷಕರು) , ರಾಜ್ ಕುಮಾರ್ ಬಹರೈನ್ (ಕನ್ನಡ ಸಂಘ ಬೆಹರಿನ್‌ ಮಾಜಿ ಅಧ್ಯಕ್ಷರು), ಶರತ್ ಶಶಿಕರ ಶೆಟ್ಟಿ ದು ಬೈ (ಸಮಾಜ ಸೇವಕರು, ಕಲಾ ಪೋಷಕರು), ರಿತೇಶ್ ಅಂಚನ್ ದುಬೈ ಇವರನ್ನು ಕಟೀಲು ಕ್ಷೇತ್ರದ ಶ್ರೀ ಲಕ್ಷ್ಮೀನಾರಾಯಣ ಆಸ್ರಣ್ಣರ ಮತ್ತು ಪದ್ಮನಾಭ ಕಟೀಲು ಗೌರವಿಸಿದರು

ವೇದಿಕೆಯಲ್ಲಿ ಶ್ರೀಕ್ಷೇತ್ರ ಕಟೀಲಿನ ಶ್ರೀವೆಂಕಟರಮಣ ಆಸ್ರಣ್ಣ, , ಆನಂತ ಪದ್ಮನಾಭ ಆಸ್ರಣ್ಣ , ಕಮಲಾ ದೇವಿ ಆಸ್ರಣ್ಣ, ಶ್ರೀ ಹರಿನಾರಾಯಣ, ಆಸ್ಪಣ್ಣ ,ಶ್ರೀ ದೇವಿಕುಮಾರ ಪ್ರಸಾದ ಆಸ್ರಣ್ಣ ,ಕಟೀಲು ಮೇಳದ ಸಂಚಾಲಕ ದೇವೀ ಪ್ರಸಾದ ಶೆಟ್ಟಿ,, ಶ್ರೀ ಉಮ ಮಹೇಶ್ವರಿ ದೇವಸ್ಥಾನದ ಪ್ರಥಮ ಅರ್ಚಕ ಎಸ್ಎನ್ ಉಡುಪ,ಪ್ರವೀಣ್ ಭೋಜ ಶೆಟ್ಟಿ ( ಅಧ್ಯಕ್ಷರು, ಬಂಟರ ಸಂಘ ಮುಂಬಯಿ) ಶ್ರೀ ಕ್ಷೇತ್ರ ಕಟೀಲು , ರಘು ಮೂಲ್ಯ (ಅಧ್ಯಕ್ಷರು, ಕುಲಾಲ ಸಂಘ ಮುಂಬಯಿ).ಉದ್ಯಮಿ ಚಂದ್ರಹಾಸ್ ಎಮ್. ರೈ ಬೋಳ್ಳಾಡುಗುತ್ತು, ರವೀಂದ್ರನಾಥ ಭಂಡಾರಿ (ಸಿ.ಎಮ್. ಡಿ. ವೆಲ್ಕಮ್ಪ್ಯಾ ಪ್ಯಾಕೇಜಿಂಗ್ ಅಂಡ್ ಇಂಡಸ್ಟ್ರೀಸ್) ಐಕಳ ಗಣೇಶ್ ಶೆಟ್ಟಿ, (ಉದ್ಯಮಿ ಕಲಾ ಪೋಷಕರು), ಎಲ್, ವಿ. ಅಮೀನ್ (ಗೌರದ ಅಧ್ಯಕ್ಷರು, ಕನ್ನಡ ಸಂಘ ಸಾಂತಾಕ್ರೂಪ್),ಬಾಬು ಎಸ್. ಶೆಟ್ಟಿ ಪರಾರ (ಕಲಾಪೋಷಕರು, ಮಾಜಿ ಅಧ್ಯಕ್ಷರು, ಬಟ್ಟೆ ಬಂಟರ ಸಂಘ) ಆನಂದ ಡಿ. ಶೆಟ್ಟಿ ಎಕ್ಕಾರು (ಕಾರ್ಯಾಧ್ಯಕ್ಷರು, ಬಂಟರ ಸಂಘ ಮುಂಬಯಿ ಡೊಂಬಿವಲಿ ಪ್ರಾದೇಶಿಕ ಸಮಿತಿ) ನಗ್ರಿಗುತ್ತು ರೋಹಿತ್ ಶೆಟ್ಟಿ (ಅಧ್ಯಕ್ಷರು, ಬಂಟ್ಸ್ ಅಸೋಸಿಯೇಶನ್ ಪುಣೆ) ತೀಯ ಸಮಾಜದ ಮಾಜಿ ಅಧ್ಯಕ್ಷ ಚಂದ್ರಶೇಖರ್ ಬಿ. ಐಕಳ ಆನಂದ್ ಶೆಟ್ಟಿ (ಮಿಲಿ) (ಉದ್ಯಮಿ ಕಲಾ ಪೋಷಕರು), ಡಾ. ಅರುಣೋದಯ ಎಸ್. ರೈ ಬಳಿಯೂರು ಗುತ್ತು (ಸಿ ಎಂಡಿ ಸೈಂಟ್ ಆಗ್ನೆಸ್ ಸ್ಕೂಲ್ ಮೀರಾ ಭಾಯಂದರ್) ಚಂದ್ರಶೇಖರ್ ಪಾಲೆತ್ತಾಡಿ (ಸಂಪಾದಕರು, ಕರ್ನಾಟಕ ಮಲ್ಲ) ಸಂತೋಷ್ ಎಸ್. ಶೆಟ್ಟಿ, ಕಿಲೆಂಜೂರು (ಕಲಾಪೋಷಕರು) ವಾಮಯ್ಯ ಶೆಟ್ಟಿ, ಚೆಂಬೂರು (ಸರೋಜ್ ಸ್ಪೀಗಟ್ಸ್), ತುಳುನಾಡ ಮಾಣಿಕ್ಯ ಅರವಿಂದ ಬೊಳಾರ್, ಡೈಜಿ ವರ್ಲ್ಡ್ ನ ವಾಲ್ಟರ್ ನಂದಳಿಕೆ , ಕಲಾ ಪ್ರತಿಷ್ಠಾನದ ಪ್ರಕಾಶ್ ಶೆಟ್ಟಿ ಸುರತ್ಕಲ್,ಬಂಟರವಾಣಿಯ ಸಂಪಾದಕ ಅಶೋಕ್ ಪಕ್ಕಳ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕಲಾಸಾರಥಿ ಸಂಘಟಕ ಕರ್ನೂರು ಮೋಹನ್ ರೈ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.


Spread the love
Subscribe
Notify of

0 Comments
Inline Feedbacks
View all comments