ಕುತ್ತಾರು ದೆಕ್ಕಾಡು ಕೊರಗಜ್ಜನ ಆದಿಸ್ಥಳಕ್ಕೆ ನಟ ದರ್ಶನ್‌ ಭೇಟಿ

Spread the love

ಕುತ್ತಾರು ದೆಕ್ಕಾಡು ಕೊರಗಜ್ಜನ ಆದಿಸ್ಥಳಕ್ಕೆ ನಟ ದರ್ಶನ್‌ ಭೇಟಿ

ಉಳ್ಳಾಲ : ಕುತ್ತಾರು ದೆಕ್ಕಾಡುವಿನ ಕೊರಗಜ್ಜ ಆದಿತಳಕ್ಕೆ ಡಿ ಬಾಸ್‌ ದರ್ಶನ್‌ ಸಹಿತ ಹಲವು ನಟರು ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು. ಈ ವೇಳೆ ಮಂಡ್ಯ ಸಂಸದೆ ಸುಮಲತಾ ಪರ ದರ್ಶನ್ ಪ್ರಚಾರ ವಿಚಾರದಲ್ಲಿ ಹೆತ್ತ ತಾಯಿನ ಎಂದಾದರೂ ಬಿಟ್ಟು ಕೊಡಕಾಗುತ್ತಾ? ಎಂದಿದ್ದಾರೆ.

ಮೊನ್ನೆವರೆಗೂ ಎಲ್ಲಾ ಸುಮಲತಾ ಅಮ್ಮನ ಜೊತೆ ಇದ್ದೆ , ಈಗ ಅವರ ಕೈ ಬಿಟ್ರೆ ಆಗುತ್ತಾ ಸರ್ , ನಿಮ್ಮ ಮನೇಲಿ ನಿಮ್ಮ ತಾಯಿನ ಬಿಟ್ ಬಿಡ್ತೀರಾ , ಸುಮಲತಾ ಅಮ್ಮ ಅಮ್ಮನೇ ಸಾರ್ ಎಂದಿದ್ದಾರೆ.

ಮಂಗಳೂರಿಗೆ ಸುಮಾರು ಸಲ ಬಂದಿದ್ದೆ ಆದರೆ ಕುತ್ತಾರಿಗೆ ಬರೋದಕ್ಕೆ ಆಗ್ಲಿಲ್ಲ. ಕುತ್ತಾರು ಏನು ಡಿಫರೆನ್ಸ್ ಇಲ್ಲ ಎಲ್ಲಾ ದೇವಸ್ಥಾನ ಒಂದೇ. ಎಲ್ರು ಹೇಳ್ತಾಯಿದ್ರು ಈ ಕ್ಷೇತ್ರದ ಬಗ್ಗೆ ಹಾಗಾಗಿ ಭೇಟಿ ನೀಡಿ ಪ್ರಾರ್ಥಿಸಿದ್ದೆನೆ

ನಾನು ಭೇಟಿ ನೀಡಿದಕ್ಕೆ ಯಾವುದೇ XYZ ಕಾರಣ ಇಲ್ಲ ಎಂದ ಅವರು ನಾನು ಏನು ಪ್ರಾರ್ಥನೆ ಮಾಡ್ದೆ ಅಂತಾ ಹೇಳಿದ್ರೆ ನೀವು ಮಾಡಿಕೊಡ್ತೀರಾ ಎಂದು ಗರಂ ಆದರು.

ಈ ಸಂದರ್ಭ ಹಾಸ್ಯ ನಟ ಚಿಕ್ಕಣ್ಣ, ಪ್ರಶಾಂತ್‌ ಮಾರ್ಲ, ಮಹಾಬಲ ಶೆಟ್ಟಿ , ವಿದ್ಯಾಚರಣ್‌ ಶೆಟ್ಟಿ, ದೇವಿಪ್ರಸಾದ್‌ ಶೆಟ್ಟಿ, ಪ್ರೀತಮ್‌ ಶೆಟ್ಟಿ ಹಾಗೂ ಕೊರಗಜ್ಜ ಆದಿಸ್ಥಳ ದೆಕ್ಕಾಡುವಿನ ಟ್ರಸ್ಟೀಗಳು ಉಪಸ್ಥಿತರಿದ್ದರು.

ಭಾನುವಾರ ಆಗಿದ್ದರಿಂದಾಗಿ ಹೆಚ್ಚಿನ ಸಂಖ್ಯೆಯಲ್ಲಿ ಅಜ್ಜನ ಸಂದರ್ಶನಕ್ಕೆ ಭಕ್ತರು ಆಗಮಿಸಿದ್ದರು. ಡಿಬಾಸ್‌ ಭೇಟಿಯನ್ನು ಗಮನಿಸಿ ಅವರ ಜೊತೆಗೆ ಸೆಲ್ಫೀ ಹಾಗೂ ಭಾವಚಿತ್ರ ತೆಗೆಯಲು ಮುಗಿಬಿದ್ದರು. ಆದರೆ ಜತೆಗಿದ್ದ ಬಾಡಿಗಾರ್ಡ್‌ ಗಳು ಅಭಿಮಾನಿಗಳ ಕಾಲರ್‌ ಹಿಡಿದು ತಳ್ಳಿದ್ದು , ಸಾರ್ವಜನಿಕ ವಲಯದಲ್ಲಿ ಮುಜುಗರ ಉಂಟು ಮಾಡಿಸಿತು.


Spread the love