ಕಾಪು ಪೊಲೀಸರಿಂದ ಮಲ್ಲಾರು ಅಕ್ರಮ ಗೋವಧಾ ಕೇಂದ್ರಕ್ಕೆ ದಾಳಿ, ಹತ್ತು ಜಾನುವಾರುಗಳ ರಕ್ಷಣೆ

Spread the love

ಕಾಪು ಪೊಲೀಸರಿಂದ ಮಲ್ಲಾರು ಅಕ್ರಮ ಗೋವಧಾ ಕೇಂದ್ರಕ್ಕೆ ದಾಳಿ, ಹತ್ತು ಜಾನುವಾರುಗಳ ರಕ್ಷಣೆ

ಕಾಪು: ಅಕ್ರಮ ಜಾನುವಾರು ವಧಾ ಕೇಂದ್ರಕ್ಕೆ ಕಾಪು ಪೊಲೀಸರು ದಾಳಿ ನಡೆಸಿ ಮಾಂಸಕ್ಕಾಗಿ ಉಪಯೋಗವಾಬೇಕಿದ್ದ 10 ಜಾನುವಾರುಗಳನ್ನು ರಕ್ಷಿಸಿದ ಘಟನೆ ಮಲ್ಲಾರು ಗುಡ್ಡೆಕೇರಿಯಲ್ಲಿ ಮಂಗಳವಾರ ನಡೆಸದಿದೆ.

ಕಾಪು ಪೊಲೀಸ್ ಠಾಣಾ ಉಪನಿರೀಕ್ಷಕ ರಾಜಶೇಖರ್ ಬಿ ಸಾಗನೂರು ಅವರಿಗೆ ಬೀಟ್ ಸಿಬಂದಿ ಮೂಲಕ ಲಭಿಸಿದ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ 31 ಸಾವಿರ ಮೌಲ್ಯದ ಹತ್ತು ದನ – ಕರುಗಳು ಮತ್ತು ವಧೆಗೆ ಬಳಸುತ್ತಿದ್ದ ಸಾಮಾಗ್ರಿಗಳು ಹಾಗೂ ಆರೋಪಿಗಳು ನಿಲ್ಲಿಸಿದ್ದ ಬೈಕ್‌ನ್ನು ವಶಪಡಿಸಿಕೊಳ್ಳಲಾಗಿದೆ. ಅಕ್ರಮ ವಧಾ ಕೇಂದ್ರವನ್ನು ನಡೆಸುತ್ತಿದ್ದ   ಆರೋಪಿಗಳು ಪೊಲೀಸರನ್ನು ಕಂಡು ಪರಾರಿಯಾಗಿದ್ದಾರೆ.

ದಾಳಿ ಕಾಪು ಎಸ್ಐ ರಾಜಶೇಖರ್ ಬಿ. ಸಾಗನೂರು ನೇತೃತ್ವದಲ್ಲಿ ನಡೆದಿದ್ದು ಸಿಬಂದಿಗಳಾದ ರವೀಂದ್ರ, ಅರುಣ್, ಮಂಜುನಾಥ, ಆನಂದ್, ಸಂದೇಶ, ಪರಶುರಾಮ ಅವರು ಜೊತೆ ಸೇರಿ ಕಾರ್ಯಚರಣೆ ನಡೆಸಿದ್ದರು.

ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿಗಳ ಪತ್ತೆಗೆ ಕಾರ್ಯಾಚರಣೆ ಮುಂದುವರಿದಿದೆ.
ರಕ್ಷಿಸಿದ ದನಗಳನ್ನು ಕಾಪು ಪೊಲೀಸರು ನೀಲಾವರ ಗೋಶಾಲೆಗೆ ಸ್ಥಳಾಂತರಿಸಿದ್ದಾರೆ.


Spread the love