ಕುಂದಾಪುರ: ಹೆಮ್ಮಾಡಿಯಲ್ಲಿ ಎರಡು ಅಂಗಡಿಗಳಿಗೆ ನುಗ್ಗಿ ಕಳವು

Spread the love

ಕುಂದಾಪುರ: ಹೆಮ್ಮಾಡಿ ಗ್ರಾಮದ ಕಾಂಪ್ಲೆಕ್ಸ್ ವೊಂದರ ಮಹಡಿಯಲ್ಲಿರುವ ಎರಡು ಅಂಗಡಿಗಳಿಗೆ ನಿನ್ನೆ ರಾತ್ರಿ ನುಗ್ಗಿದ ಕಳ್ಳರು ಸುಮಾರು ನಾಲ್ಕು ಲಕ್ಷ ರೂ.ವೌಲ್ಯದ ಸೊತ್ತುಗಳನ್ನು ಕಳವು ಮಾಡಿರುವುದಾಗಿ ವರದಿಯಾಗಿದೆ.

ಅಮರನಾಥ ಶೆಟ್ಟಿ ಎಂಬವರಿಗೆ ಸೇರಿದ ಅಂಬಾ ಹೋಮ್ ಅಪ್ಲೇಯನ್ಸ್ ಎಂಬ ಅಂಗಡಿಗೆ ನುಗ್ಗಿದ ಕಳ್ಳರು 2.5 ಲಕ್ಷ ರೂ.ಅಧಿಕ ವೌಲ್ಯದ ಸೊತ್ತುಗಳನ್ನು ಕಳವು ಮಾಡಿದ್ದಾರೆ. ಇನ್ನೊಂದು ಪ್ರಕರಣದಲ್ಲಿ ಕಟ್‌ಬೆಲ್ತೂರು ಗ್ರಾಮದ ಪ್ರಕಾಶ ನಾಯಕ್ ಎಂಬವರಿಗೆ ಸೇರಿದ ಸನ್‌ಶೈನ್ ಎಲೆಕ್ಟ್ರಿಕಲ್ಸ್ ಅಂಗಡಿಗೆ ನುಗ್ಗಿದ ಕಳ್ಳರು ಸುಮಾರು 1.50 ಲಕ್ಷ ರೂ. ವೌಲ್ಯದ ಸೊತ್ತುಗಳನ್ನು ಕಳವು ಮಾಡಿದ್ದಾರೆ.

ಈ ಕುರಿತು ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ


Spread the love