ಕುಮಾರಸ್ವಾಮಿ ಸರಕಾರದ ಜನಪರ ಯೋಜನೆ ಬಡವರಿಗೆ ತಲುಪುವತ್ತ ಯುವ ಜೆಡಿಎಸ್ ಶ್ರಮ; ಅಕ್ಷಿತ್ ಸುವರ್ಣ

Spread the love

ಕುಮಾರಸ್ವಾಮಿ ಸರಕಾರದ ಜನಪರ ಯೋಜನೆ ಬಡವರಿಗೆ ತಲುಪುವತ್ತ ಯುವ ಜೆಡಿಎಸ್ ಶ್ರಮ; ಅಕ್ಷಿತ್ ಸುವರ್ಣ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಯುವ ಜನತಾ ದಳ ಕಾರ್ಯಕರ್ತರ ಸಭೆಯು ಯುವ ಜನತಾದಳ ಜಿಲ್ಲಾಧ್ಯಕ್ಷ ಅಕ್ಷಿತ್ ಸುವರ್ಣ ಅವರ ನೇತೃತ್ವದಲ್ಲಿ ಜಿಲ್ಲಾ ಜೆಡಿಎಸ್ ಕಚೇರಿಯಲ್ಲಿ ನಡೆಯಿತು.

ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅಕ್ಷಿತ್ ಸುವರ್ಣ ಅವರು ರಾಜ್ಯದಲ್ಲಿ ಜನತಾದಳ ಮತ್ತು ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬಂದಿದ್ದು ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರ ಜನಪರ ಯೋಜನೆಗಳು ಕೆಳ ಹಂತದ ಜನರಿಗೆ ತಲುಪುವ ನಿಟ್ಟಿನಲ್ಲಿ ನಮ್ಮ ಯುವ ಜನತಾದಳದ ಕಾರ್ಯಕರ್ತರು ಶ್ರಮವಹಿಸಬೇಕು.ನಮ್ಮ ದಕ್ಷಿಣ ಕನ್ನಡ ಜಿಲ್ಲೆಗೆ ಎರಡು ವಿಧಾನಸಭಾ ಸದಸ್ಯರು ಇರುವುದರಿಂದ ನಮ್ಮ ಹಾಗೂ ಜನರ ಕೆಲಸ ಕೆಲಸ ಕಾರ್ಯಗಳು ಸುಲಲಿತವಾಗಿ ನಡೆಯಲಿದೆ ಎಂದು ತಿಳಿಸಿದರು.

ಪ್ರಾಸ್ತಾವಿಕವಾಗಿ ಜಿಲ್ಲಾ ಯುವ ಮಹಾ ಪ್ರಧಾನ ಕಾರ್ಯದರ್ಶಿ ಮಧುಸೂದನ ಗೌಡ ಮಾತನಾಡಿದರು

ಇದೇ ಸಂದರ್ಭದಲ್ಲಿ ಜಿಲ್ಲಾ ಉಪಾಧ್ಯಕ್ಷ ಮಹಮ್ಮದ್ ಆಸೀಫ್.ಮಂಗಳೂರು ದಕ್ಷಿಣ ಕ್ಷೇತ್ರದ ಅಧ್ಯಕ್ಷ ಮಹಮ್ಮದ್ ರಜಾಕ್. ಉತ್ತರ ಕ್ಷೇತ್ರದ ಅಧ್ಯಕ್ಷ ರತೀಶ್ ಕರ್ಕೇರ. ಪುತ್ತೂರು ಕ್ಷೇತ್ರಾಧ್ಯಕ್ಷ ಶಿವು ಸಾಲಿಯಾನ್.ನಗರಾಧ್ಯಕ್ಷ ಲಿಖಿತ್ ರಾಜ್, ರಾಜ್ಯ ಸಂಘಟನಾ ಕಾರ್ಯದರ್ಶಿ ಪೈಸಲ್. ವಿದ್ಯಾರ್ಥಿ ಅಧ್ಯಕ್ಷ ಸಿನಾನ್. ಜಿಲ್ಲಾ ಕಾರ್ಯದರ್ಶಿ ಭರತ್ ಹೆಗ್ಡೆ. ನವಾಜ್ ಕುಪ್ಪೆ ಪದವು. ಕಲಂದರ್. ಕುಲ್ದೀಪ್. ಸೈಯ್ಯದ್. ಟಿಪ್ಪು. ಷರೀಫ್. ತೇಜಸ್ ನಾಯಕ್. ಅನೇಕ ನಾಯಕರುಗಳು ಭಾಗವಹಿಸಿದ್ದರು.


Spread the love