ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿರುತ್ತಿದ್ದರೆ ಕೊರೋನಾ ಹತೋಟಿಗೆ ತರುತ್ತಿದ್ದರು – ಯೋಗಿಶ್ ವಿ ಶೆಟ್ಟಿ

Spread the love

ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿರುತ್ತಿದ್ದರೆ ಕೊರೋನಾ ಹತೋಟಿಗೆ ತರುತ್ತಿದ್ದರು – ಯೋಗಿಶ್ ವಿ ಶೆಟ್ಟಿ

ಉಡುಪಿ: ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿಯವರು ರಾಜ್ಯದ ಜೆಡಿಎಸ್ ಕಾರ್ಯಕರ್ತರೊಂದಿಗೆ “ವಿಡಿಯೋ ಕಾನ್ಫರೆನ್ಸ್” ನ್ನು ಬುಧವಾರ ನಡೆಸಿದರು.

ಉಡುಪಿ ಜಿಲ್ಲಾ ಜೆಡಿಎಸ್ ಪಕ್ಷದ ಕಚೇರಿ,”ಕುಮಾರ ಕೃಪ”ದಲ್ಲಿ ಕಾರ್ಯಕರ್ತರು, ನಾಯಕರು, ವಿಡಿಯೋ ಕಾನ್ಫರೆನ್ಸ್ ನಲ್ಲಿ ಭಾಗವಹಿಸಿದರು.

ಉಡುಪಿ ಜಿಲ್ಲಾ ಜೆಡಿಎಸ್ ಜಿಲ್ಲಾಧ್ಯಕ್ಷರಾದ ಯೋಗೇಶ್ ವಿ ಶೆಟ್ಟಿಯವರು ಮಾಧ್ಯಮದೊಂದಿಗೆ ಮಾತನಾಡುತ್ತಾ 2018ರ ವಿಧಾನಸಭಾ ಫಲಿತಾಂಶ ಬಂದ ನಂತರ ಕಾಂಗ್ರೆಸ್ ಪಕ್ಷದ ಕೆಲವು ನಾಯಕರು ಎಚ್ ಡಿ ದೇವೇಗೌಡರು ಮತ್ತು ಕುಮಾರಸ್ವಾಮಿಯವರ ಮನೆ ಬಾಗಿಲಿಗೆ ಬಂದು ಕಾಂಗ್ರೆಸ್ ಬೇಷರತ್ ಬೆಂಬಲವನ್ನು ಘೋಷಿಸಿ ಕುಮಾರಸ್ವಾಮಿಯೇ ರಾಜ್ಯದ ಮುಖ್ಯಮಂತ್ರಿಯಾಗಬೇಕೆಂದು ಪ್ರಸ್ತಾಪವನ್ನು ಮಾಡಿ ಕುಮಾರಸ್ವಾಮಿಯವರು ರಾಜ್ಯದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು.

ಕುಮಾರಸ್ವಾಮಿಯವರು ಮುಖ್ಯಮಂತ್ರಿ ಅಧಿಕಾರ ಚುಕ್ಕಾಣಿ ಹಿಡಿದ ದಿನದಿಂದ ಬಿಜೆಪಿಯವರು ಅಧಿಕಾರದ ದಾಹದಿಂದ,ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸುವ ಪ್ರಯತ್ನವನ್ನು ಮಾಡುತ್ತಾ ಅಪಪ್ರಚಾರ,ಕುತಂತ್ರದಿಂದ 2019 ಜುಲೈ 22 ರಂದು,ಕುಮಾರಸ್ವಾಮಿಯವರನ್ನು ಅಧಿಕಾರದಿಂದ ಕೆಳಗಿಳಿಸಿದರು, ಇದು ನಮ್ಮ ರಾಜ್ಯಕ್ಕೆ ಕರಾಳ ದಿನವೆಂದು ನಾನು ಹೇಳಲಿಕ್ಕೆ ಇಚ್ಚೆ ಪಡುತ್ತೇನೆ.

