ಕುಂದಾಪುರ : ಮೀನಿನ ಲಾರಿ ಹಾಗೂ ಸೈಕಲ್‌ ಮಧ್ಯೆ ಅಪಘಾತ ಗಂಗೊಳ್ಳಿ ಗ್ರಾಪಂ ಸದಸ್ಯ ಮೃತ್ಯು

Spread the love

ಕುಂದಾಪುರ : ಮೀನಿನ ಲಾರಿ ಹಾಗೂ ಸೈಕಲ್‌ ಮಧ್ಯೆ ಗಂಗೊಳ್ಳಿ ಬೀಚ್‌ ರಸ್ತೆಯಲ್ಲಿ ಸಂಭವಿಸಿದ ಅಪಘಾತದಲ್ಲಿ ಗಂಗೊಳ್ಳಿ ಗ್ರಾಪಂ ಸದಸ್ಯ ಎಡ್ವರ್ಡ್‌ ಕಾರ್ಡಿನ್‌(60) ಮೃತಪಟ್ಟಿದ್ದಾರೆ.

ಗಂಗೊಳ್ಳಿ ಬೀಚ್‌ ರಸ್ತೆಯ ನಿವಾಸಿಯಾಗಿರುವ ಇವರು ಬಂದರಿನಲ್ಲಿರುವ ತನ್ನ ಇಸಿOಉ ಅಂಗಡಿಗೆ ಸೈಕಲ್‌ನಲ್ಲಿ ಹೋಗುತ್ತಿದ್ದಾಗ ಎದುರಿನಿಂದ ಬಂದ ಮೀನು ಸರಧಿಕು ತುಂಬಿಧಿಸಲಾಧಿ ಗಿಧಿದ್ದ ಲಾರಿ ಢಿಕ್ಕಿ ಹೊಡೆಯಿತು. ಇದರಿಂದ ಗಂಭೀರವಾಗಿ ಗಾಯಗೊಂಡ ಇವರು ಕುಂದಾಪುರ ಸರಕಾರಿ ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟರು. ಸುಧಿಮಾಧಿರು 30ವರ್ಷಗಳಿಂದ ಕಾಂಗ್ರೆಸ್‌ ಬೆಂಬಲಿತ ಗಂಗೊಳ್ಳಿ ಗ್ರಾಪಂ ಸದಸ್ಯರಾಗಿದ್ದರು. ಮೃತರ ಪತ್ನಿ, ಓರ್ವ ಪುತ್ರ ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ. ಮಕ್ಕಳಿಬ್ಬರು ವಿದೇಶದಲ್ಲಿದ್ದಾರೆ. ಮೃತದೇಹವನ್ನು ಕುಂದಾಪುರ ಸರಕಾರಿ ಆಸ್ಪತ್ರೆಯ ಶವಗಾರದಲ್ಲಿ ಇರಿಸಲಾಗಿದೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love