ಕುಂದಾಪುರ : ಎಂ.ಜಿ. ಫ್ರೆಂಡ್ಸ್ ಹೊನಲು ಬೆಳಕಿನ ಕಬಡ್ಡಿ ಪಂದ್ಯಾಟ ಉದ್ಘಾಟನೆ

Spread the love

ಕುಂದಾಪುರ : ಶ್ರೀ ಮಹಾಗಣಪತಿ ಫ್ರೆಂಡ್ಸ್ ಹೊಲಾರ್ ಇವರ ಆಶ್ರಯದಲ್ಲಿ ಹೊನಲು ಬೆಳಕಿನ ಕಬಡ್ಡಿ ಪಂದ್ಯಾಟ 19-12-2015ರ ಶನಿವಾರ ಕುಂದಾಪುರ ತಾಲೂಕಿನ ಗೋಳಿಹೊಳೆ ಗ್ರಾಮದ ಹೊಲಾರಿನಲ್ಲಿ ಎಂ.ಜಿ. ಫ್ರೆಂಡ್ಸ್ ಇವರ ನೇತೃತ್ವದಲ್ಲಿ ದ್ವಿತೀಯ ವರ್ಷದ ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿ ನಡೆಯಿತು.

Kabbaddi_kundapur 23-12-2015 13-40-025 Kabbaddi_kundapur 23-12-2015 13-40-24

ಪಂದ್ಯಾವಳಿಯ ಉದ್ಘಾಟನೆಯನ್ನು ನೆರವೇರಿಸಿದ ಕರ್ನಾಟಕ ಕಾರ್ಮಿಕರ ವೇದಿಕೆ (ರಿ.) ಉಡುಪಿ ಇದರ ಜಿಲ್ಲಾಧ್ಯಕ್ಷ ರವಿ ಶೆಟ್ಟಿಯವರು ಮಾತನಾಡಿ ಹಳ್ಳಿಗಾಡಿನ ಯುವಕರ ಈ ಸಾಧನೆಯನ್ನು ಶ್ಲಾಘಿಸಿ ಎಂ.ಜಿ. ಫ್ರೆಂಡ್ಸ್‍ನ ಯುವಕರ ಸೇವೆ ಕೇವಲ ಕ್ರೀಡೆಗೆ ಮಾತ್ರ ಸೀಮಿತವಾಗದೆ ಮುಂದಿನ ದಿನಗಳಲ್ಲಿ ಸಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡು ಉತ್ತಮ ಸಮಾಜ ನಿರ್ಮಿಸಲು ಸಹಕರಿಸಬೇಕೊಂದು ಕರೆ ನೀಡಿದರು.

ಊರಿನ ಹಿರಿಯರೂ, ನಿವೃತ್ತ ಶಿಕ್ಷಕರೂ ಆದ ಶ್ರೀ ರತ್ನಾಕರ ಶಾಸ್ತ್ರೀಯವರು ಸಭಾಧ್ಯಕ್ಷತೆಯನ್ನು ವಹಿಸಿದ್ದರು. ಯುವ ಉದ್ಯಮಿ, ಊರ ಮುಖಂಡರಾದ ಶ್ರೀ ರಾಮ್‍ಕಿಶನ್ ಹೆಗ್ಡೆ, ಕೂಡೂರು ವಿದ್ಯುಕ್ತವಾಗಿ ಕ್ರೀಡಾಂಗಣಕ್ಕೆ ತೆಂಗಿನಕಾಯಿ ಎಸೆಯುವುದರ ಮುಖಾಂತರ ಚಾಲನೆ ನೀಡಿದರು. ಮುಖ್ಯ ಅತಿಥಿಗಳಾಗಿ ಮೂಕಾಂಬಿಕ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ರ್ಶರೀ ಅರುಣ್‍ಪ್ರಕಾಶ್ ಶೆಟ್ಟಿ, ಎಸ್. ಎಂ. ಅರೆಶೀರೂರು ಶಾಲೆಯ ಮುಖ್ಯೋಪಾಧ್ಯಯರಾದ ಶ್ರಿ ಶಿವರಾಮ್, ರಾಷ್ಟ್ರ ಮಟ್ಟದ ಕ್ರೀಡಾ ತರಬೇತುದಾರರಾದ ಶ್ರೀ ಲೋಹಿತಾಶ್ವ ಶೆಟ್ಟಿ, ಸುರೇಶ್ ಶೆಟ್ಟಿ ದೈಹಿಕ ಶಿಕ್ಷಕರು,ಯುವ ಉದ್ಯಮಿ ಸತೀಶ್ ಶೆಟ್ಟಿ, ಹಾಗೂನ ಹಲವಾರು ಗಣ್ಯಾತಿಗಣ್ಯರು ಉಪಸ್ಥಿತರಿದ್ದರು.

ಕುಂದಾಪುರ ತಾ.ನ 205ಕ್ಕೂ ಹೆಚ್ಚಿನ ಪ್ರೀಡಾಪಟುಗಳು ಭಾಗವಹಿಸಿದ್ದು, ಈ ವರ್ಷದ ಎಂ. ಈ. ಟ್ರೋಫಿ, ನಾಗದೇವತೆ ಫ್ರೆಂಡ್ಸ್, ಪಡುವೆರಿ, ಬೈಂದೂರು, ಎರಡನೇ ಸ್ಥಾನ ಕೀರ್ತಿ ಫ್ರೆಂಡ್ಸ್, ಯೋಜನಾ ನಗರ ಇವರುಗಳು ಪಡೆದರು. ರಾಜೇಶ್ ಶೆಟ್ಟಿ ಸ್ವಾಗತಿಸಿ ಸ.ಹಿ.ಪ್ರಾ. ಶಾಲೆಯ ಪುಟಾಣಿಗಳು ಪ್ರಾರ್ಥಿಸಿ ಶರತ್ ಶೀರೂರು ವಂದಿಸಿದರು. ಎಂ.ಜಿ. ಫ್ರೆಂಡ್ಸ್ ಗ್ರೂಪಿನ ಫ್ರೆಂಡ್ಸ್‍ನ ಮುಖ್ಯಸ್ಥರಾದ ಪ್ರದೀಪ್ ಮತ್ತು ಗೆಳೆಯರು ಎಲ್ಲರನ್ನೂ ಅಭಿನಂದಿಸಿದರು.


Spread the love