ಕುಂದಾಪ್ರ ಕನ್ನಡ ಸಣ್ಣ ಕಥಾ ಸ್ಪರ್ಧೆ: ನಿಂದೊಳ್ಳೆ ಕತಿಯಾಯ್ತಲ್ಲ ಮಾರಾಯ್ತಿ!

Spread the love

ಕುಂದಾಪ್ರ ಕನ್ನಡ ಸಣ್ಣ ಕಥಾ ಸ್ಪರ್ಧೆ: ನಿಂದೊಳ್ಳೆ ಕತಿಯಾಯ್ತಲ್ಲ ಮಾರಾಯ್ತಿ!

ಕುಂದಾಪುರ: ಈ ಬಾರಿ ನಡೆಯಲಿರುವ ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆಯ ಅಂಗವಾಗಿ ಬೆಂಗಳೂರಿನ ಕುಂದಾಪ್ರ ಕನ್ನಡ ಪ್ರತಿಷ್ಠಾನ (ರಿ.) ಇದರ ಪ್ರಾಯೋಜಕತ್ವದಲ್ಲಿ ‘ ನಿಂದೊಳ್ಳೆ ಕತಿಯಾಯ್ತಲ್ಲ ಮಾರಾಯ್ತಿ! ‘ ಎನ್ನುವ ಶೀರ್ಷಿಕೆಯಲ್ಲಿ ಕುಂದಾಪ್ರ ಕನ್ನಡದ ಸಣ್ಣ ಕಥಾ ಸ್ಪರ್ಧೆ ಏರ್ಪಡಿಸಲಾಗಿದೆ ಎಂದು ಪ್ರತಿಷ್ಠಾನದ ಅಧ್ಯಕ್ಷ ಬಾರ್ಕೂರು ದೀಪಕ್‌ ಕುಮಾರ ಶೆಟ್ಟಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಥಾ ಸ್ಪರ್ಧೆಯಲ್ಲಿ ಮೊದಲ ಬಹುಮಾನವಾಗಿ ₹10,000, ಎರಡನೆಯ ಬಹುಮಾನವಾಗಿ ₹7,000, ಮೂರನೆಯ ಬಹುಮಾನವಾಗಿ ₹4,000 ಹಾಗೂ 7 ಸಮಾಧಾನಕರ ಬಹುಮಾನಗಳು ನೀಡಲಾಗುವುದು. ಕಥೆ ಸಂಪೂರ್ಣವಾಗಿ ಕುಂದಾಪ್ರ ಕನ್ನಡದಲ್ಲಿಯೇ ಇರಬೇಕು. ಈ ಮೊದಲು ಕಥೆ ಯಾವುದೇ ಸಾಮಾಜಿಕ ಜಾಲತಾಣಗಳೂ ಸೇರಿದಂತೆ ಎಲ್ಲಿಯೂ ಪ್ರಕಟಗೊಂಡಿರಬಾರದು. ಒಬ್ಬರು ಒಂದೇ ಕಥೆಯನ್ನು ಕಳುಹಿಸಬೇಕು. ಕಥೆ 600 ಪದಗಳ (ಎ4 ಗಾತ್ರದ ಎರಡು ಪುಟ) ಮಿತಿಯೊಳಗಿರಬೇಕು. ಕಥೆಯ ಜೊತೆ ಸ್ಪರ್ಧಿಗಳು ತಮ್ಮ ಹೆಸರು, ಸಂಪೂರ್ಣ ಅಂಚೆ ವಿಳಾಸ ಹಾಗೂ ಸಂಪರ್ಕ ಸಂಖ್ಯೆಗಳನ್ನು ನಮೂದಿಸಬೇಕು. ಜುಲೈ20 ರ ಮೊದಲು ಸ್ವರ್ಣರೇಖಾ ಇಂಟೀರಿಯರ್ಸ್, ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನ ರಸ್ತೆ. ಕುಂಭಾಶಿ -576257 ಕುಂದಾಪುರ ತಾಲ್ಲೂಕು ಅಥವಾ ವಾಟ್ಸ್ ಆ್ಯಪ್ ದೂರವಾಣಿ ಸಂಖ್ಯೆ 7204829938 ಇದಕ್ಕೆ ಕಥೆಗಳನ್ನು ಕಳುಹಿಸುವಂತೆ ಕೋರಲಾಗಿದೆ.

ಆ.4 ರಂದು ಸಂಜೆ 5 ಗಂಟೆಗೆ ವಿಜೇತರ ಹೆಸರನ್ನು ಘೋಷಿಸಲಾಗುವುದು. ಸ್ಪರ್ಧೆಗೆ ಬಂದಿರುವ ಕಥೆಗಳಲ್ಲಿ ‘ಓದಬಹುದಾದ’ ಕಥೆಗಳನ್ನು ಸಂಕಲಿಸಿ ಪ್ರಕಟಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.


Spread the love
Subscribe
Notify of

0 Comments
Inline Feedbacks
View all comments