ಕುತಂತ್ರದಿಂದ ಅಧಿಕಾರಕ್ಕೆ ಬಂದ ಬಿಜೆಪಿಯವರ ಸಾಧನೆ ಏನು? ಬರ ಪರಿಹಾರ,ನೆರೆ ಪರಿಹಾರ, ಸಿಗದೆ ರಾಜ್ಯದ ಜನ ಗೋಗರೆಯುತ್ತಿದ್ದಾರೆ.

ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾದ ಸಂದರ್ಭದಲ್ಲಿ ಹಲವಾರು ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ತಂದು “ಬಡವರ ಬಂಧು”ಎಂದು ಕರೆಸಿಕೊಂಡಿರುತ್ತಾರೆ.

ರೈತರ ಸಾಲ ಮನ್ನಾ 25000ಕೋಟಿ ರೂಪಾಯಿ 40ಲಕ್ಷ ಕುಟುಂಬಗಳು ಪಡೆಯುವಂತಾಗಿರುತ್ತದೆ. ಆಧುನಿಕ ಕೃಷಿ ಪದ್ಧತಿಗೆ ಆದ್ಯತೆ,ಕಾಂಪೀಟ್ ವಿತ್ ಚೀನಾ ಕಲ್ಪನೆಯಲ್ಲಿ ಜಿಲ್ಲಾ ಮಟ್ಟದಲ್ಲಿ ಸಣ್ಣ ಕೈಗಾರಿಕೆಗಳ ಮೂಲಕ ಗ್ರಾಮೀಣ ನಿರುದ್ಯೋಗಿಗಳಿಗೆ ಉದ್ಯೋಗ ಕಲ್ಪಿಸಲು ಕೌಶಲ್ಯ ಪೂರ್ಣ ಯೋಜನೆ.ಶಿಕ್ಷಣ ಮತ್ತು ಆರೋಗ್ಯ ಇಲಾಖೆಯ ಬಗ್ಗೆ ತೆಗೆದುಕೊಂಡ ನಿರ್ಣಯಗಳು, ಬಡವರ ಬಂಧು ಯೋಜನೆ, ಬೀದಿ ವ್ಯಾಪಾರಿ ಮತ್ತು ಸಣ್ಣ ವ್ಯಾಪಾರಿಗಳಿಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ ಯೋಜನೆ,ಮುಖ್ಯಮಂತ್ರಿ ಮಾತ್ರ ಶ್ರೀ ಯೋಜನೆ, ಅಂಗನವಾಡಿ, ಆಶಾ ಕಾರ್ಯಕರ್ತರ ಮಾಸಾಶನ ಹೆಚ್ಚಳ, ಹಿರಿಯ ನಾಗರಿಕರಿಗೆ,ವಿಕಲಚೇತನರ ವಿಧವೆಯರ ಮಾಸ ಚನ ಹೆಚ್ಚಳ,ಮತ್ತು ಮುಂದಿನ ವರ್ಷಗಳಲ್ಲಿ ಹೆಚ್ಚು ಸುವ ಭರವಸೆ, ಬಾಣಂತಿಯರಿಗೆ ವಿಶೇಷ ಸವಲತ್ತುಗಳು,ಸಾವಯವ ಕೃಷಿಗೆ ಉತ್ತೇಜನ, ನೀರಾವರಿ ವ್ಯವಸ್ಥೆಗಳಿಗೆ ವಿಶೇಷ ಅನುದಾನ, ಕೆರೆಗಳ ಅಭಿವೃದ್ಧಿ , 276ಕರ್ನಾಟಕ ಪಬ್ಲಿಕ್ ಶಾಲೆಗಳಲ್ಲಿ ಜಾರಿಗೆ ಬರುವಂತೆ ಪೂರ್ವ ಪ್ರಾಥಮಿಕ ಶಿಕ್ಷಣ ಮತ್ತು ಇನ್ನಿತರ ಹಲವಾರು ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ತಂದ ಕೀರ್ತಿ ಕುಮಾರಸ್ವಾಮಿಯವರಿಗೆ ಸಲ್ಲುತ್ತದೆ.

