ಕೃಷಿ ವಿಜ್ಞಾನ ಕೇಂದ್ರದಲ್ಲಿ ಅಣಬೆ ಬೇಸಾಯ ತರಬೇತಿ 

Spread the love

ಕೃಷಿ ವಿಜ್ಞಾನ ಕೇಂದ್ರದಲ್ಲಿ ಅಣಬೆ ಬೇಸಾಯ ತರಬೇತಿ 

ಮಂಗಳೂರು : ರೈತರು ಕೃಷಿ ಜೊತೆಗೆ ಉಪ ಕಸುಬುಗಳನ್ನು ಮಾಡುವುದರ ಮೂಲಕ ಕಡಿಮೆ ಖರ್ಚಿನಲ್ಲಿ ಹೆಚ್ಚು ಆದಾಯಗಳಿಸಬಹುದು ಎಂದು ಕರ್ನಾಟಕ ಪಶು ಸಂಗೋಪನೆ ಇಲಾಖೆಯ ಉಪನಿರ್ದೇಶಕ ಡಾ.ಜಯರಾಜ್ ಹೇಳಿದರು.

ಮಂಗಳವಾರ ಭಾರತೀಯ ಕೃಷಿ ಅನುಸಂಧಾನ ಪರಿಷತ್‍ನ ಅಂಗ ಸಂಸ್ಥೆಯಾದ ಕೃಷಿ ವಿಜ್ಞಾನ ಕೇಂದ್ರ ಕಂಕನಾಡಿಯಲ್ಲಿ ಉದ್ಯಮಶೀಲತೆ ಅಭಿವೃದ್ದಿ ಕಾರ್ಯಕ್ರಮದ ಅಡಿಯಲ್ಲಿ “ಅಣಬೆ ಕೃಷಿ” ಕುರಿತು ತರಬೇತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಪಶು ಸಂಗೋಪನೆ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಈಶ್ವರ ಭಟ್ ರೈತರು ವಿಜ್ಞಾನಿಗಳಿಂದ ವೈಜ್ಞಾನಿಕ ಮಾಹಿತಿ ಪಡೆದು ಕೃಷಿ ಮಾಡುವುದರ ಮುಖಾಂತರ ಸುಸ್ಠಿರ ಆದಾಯಗಳಿಸಬಹುದು ಎಂದು ಕರೆ ನೀಡಿದರು.

ಅಣಬೆಗಳು ಶಿಲೀಂದ್ರ ವರ್ಗಕ್ಕೆ ಸೇರಿದ ಸೂಕ್ಷ್ಮ ಜೀವಾಣುಗಳು. ಭಾರತದಲ್ಲಿ ಹಲವಾರು ವಿಧವಾದ ಅಣಬೆಗಳು ಸ್ವಾಭಾವಿಕವಾಗಿ ಬೆಳೆಯುತ್ತವೆ. ಅವುಗಳಲ್ಲಿ ಕೆಲವು ವಿಷಪೂರಿತವಾದವು ಮತ್ತು ಕೆಲವು ಅಣಬೆಗಳು ತಿನ್ನಲು ಯೋಗ್ಯವಾಗಿವೆ. ತಿನ್ನುವ ಅಣಬೆಗಳು ಇತರೆ ತರಕಾರಿಗಳಿಗೆ ಹೋಲಿಸಿದರೆ ಹೆಚ್ಚು ಪೌಷ್ತ್ಟಿಕಾಂಶಗಳನ್ನು ಹೊಂದಿರುತ್ತವೆ.

ಅಣಬೆಗಳಲ್ಲಿ ಹೇರಳವಾಗಿ ಪೆÇ್ರೀಟೀನ್, ಜೀವಸತ್ವಗಳು, ಹೆಚ್ಚು ಸಾರಜನಕ, ಮುಖ್ಯವಾದ ಅನ್ನಾಂಗಗಳು ಮತ್ತು ಖನಿಜಗಳು ಇವೆ. ತಿನ್ನುವ ಅಣಬೆಗಳಲ್ಲಿ ಸಕ್ಕರೆ ಮತ್ತು ಕಬ್ಬಿಣ ಅಂಶ ಕಡಿಮೆ ಇರುವುದರಿಂದ ಮಧುಮೇಹ ರೋಗಿಗಳಿಗೆ ಮತ್ತು ಹೃದಯ ರೋಗಿಗಳಿಗೆ ಅಣಬೆ ಒಂದು ಒಳ್ಳೆಯ ಆಹಾರ. ಅಣಬೆ ಬೇಸಾಯವು ಅಲ್ಪಾವಧಿ ಬೆಳೆ ಮತ್ತು ಕೊಠಡಿಯೊಳಗೆ ಬೆಳೆಯುವ ಬೆಳೆ. ಇವುಗಳನ್ನು ಸ್ವಂತಕ್ಕೆ ಹವ್ಯಾಸವಾಗಿ ಅಥವಾ ವಾಣಿಜ್ಯ ಬೆಳೆಯಾಗಿ ಬೆಳೆಯಬಹುದೆಂದು ಕೃಷಿ ವಿಜ್ಞಾನ ಕೇಂದ್ರದ ತೋಟಗಾರಿಕೆ ವಿಜ್ಞಾನಿಯಾದ ಡಾ. ರಶ್ಮಿ ಆರ್. ರವರು ಪ್ರಾತ್ಯಕ್ಷಿಕೆಯ ಮೂಲಕ ಅಣಬೆ ಬೇಸಾಯ ಕೈಗೊಳ್ಳುವ ವಿಧಾನ ತಿಳಿಸಿಕೊಟ್ಟರು.

ಕಾರ್ಯಕ್ರಮದಲ್ಲಿ ರೈತರು, ರೈತ ಮಹಿಳೆಯರು ಹಾಗೂ ಕೃಷಿ ವಿಜ್ಞಾನ ಕೇಂದ್ರದ ಡಾ. ಎನ್. ಚೇತನ್, ಡಾ. ಕೇದಾರನಾಥ್, ಡಾ. ಶೋಧನ್ ಕೆ. ವಿ. ಹಾಗೂ ಇತರೆ ಸಿಬ್ಬಂದಿಗಳು ಉಪಸ್ಥಿತರಿದ್ದರು.


Spread the love