ಕುಂದಾಪುರ: ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿಗೆ ಭೂಗತ ವ್ಯಕ್ತಿಯಿಂದ ಹಣಕ್ಕಾಗಿ ಬೇಡಿಕೆ; ಕೊಲೆ ಬೆದರಿಕೆ

Spread the love

ಕುಂದಾಪುರ: ಕುಂದಾಪುರದ ಪಕ್ಷೇತರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿಯವರಿಗೆ ಭೂಗತ ಜಗತ್ತಿನ ವ್ಯಕ್ತಿಯೋರ್ವರಿಂದ ಹಣಕ್ಕೆ ಬೇಡಿಕೆ ಇಟ್ಟು ಕೊಲೆ ಬೆದರಿಕೆ ಬಂದಿದೆ.

haladySrini

ಮೂಲಗಳ ಪ್ರಕಾರ ಸೋಮವಾರ ಮಧ್ಯಾಹ್ನ ಆಸ್ಟ್ರೇಲಿಯಾದಿಂದ ಭೂಗತ ಜಗತ್ತಿನ ರವಿ ಪೂಜಾರಿ ಹೆಸರಿನಲ್ಲಿ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿಯವರ ಮೊಬೈಲಿಗೆ ಕರೆ ಮಾಡಿ ಜಾಗದ ವಿಷಯದಲ್ಲಿ ಮಾತನಾಡಿ ಸುಮಾರು 10 ಕೋಟಿ ಹಣದ ಬೇಡಿಕೆ ಇಟ್ಟಿದ್ದ, ಹಣ ನೀಡಲು ಶಾಸಕರು ನಿರಾ.ಕರಿಸಿದ ಹಿನ್ನಲೆಯಲ್ಲಿ ಜೀವಬೆದರಿಕೆ ಒಡ್ಡಿದ್ದ ಎನ್ನಲಾಗಿದೆ. ಕೂಡಲೇ ಶಾಸಕರು ಈ ಕುರಿತು ಶಂಕರನಾರಾಯಣ ಪೋಲಿಸ್ ಠಾಣೆಯಲ್ಲಿ  ಕೇಸು ದಾಖಲಾಗಿದೆ


Spread the love