ಈಗಿನ ಸರಕಾರವೂ covid-19ನ್ನು ಹತೋಟಿಯಲ್ಲಿಡುವಲ್ಲಿ ಸಂಪೂರ್ಣ ವಿಫಲರಾಗಿದೆ. ಕೇಂದ್ರ ಮತ್ತು ರಾಜ್ಯದ ಪ್ಯಾಕೇಜು ಜನರಿಗೆ ಸರಿಯಾಗಿ ಸಿಗಲೇ ಇಲ್ಲ.ಈ ಸಮಯದಲ್ಲಿ ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಿರುತ್ತಿದ್ದರೆ ಕೋರೋನ ವನ್ನು ಕಂಟ್ರೋಲ್ ಮಾಡುವಲ್ಲಿ ಸಫಲರಾಗಬಹುದಿತ್ತು.

ಕುಮಾರಸ್ವಾಮಿಯವರನ್ನು ಅಧಿಕಾರದಿಂದ ಕೆಳಗಿಳಿಸುವ ಹುನ್ನಾರದಲ್ಲಿ ರಾಜ್ಯದ ಸ್ಥಳೀಯ ಕಾಂಗ್ರೆಸ್ ನಾಯಕರ ಕುತಂತ್ರ ಅಡಗಿದೆ ಎಂದು ಜನರಿಗೆ ತಿಳಿದಿರುತ್ತದೆ. ಏನೇ ಆಗಲಿ ಕುಮಾರಸ್ವಾಮಿಯವರು ಇನ್ನೊಮ್ಮೆ ರಾಜ್ಯದ ಮುಖ್ಯಮಂತ್ರಿಯಾಗುತ್ತಾರೆ. ರಾಜ್ಯದ ಜನರು ಈಗಾಗಲೇ ಯಾರು ಹಿತವರು ಎಂದು ಮನಗಂಡಿದ್ದಾರೆ.

ಕುಮಾರಸ್ವಾಮಿ ಅಭಿಮಾನಿಗಳು ಜಾತ್ಯತೀತ ಮನೋಭಾವದ ಎಲ್ಲ ಯುವಕರು ಹಿರಿಯರು ಪ್ರಾದೇಶಿಕ ಪಕ್ಷವಾದ ಜೆಡಿಎಸ್ ನ್ನು ಉಡುಪಿ ಜಿಲ್ಲೆಯಲ್ಲಿ ಬೆಳೆಸುವಲ್ಲಿ ಕೈಜೋಡಿಸಬೇಕೆಂದು, ಯುವಕರು ನಮ್ಮ ಪಕ್ಷಕ್ಕೆ ಸದಸ್ಯರಾಗ ಬೇಕಾಗಿ ಮನವಿ ಮಾಡಿದರು.

ಈ ಸಂದರ್ಭ ಕಾರ್ಯಾಧ್ಯಕ್ಷರಾದ ವಾಸುದೇವರಾವ್, ಪಕ್ಷದ ನಾಯಕರಾದ ,ಜಯಕುಮಾರ್ ಪರ್ಕಳ, ಗಂಗಾಧರ ಬಿರ್ತಿ, ಶೇಖರ್ ಕೋಟ್ಯಾನ್ ಜಯರಾಮ ಆಚಾರ್ಯ,ಪ್ರಕಾಶ್ ಶೆಟ್ಟಿ ಬೆಳ್ಳಂಪಳ್ಳಿ, ರವಿರಾಜ್ ಸಾಲಿಯಾನ್, ಉದಯ ಶೆಟ್ಟಿ ,ಹರಿಣಿ ಕೋಟ್ಯಾನ್, ಸನವರ್,ಜಯಕರ ಶೆಟ್ಟಿಗಾರ್,ರಂಗ ಕೋಟ್ಯಾನ್, ಮಮತಾ, ಮತ್ತಿತರ ಹಲವಾರು ಪಕ್ಷ ಕಾರ್ಯಕರ್ತರು ಭಾಗವಹಿಸಿದ್ದರು.


Spread the love