ಕುಂದಾಪುರ: ಬಿರುಸಿನ ಮಳೆಗೆ ಗುಡ್ಡ ಕುಸಿತ: ಮನೆಗೆ ಹಾನಿ

Spread the love

ಕುಂದಾಪುರ: ಬಿರುಸಿನ ಮಳೆಗೆ ಗುಡ್ಡ ಕುಸಿತ: ಮನೆಗೆ ಹಾನಿ

ಕುಂದಾಪುರ: ತಾಲೂಕಿನಾದ್ಯಂತ ಮಂಗಳವಾರ ಸುರಿದ ಭಾರೀ ಮಳೆಯಿಂದಾಗಿ ಗುಡ್ಡ ಕುಸಿದು ಮನೆಯೊಂದಕ್ಕೆ ಹಾನಿಯಾಗಿದೆ.

ಇಲ್ಲಿನ ಗುಲ್ವಾಡಿ ಕುದ್ರುತೋಟ ನಿವಾಸಿ ರಾಬಿಯಾ ಅವರ ಮನೆ ಮೇಲೆ ಗುಡ್ಡ ಕುಸಿದು ಬಿದ್ದ ಪರಿಣಾಮ ಅಡುಗೆ ಕೋಣೆಯ ಗೋಡೆ ನೆಲಸಮಗೊಂಡಿದೆ.

ಘಟನೆ ನಡೆದ ವೇಳೆಯಲ್ಲಿ ಅಡುಗೆ ಕೋಣೆಯಲ್ಲಿ ಯಾರೂ ಇರದ ಕಾರಣ ಯಾವುದೇ ಅಪಾಯ ಸಂಭವಿಸಲಿಲ್ಲ. ಮನೆಯಲ್ಲಿದ್ದವರನ್ನು ಕಂದಾಯ ಇಲಾಖೆ ಹಾಗೂ ಪಂಚಾಯತ್ ಸಹಕಾರದೊಂದಿಗೆ ಬೇರೆ ಕಡೆಗೆ ಸ್ಥಳಾಂತರಿಸಿದ್ದಾರೆ.

ಘಟನಾ ಸ್ಥಳಕ್ಕೆ ಕಂದಾಯ ಇಲಾಖೆಯವರು ಹಾಗೂ ಪಂಚಾಯತ್ ಅಧಿಕಾರಿಗಳು ಭೇಟಿ ನೀಡಿದ್ದಾರೆ.


Spread the love