ಕುಮಾರಸ್ವಾಮಿಯವರಲ್ಲಿ ದೀಪಕ್ ಹತ್ಯೆ ಕುರಿತು ಮಾಹಿತಿ ಇದ್ದಲ್ಲಿ ಪೋಲಿಸರಿಗೆ ನೀಡಲಿ; ಖಾದರ್ 

Spread the love

ಕುಮಾರಸ್ವಾಮಿಯವರಲ್ಲಿ ದೀಪಕ್ ಹತ್ಯೆ ಕುರಿತು ಮಾಹಿತಿ ಇದ್ದಲ್ಲಿ ಪೋಲಿಸರಿಗೆ ನೀಡಲಿ; ಖಾದರ್ 

ಮಂಗಳೂರು: ಕಾಟಿಪಳ್ಳದ ದೀಪಕ್ ರಾವ್ ಹತ್ಯೆಗೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿಯಲ್ಲಿ ಬಳಿ ಯಾವುದೇ ಮಾಹಿತಿ ಇದ್ದಲ್ಲಿ ಹೇಳಿಕೆ ನೀಡುವ ಬದಲು ಅದನ್ನು ಪೋಲಿಸರಿಗೆ ನೀಡಲಿ ಎಂದು ರಾಜ್ಯದ ಆಹಾರ ನಾಗರಿಕ ಸರಬರಾಜು ಖಾತೆ ಸಚಿವ ಯು ಟಿ ಖಾದರ್ ಹೇಳಿದರು.

ಮಂಗಳವಾರ ಸರ್ಕ್ಯೂಟ್ ಹೌಸ್ನಲ್ಲಿ ಸುದ್ದಿಗೋಷ್ಠಿಯಲ್ಲಿ ಪತ್ರಕರ್ತರೊಂದಿಗೆ ಮಾತನಾಡಿ, ಘಟನೆಯ ಕುರಿತು ಪೋಲಿಸರು ತನಿಖೆ ನಡೆಸುತ್ತಿದ್ದು, ಕುಮಾರ ಸ್ವಾಮಿಯವರು ಬಿಜೆಪಿ ಕಾರ್ಪೊರೇಟರ್ ಅವರು ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂದು ಹೇಳಿಕೆ ನೀಡಿದ್ದು ಅಂತಹ ದಾಖಲೆಗಳಿದ್ದಲ್ಲಿ ಪೋಲಿಸರಿಗೆ ನೀಡಲಿ ಎಂದರು.

ಯಾವುದೇ ವ್ಯಕ್ತಿ ಸತ್ತಾಗ ಅದನ್ನು ರಾಜಕೀಯಕ್ಕಾಗಿ ಬಳಸದೆ ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಕೈಜೋಡಿಸಬೇಕು ಮಾಹಿತಿಗಳಿದ್ದಲ್ಲಿ ಪೋಲಿಸರಿಗೆ ನೀಡಲಿ ಇದರಿಂದ ಪೋಲಿಸರಿಗೆ ಸಹಕಾರಿಯಾಗುತ್ತದೆ ಎಂದರು.


Spread the love